'ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲ' ಸಮೀಕ್ಷೆದಾರನ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಚಿನ್ನದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗರಂ!

Published : Oct 04, 2025, 01:16 PM IST
DCM DK Shivakumar Reacts to Social Survey

ಸಾರಾಂಶ

DCM DK Shivakumar Reacts to Social Survey Questions ಬೆಂಗಳೂರಿನಲ್ಲಿ ಆರಂಭವಾದ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ವೇಳೆ, ಅಧಿಕಾರಿಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು.

ಬೆಂಗಳೂರು (ಅ.4): ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಶುರುವಾಗಿದೆ. ಆ ನಿಟ್ಟಿನಲ್ಲಿ ಸಮೀಕ್ಷೆ ಮಾಡುವ ವ್ಯಕ್ತಿಗಳು ಶನಿವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಮನೆಗೆ ತೆರಳಿದ್ದರು. ಈ ವೇಳೆ ಕೆಲವು ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಉತ್ತರಿಸಿದ ಡಿಸಿಎಂ, ಇನ್ನೂ ಕೆಲವು ಪ್ರಶ್ನೆಗಳಿಗೆ ಗರಂ ಆದರು. ಶೈಕ್ಷಣಿಕ ವಿವರ, ಧರ್ಮ, ಜಾತಿ, ಉದ್ಯೋಗ ಹೀಗೆ ಹಲವು ಪ್ರಶ್ನೆಗಳನ್ನು ಡಿಸಿಎಂಗೆ ಶಿಕ್ಷಕರು ಕೇಳಿದ್ದಾರ. ಆ ಬಳಿಕ ಡಿಕೆ ಶಿವಕುಮಾರ್‌ ಅವರ ಪತ್ನಿ ಉಷಾ ಶಿವಕುಮಾರ್‌ಗೂ ಪ್ರಶ್ನೆ ಮಾಡಿದರು. ಈ ವೇಳೆ ಚಿನ್ನದ ಬಗ್ಗೆ ಕೇಳಿದ ಪ್ರಶ್ನೆಗೆ ಡಿಕೆಶಿ ಕೊಂಚ ಗರಂ ಆದರು.

ಡಿಕೆಶಿ ಅವರಿಗೆ ಸಮೀಕ್ಷೆ ಮಾಡುವವರು ಕೇಳಿದ ಪ್ರಶ್ನೆಗಳು

ಜನ್ಮ ಜಿಲ್ಲೆ ಬೆಂಗಳೂರು ದಕ್ಷಿಣ ಎಂದ ಡಿಕೆಶಿ, ಎಂಕಾಮ್‌ ಶಿಕ್ಷಣ ಪಡೆದಿದ್ದೇನೆ ಎಂದರು. ಉದ್ಯೋಗದ ಬಗ್ಗೆ ಪ್ರಶ್ನೆಗೆ, 'ಕೃಷಿ ಎಂದು ಹಾಕಿ' ಎಂದರು. ಧರ್ಮ: ಹಿಂದೂ, ಜಾತಿ: ಒಕ್ಕಲಿಗ ಗೌಡ ಒಕ್ಕಲಿಗ(154), ಜಾತಿ ಪ್ರಯಾಣ ಪತ್ರ ಶಾಲೆಯಲ್ಲಿ ಪಡೆದಿದ್ದೇನೆ. 31ರ ವಯಸ್ಸಿನಲ್ಲಿ ಮದುವೆಯಾಗಿದ್ದೇನೆ . ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ‌ ಎಂದು ಪ್ರಶ್ನೆಗಳಿಗೆ ಉತ್ತರ ನೀಡಿದರು. ಮೀಸಲಾತಿ ಸೌಲಭ್ಯವನ್ನು ಪಡೆದಿಲ್ಲ, ಉದ್ಯೋಗದ ಪ್ರಶ್ನೆಗೆ ಪಬ್ಲಿಕ್ ಸರ್ವಂಟ್,ಸ್ವ ಉದ್ಯೋಗ ಎಂದು ಬರೆದುಕೊಳ್ಳಿ ಎಂದರು.

ಕುಲ ಕಸುಬು ಕೃಷಿ ಸಾಗುವಳಿ ಎಂದ ಅವರು, ಆದಾಯದ ಬಗ್ಗೆ ಪ್ರಶ್ನೆ ಬಂದಾಗ ದೊಡ್ಡ ಸ್ಲಾಬ್ ಹಾಕು ಎಂದು ಹೇಳಿದರು. ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆಗೆ 'ಮಂತ್ರಿ ಹಾಕು' ಎಂದು ಹೇಳಿದರು. ಈ ವೇಳೆ ಅಂಥ ಆಯ್ಕೆ ಇಲ್ಲ ಎಂದಿದ್ದಕ್ಕೆ, 'ಮಾಜಿ ಜಿಲ್ಲಾ ಪಂಚಾಯತ್ ಮೆಂಬರ್' ಎಂದು ಹಾಕುವಂತೆ ತಿಳಿಸಿದರು. ಮಾರ್ಕೆಟಿಂಗ್‌ ಸೊಸೈಟಿ, ಬೇಕಾದಷ್ಟು ನಿಗಮ ಮಂಡಳಿಗಿದ್ದೇನಲ್ಲ ಎಂದು ಡಿಕೆಶಿ ಹೇಳಿದರು.

ಸಮೀಕ್ಷೆದಾರನಿಗೆ ಕೆಲವು ಪ್ರಶ್ನೆಗಳನ್ನು ಡಿಕೆಶಿ ಕೇಳಿದಾಗ, 'ಯಾಕೆ ಹಿರಿಯ ಅಧಿಕಾರಿಯನ್ನ ಕೇಳ್ತೀಯಾ?' ನೀನೇ ಕೇಳು, ಅವರೇನು ನಿನ್ನ ಪಿಎ ನಾ? ಎಂದ ಡಿಕೆಶಿ ಗದರಿದ್ದಾರೆ. ಇಷ್ಟು ಪ್ರಶ್ನೆಗಳನ್ನು ಕೇಳಿದ ಬಳಿಕ, ಪ್ರಶ್ನೆಗಳು ತುಂಬಾ ಆದವು. ಇದೆಲ್ಲವೂ ಬಹಳ ಸಿಂಪಲ್‌ ಆಗಿ ಇರಬೇಕು ಎಂದು ಹೇಳಿದರು. ಬಳಿಕ ಉಷಾ ಶಿವಕುಮಾರ್‌ಗೆ ಪ್ರಶ್ನೆಗಳನ್ನು ಕೇಳಲಾಯಿತು.

ಮನೆ ಸಂಖ್ಯೆ 128 ಇರಬೇಕು.. ಅಂಚೆ ವಿಳಾಸ ದೊಡ್ಡಾಲಹಳ್ಳಿ. ಕುಟುಂಬ ಹೊಂದಿರುವ ಆಸ್ತಿ 50-50 ಎಕರೆ ಹಾಕಿ ಎಂದು ಡಿಕೆಶಿ ಹೇಳಿದರು. ಬ್ಯುಸಿನೆಸ್‌ಗೋಸ್ಕರ ಸಾಲ ಇದೆ. ಬ್ಯಾಂಕ್‌ನಲ್ಲಿ ಮಾಡಿದ್ದೇವೆ. 25 ಹಸು ಇದೆ, ಎತ್ತು ಇದೆ, ಕುರಿ ಮೇಕೆ ಹತ್ತತ್ತು ಹಾಕು ಎಂದು ಹೇಳಿದರು. ಹೈನುಗಾರಿಕೆ ,ಕೋಳಿ ಸಾಕಾಣಿಕೆ ,ರೇಷ್ಮೆ ಇದೆ. ವಾಣಿಜ್ಯ ಕಟ್ಟಡ 4 ಹಾಕೊಳ್ಳಿ, ತೋಟದ ಮನೆ ಇದೆ. ಇತರ ಕಟ್ಟಡ ಪಟ್ಟಿಕೊಡಬೇಕು ಅಷ್ಟೇ ಎಂದರು.

ಎರಡು ಫಾರ್ಮ್‌ ಹೌಸ್‌, ಕಂಪ್ಯೂಟರ್, ಪ್ರಿಡ್ಜ್ ಒಂದ್ 5 ಹಾಕಿಕೊಳ್ಳಿ. ಎಸಿ ಇದೆ ಎಂದು ಹೇಳಿದರು. ಫ್ಯಾಕ್ಸ್‌ ಇದ್ಯಾ ಎನ್ನುವ ಪ್ರಶ್ನೆಗೆ, 'ಇದನೆಲ್ಲಾ ಯಾಕೆ ಹಾಕಿದ್ರಿ‌.ಈಗ ಯಾರದ್ದಿರುತ್ತೆ ಫ್ಯಾಕ್ಸ್' ಎಂದು ಉತ್ತರಿಸಿದರು.

ಚಿನ್ನ ಕೇಳಿದ್ದಕ್ಕೆ ಗರಂ ಆದ ಡಿಸಿಎಂ

ಜ್ಯುವೆಲರಿ ಇದೆಯಾ ಇಲ್ಲವಾ ಎನ್ನುವ ಪ್ರಶ್ನೆಗೆ ಡಿಸಿಎಂ ಗರಂ ಆದರು. ಪರ್ಸನಲ್ ಡೀಟೆಲ್ಸ್‌ಗೆ ಹೋಗಬಾರರದು ಎಂದರು. ಆ ಮೂಲಕ ಸಮೀಕ್ಷೆಯಲ್ಲಿನ ಕೆಲ ಪ್ರಶ್ನೆಗೆ ಡಿಸಿಎಂ ಅಪಸ್ವರ ಎತ್ತಿದರು. ಹಾಲಿ ನಿವಾಸ, ನನ್ ಹೆಂಡ್ತಿ ಮನೆ ಎಂದು ತಮಾಷೆಯಾಗಿ ಉತ್ತರಿಸಿದರು.

ಇದೆಲ್ಲವೂ ಟೂ ಮಚ್‌ ಎಂದ ಡಿಕೆಶಿ

ಪ್ರಶ್ನೆಗಳೆಲ್ಲವೂ ಸಿಂಪಲ್ ಇರಬೇಕು ಟೂ ಮಚ್ ಎಂದು ಡಿಕೆಶಿ ಹೇಳಿದ್ದಾರೆ. ಕೆಲ ಪ್ರಶ್ನೆಗಳಿಗೆ ಡಿಕೆಶಿ ಅಪಸ್ವರ ಎತ್ತಿದರು. ಕೋರ್ಟ್ ವ್ಯಾಜ್ಯ ಬೇಕಾದಷ್ಟು ಇದೆ ಎಂದಿದ್ದಾರೆ. ಯಾರಿಗೂ ಕೂಡ ಇಷ್ಟೊಂದು ಪ್ರಶ್ನೆಗಳಿಗೆ ಉತ್ತರಿಸೋ ತಾಳ್ಮೆ ಇರಲ್ಲ ಎಂದರು. ಎರಡು ದಿನ ತಡವಾದರೂ ಪರವಾಗಿಲ್ಲ. ಜನರಿಗೆ ಗಾಬರಿ ಮಾಡಬೇಡಿ. ಸಮಾಧಾನದಿಂದ ಡೀಟೇಲ್ಸ್ ತೆಗೆದುಕೊಳ್ಳಿ. ಈ ಎಲ್ಲ ಡೀಟೇಲ್ಸ್ ಪಡೆದರೆ ಪ್ರಯೋಜನ ಇಲ್ಲ. ಜನಸಂಖ್ಯೆ, ಶೈಕ್ಷಣಿಕ ವಿವರ ಮೊದಲು ಕೇಳಬೇಕು ಎಂದು ಹೇಳಿದರು.

ನನ್ನ ಮನೆಯಲ್ಲೇ ಒಂದು ಗಂಟೆ ಆಯ್ತು ಎಂದ ಡಿಕೆಶಿ

ದಿನಕ್ಕೆ ಎಷ್ಟು ಮಾಡ್ತೀರಾ ಸಮೀಕ್ಷೆ? ಎನ್ನುವ ಪ್ರಶ್ನೆಗೆ, ದಿನಕ್ಕೆ 20 ಮನೆ ಟಾರ್ಗೆಟ್‌ ನೀಡಿದ್ದಾರೆ ಸರ್‌ ಎಂದು ರಾಜೇಂದ್ರ ಚೋಳನ್‌ ಹೇಳಿದರು. 'ನಮ್ ಮನೆಲೆ ಒಂದ್ ಗಂಟೆ ಆಯ್ತಲ್ಲಯ್ಯ' ಎಂದರು. 'ಸರ್ ,ನಮಗೆ ದಿನಕ್ಕೆ 20 ಮಾಡಲು ಹೇಳಿದ್ದಾರೆ. ಆದರೆ ಈ ಪ್ರಶ್ನಾವಳಿಯಲ್ಲಿ ಕಷ್ಟ ಸಾಧ್ಯ' ಎಂದರು. ಈ ವೇಳೆ ಕುರಿ ಕೋಳಿ,ಟ್ರ್ಯಾಕ್ಟರ್ ಕೇಸ್ ,ಖಾಯಿಲೆ ಬಗ್ಗೆ ಎಲ್ಲಾ ಬೇಕಾ? ಸಿಂಪಲ್ ಆಗಿ ಸಮೀಕ್ಷೆ ಮಾಡಿ. ನಮಗೇನೆ ತಾಳ್ಳೆ ಇಲ್ಲ,ಜನ ಎಲ್ಲಿ ಮಾಹಿತಿ ಕೊಡ್ತಾರೆ,ನಡಿರಿ ಅಂತಾರೆ. ಆರ್ಥಿಕ ಸಾಮಾಜಿಕ ಮಾಹಿತಿ ತೆಗೆದುಕೊಂಡರೆ ಸಾಕು ಎಂದರು.

 

PREV
Read more Articles on
click me!

Recommended Stories

Siddaramaiah: ಕಾಂಗ್ರೆಸ್ ಪರ ಮಾತ ಯಾಚನೆ ಮಾಡಲು ನಾಳೆ ಸಿಎಂ ಕೇರಳಕ್ಕೆ
Davanagere Bypoll 2026: ನಾವೊಬ್ಬರೇ ಅಲ್ಲ ಮೋದಿನೂ ಸಾಲಗಾರ ಎಂದ ಡಿಸಿಎಂ; ₹15 ಲಕ್ಷದ ಭರವಸೆ ಏನಾಯ್ತು? ಡಿಕೆಶಿ ಪ್ರಶ್ನೆ