ಪಿತೃ ಕಾರ್ಯಕ್ಕೆ ಜಾಮೀನು ಕೇಳಿದ ದರ್ಶನ್ ಪ್ರಕರಣದ ಮಾಫಿ ಸಾಕ್ಷಿ ಪ್ರದೋಷ್, ಕೋರ್ಟ್ ಹೇಳಿದ್ದೇನು?

Published : Oct 28, 2026, 02:41 PM IST
darshan case in pradosh

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪ್ರದೋಷ್, ದರ್ಶನ್ ವಿರುದ್ಧ ಮಾಫಿ ಸಾಕ್ಷಿ ನುಡಿದು ಈಗಾಗಲೇ ಕೋಲಾಹಲ ಸೃಷ್ಟಿಸಿದ್ದಾರೆ. ಪಿತೃ ಕಾರ್ಯದಲ್ಲಿ ಪಾಲ್ಗೊಳ್ಳಲು ಜಾಮೀನಿಗೆ ಮನವಿ ಮಾಡಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಹೇಳಿದ್ದೇನು?

ಬೆಂಗಳೂರು (ಅ.28) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಜಾಮೀನಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆ ದರ್ಶನ್ ಆಪ್ತನಾಗಿದ್ದ ಪ್ರದೋಷ್ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ತಿರುಗಿ ಕೋಲಾಹಲ ಸೃಷ್ಟಿಸಿದ್ದರು. ಸಾಕ್ಷಿ ನುಡಿದಿರುವ ಪ್ರದೋಷ್ ಇದೀಗ ತನ್ನ ತಂದೆಯ ಪಿತೃ ಕಾರ್ಯದಲ್ಲಿ ನಡೆಸಲು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಅರ್ಜಿ ಆದೇಶವನ್ನು ಅಕ್ಟೋಬರ್ 30ಕ್ಕೆ ಕಾಯ್ದಿರಿಸಿದೆ.

ಪ್ರದೋಷ್ ತಂದೆಯ 2ನೇ ವರ್ಷದ ಪಿತೃ ಕಾರ್ಯಕ್ಕೆ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಪಿತೃ ಕಾರ್ಯದಲ್ಲಿ ಪಾಲ್ಗೊಳ್ಳಲು 3 ವಾರ ಜಾಮೀನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಪ್ರದೋಷ್ ವಕೀರಲು ಕನಿಷ್ಠ 3 ವಾರಗಳ ಜಾಮೀನು ನೀಡುವಂತೆ ವಾದ ಮಂಡಿಸಿದರೆ, ದರ್ಶನ್ ಪರ ವಕೀಲರು ಜಾಮೀನು ನೀಡದಂತೆ ವಾದ ಮಂಡಿಸಿದ್ದಾರೆ. ಇದರ ನಡುವೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್, ಕಾನೂನಿನ ಅಂಶಗಳನ್ನು ತೆರೆದಿಟ್ಟು ವಾದ ಮಂದಿಟ್ಟಿದ್ದಾರೆ. ಮೂವರ ವಾದ ಆಲಿಸಿದ ಕೋರ್ಟ್ ಆದೇಶವನ್ನು ಅಕ್ಟೋಬರ್ 30ಕ್ಕೆ ಕಾಯ್ದಿರಿಸಿದ್ದಾರೆ.

ಜಾಮೀನಿಗೆ ದರ್ಶನ್ ಪರ ವಕೀಲರ ಅಕ್ಷೇಪ

ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಈ ಕುರಿತು ತಮ್ಮ ವಾದ ಮಂಡಿಸಿದ್ದರು. ಪ್ರದೋಷ್‌ಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ವಾದಿಸಿದ್ದಾರೆ. ಸಾವು ಸಂಭವಿಸಿದಾಗ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶವಿದೆ. ಆದರೆ 2ನೇ ಬಾರಿ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕಾನೂನಿಲ್ಲ. ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದು, ಇನ್ನು ಪಾಟೀಸವಾಲ್ ಬಾಕಿ ಇದೆ. 2ನೇ ವರ್ಷದ ಪಿತೃ ಕಾರ್ಯಕ್ಕೆ ಯಾವುದೇ ಅವಕಾಶ ನೀಡಬಾರದು. ಇದರಿಂದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ. ಪ್ರತಿ ವರ್ಷ ಪಿತೃ ಕಾರ್ಯಕ್ಕೆ ಭಾಗಿಯಾಗಲು ಜಾಮೀನು ನೀಡುವುದು ಸೂಕ್ತವಲ್ಲ ಎಂದು ಹಷ್ಮತ್ ಪಾಷಾ ಹೇಳಿದ್ದಾರೆ. ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ಗೆ ಯಾವುದೇ ಕರುಣೆ ತೋರಬಾರದು ಎಂದು ಹಷ್ಮತ್ ಪಾಷಾ ವಾದ ಮಂಡಿಸಿದ್ದಾರೆ.

59ನೇ ಸೆಷನ್ಸ್​ ಕೋರ್ಟ್‌ನಲ್ಲಿ ಪ್ರದೋಷ್​ ಅರ್ಜಿ ವಿಚಾರಣೆ ನಡೆದಿದೆ. ಪ್ರದೋಷ್ ಅರ್ಜಿಯನ್ನು ಸಮರ್ಥಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ, ಆದರೆ ಕಾನೂನಿನ ಅಂಶಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದ್ದಾರೆ. ಪ್ರದೋಷ್​​ ಇಲ್ಲಿ ಜಾಮೀನು ಕೇಳುತ್ತಿಲ್ಲ, ಪಿತೃಕಾರ್ಯದಲ್ಲಿ ಭಾಗಿಯಾಗಲು ಅನುಮತಿ ಕೇಳಿದ್ದಾರೆ. ಪ್ರದೋಷ್​ ತಂದೆ ಸಾವನ್ನಪ್ಪಿದ್ದಾಗ ಕೋರ್ಟ್​​ ಮಧ್ಯಂತರ ಜಾಮೀನು ನೀಡಿತ್ತು. ಈಗ ಪಿತೃಕಾರ್ಯಕ್ಕಾಗಿ ಮಧ್ಯಂತರ ಜಾಮೀನು ಕೇಳುತ್ತಿದ್ದಾರೆ. ಪ್ರದೋಷ್​ ಈಗ ಆರೋಪಿಯಲ್ಲ, ಆದರೆ ಜೈಲುವಾಸಿಯಾಗಿದ್ದಾರೆ. ಸಿಆರ್ಪಿಸಿ ಸೆಕ್ಷನ್​ 306 ಷರತ್ತಿನಂತೆ ಪ್ರದೋಷ್​ ಜೈಲಿನಲ್ಲಿದ್ದಾರೆ. ಆರೋಪಿಗಳೊಂದಿಗೆ ಶಾಮೀಲಾಗಬಾರದು ಎಂದು ಜೈಲಿನಲ್ಲಿಡಲಾಗಿದೆ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.

ಪ್ರದೋಷ್​ ಪರ ವಕೀಲ ದಿವಾಕರ್​​ ವಾದ ಮಂಡನೆ

ತಂದೆಯ ಪಿತೃಕಾರ್ಯ ಮಾಡಲು 3 ವಾರ ಜಾಮೀನು ನೀಡಬೇಕು. ನಿರ್ಧಿಷ್ಟ ದಿನ, ಸಮಯದ ದಿನವೇ ಪಿತೃಕಾರ್ಯ ಮಾಡಬೇಕಿದೆ. ಹೀಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು-ತುಮಕೂರು 4 ಪಥದ ರೈಲ್ವೆ ಯೋಜನೆಗೆ ಇನ್ನೂ ಆಗದ ಭೂಸ್ವಾಧೀನ, ಸರ್ಕಾರದ ಸಹಕಾರಕ್ಕೆ ಕಾಯುತ್ತಿರುವ ರೈಲ್ವೇಸ್‌
ನಮ್ಮ ಮೆಟ್ರೋ 'ಪಿಂಕ್ ಲೈನ್' ಮಾರ್ಗಕ್ಕೆ CMRS ಗ್ರೀನ್ ಸಿಗ್ನಲ್: ಕೇಂದ್ರದ ಒಪ್ಪಿಗೆ ಸಿಕ್ಕ ತಕ್ಷಣ ಸಂಚಾರ!