ರೇಣುಕಾಸ್ವಾಮಿ ಕೇಸ್‌ನಲ್ಲಿ ಮಹತ್ವದ ತಿರುವು: ನ್ಯಾಯಪೀಠದ ಮುಂದೆ ನಿಂತು ದರ್ಶನ್ ಗುರುತಿಸದ ಪ್ರಮುಖ ಸಾಕ್ಷಿ!

Published : Oct 28, 2026, 01:33 PM IST
Darshan Thoogudeepa Renukaswamy

ಸಾರಾಂಶ

ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್‌ನ ಉದ್ಯೋಗಿ ಪುನೀತ್ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದಾನೆ. ತಾನು ಯಾವುದೇ ಆರೋಪಿಗಳನ್ನು ನೋಡಿಲ್ಲ ಎಂದು ಹೇಳುವ ಮೂಲಕ ತನಿಖಾ ತಂಡಕ್ಕೆ ಶಾಕ್ ಕೊಟ್ಟಿದ್ದಾನೆ.

ಬೆಂಗಳೂರು: ನಟ ದರ್ಶನ್ ತೂಗುದೀಪ ಹಾಗೂ ಆತನ ಸಹಚರರು ಭಾಗಿಯಾಗಿದ್ದಾರೆನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿ ಎನಿಸಿಕೊಂಡಿದ್ದ ಘಟನೆ ನಡೆದ ಸ್ಥಳ ಪಟ್ಟಣಗೆರೆ ಶೆಡ್‌ನ ಉದ್ಯೋಗಿ ಎಂ.ಜಿ. ಪುನೀತ್, ಇಂದು ಸೆಷನ್ಸ್ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಉಲ್ಟಾ ಹೊಡೆದಿದ್ದು, ಹಾಸ್ಟೈಲ್ ಸಾಕ್ಷಿಯಾಗಿದ್ದಾರೆ.

ಪಟ್ಟಣಗೆರೆ ಶೆಡ್‌ನಲ್ಲಿನ 'ಇನ್‌ಟ್ಯಾಕ್ಟ್ ಆಟೋ ಪಾರ್ಟ್ಸ್' ಕಂಪನಿಯಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಪಾರ್ಕ್ ಮಾಡುವ ಕೆಲಸ ಮಾಡುತ್ತಿದ್ದ ಪುನೀತ್, ಘಟನೆ ನಡೆದ ದಿನದಂದು ಸ್ಥಳದಲ್ಲೇ ಇದ್ದ ಪ್ರತ್ಯಕ್ಷದರ್ಶಿ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದ. ಆದರೆ, ಅಕ್ಟೋಬರ್ 28ರಂದು ನ್ಯಾಯಾಧೀಶರ ಎದುರು ಸಾಕ್ಷ್ಯ ದಾಖಲಿಸುವ ವೇಳೆ, ಕೋರ್ಟ್‌ನಲ್ಲಿ ನೇರವಾಗಿ ಹಾಜರಿದ್ದ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ನಟ ದರ್ಶನ್ ಸೇರಿದಂತೆ ಯಾವುದೇ ಆರೋಪಿಗಳನ್ನು ಗುರುತಿಸಿಲ್ಲ . "ನಾನ್ ಯಾರನ್ನೂ ನೋಡೇ ಇಲ್ಲ, ಇವರ್ಯಾರೂ ಆ ಸ್ಥಳಕ್ಕೆ ಬಂದಿರಲಿಲ್ಲ" ಎಂದು ಹೇಳಿಕೆ ನೀಡುವ ಮೂಲಕ ಉಲ್ಟಾ ಹೊಡೆದಿದ್ದಾನೆ ಈ ಮೂಲಕ ತನಿಖಾ ತಂಡಕ್ಕೆ ಶಾಕ್ ಕೊಟ್ಟಿದ್ದಾನೆ.

ನಾನು ಯಾರನ್ನೂ ನೋಡಿಲ್ಲ: ಪುನೀತ್

ಘಟನೆ ನಡೆದ ದಿನ ಕೆಲವು ವಾಹನಗಳನ್ನು ರಿಲೀಸ್ ಮಾಡುವ ಕೆಲಸವಿದ್ದಿದ್ದರಿಂದ ನಾನು ಶೆಡ್‌ನ ಗೇಟ್ ಬಳಿಯೇ ಇದ್ದೆ. ಕೆಲವರು ಕಾರಿನಲ್ಲಿ ಬಂದು ಮರದ ಬಳಿಗೆ ಹೋದರು, ಆದರೆ ನಾನು ಅಲ್ಲಿಗೆ ಹೋಗಲಿಲ್ಲ. ಸಾಯಂಕಾಲ 6.30 ರವರೆಗೆ ಶೆಡ್‌ನಲ್ಲಿದ್ದು, ನಂತರ ಅಲ್ಲಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದೆ. ಆ ಸಮಯದಲ್ಲಿ ಶೆಡ್‌ನಲ್ಲಿ ಕಿರಣ್, ಮಲ್ಲಿಕಾರ್ಜುನ್, ಬಸವರಾಜ್ ಮತ್ತು ಸೆಕ್ಯುರಿಟಿ ಗಾರ್ಡ್ ನರೇಂದರ್ ಮಾತ್ರ ಇದ್ದರು. ನಾನು ಈ ಕೇಸಿನ ಯಾವುದೇ ಆರೋಪಿಗಳನ್ನೂ ಎಲ್ಲೂ ನೋಡಿಯೇ ಇಲ್ಲ ಎಂದು ಪುನೀತ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ ಎಂದು ವರದಿ ತಿಳಿಸಿದೆ.

SPP ಪ್ರಶ್ನೆಗೆ ದರ್ಶನ್ ವಕೀಲರ ಆಕ್ಷೇಪ

ವಿಚಾರಣೆ ವೇಳೆ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಸಾಕ್ಷಿಗೆ ಪ್ರಶ್ನೆಗಳನ್ನು ಕೇಳಲು ಮುಂದಾದಾಗ, ನಟ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಣ್ಣಾರೆ ಕಂಡಿದ್ದೇನೆ ಎಂದು ತನಿಖಾ ತಂಡದ ಮುಂದೆ ಹೇಳಿಕೆ ನೀಡಿ ಸಾಕ್ಷಿ ಎಂದೇ ಪರಿಗಣಿಸಲಾಗಿದ್ದ ಪ್ರಮುಖ ವ್ಯಕ್ತಿಯೇ ನ್ಯಾಯಾಲಯದಲ್ಲಿ ಈಗ ನೀಡಿರುವ ಹೇಳಿಕೆಯಿಂದ ಪ್ರಕರಣದ ಚಾರಣೆ ಹಂತದಲ್ಲಿ ಪ್ರಮುಖ ತಿರುವು ಪಡೆದುಕೊಂಡಿದೆ.

PREV
Read more Articles on
click me!

Recommended Stories

ಮೊದಲ ಬಾರಿ BJP-JDS ಮೈತ್ರಿಗೆ ಕ್ಲೀನ್ ಸ್ವೀಪ್, ಬ್ಯಾಲೆಟ್ ಪೇಪರ್ ಚುನಾವಣೆ 28 MLC ಸ್ಥಾನದಲ್ಲಿ ಕಾಂಗ್ರೆಸ್‌ಗೆ 0
ಬೆಂಗಳೂರಿನ ಐಕಾನಿಕ್ CTR ಹೋಟೆಲ್‌ಗೆ ಕಳಂಕ? ಮಸಾಲೆ ದೋಸೆಯಲ್ಲಿ ಜಿರಳೆ ಸಿಕ್ಕಿದ ವಿಡಿಯೋ ವೈರಲ್