ಮೋದಿ ಹಾದಿಯಲ್ಲೇ ಡಿಕೆಶಿ! 3 ಹೊಸ ಲಾಲ್ ಬಾಗ್ ಮಾದರಿಯ ಉದ್ಯಾನಕ್ಕಾಗಿ ರಕ್ಷಣಾ ಇಲಾಖೆ ಭೂಮಿ ಮೇಲೆ ಸಿಎಂ ಕಣ್ಣು

Published : Aug 07, 2026, 04:52 PM IST
dk shivakumar

ಸಾರಾಂಶ

ನಗರದ ಹಸಿರು ಸಿರಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಮಹತ್ತರ ಯೋಜನೆ ರೂಪಿಸಿದೆ. ಲಾಲ್ ಬಾಗ್ ಮಾದರಿಯಲ್ಲಿ ನಗರದ ಮೂರು ಕಡೆ ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯನ್ನೇ ಅನುಸರಿಸಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿಇದೆ.

ಬೆಂಗಳೂರು: ನಗರದ ಹಸಿರು ಸಿರಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಮಹತ್ತರ ಯೋಜನೆ ರೂಪಿಸಿದೆ. ಲಾಲ್ ಬಾಗ್ ಮಾದರಿಯಲ್ಲಿ ನಗರದ ಮೂರು ಕಡೆ ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯನ್ನೇ ಅನುಸರಿಸಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.

'ಮೋದಿಯವರ ಮಾದರಿ' ಏನು?

ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಸರ್ಕಾರ ಬೆಂಗಳೂರಿನಲ್ಲಿ ಮೂರು ಹೊಸ ಲಾಲ್ ಬಾಗ್ ಮಾದರಿಯ ಉದ್ಯಾನಗಳನ್ನು ನಿರ್ಮಿಸಲು ಯೋಜಿಸಿದೆ. ಅದರಲ್ಲಿ ಒಂದನ್ನು ರಕ್ಷಣಾ ಇಲಾಖೆಯ (Defence Land) ಭೂಮಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಭೂಮಿಯ ಮಾಲೀಕತ್ವ ರಕ್ಷಣಾ ಇಲಾಖೆಯ ಬಳಿಯೇ ಇರಲಿದೆ, ಆದರೆ ಸಾರ್ವಜನಿಕ ಉದ್ಯಾನವನ ನಿರ್ಮಿಸಲು ಅನುಮತಿ ನೀಡುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆಯಲಿದ್ದೇನೆ. ಪ್ರಧಾನಿ ಮೋದಿ ಅವರು ಈ ಹಿಂದೆ ವಾರಣಾಸಿಯಲ್ಲಿ ರಕ್ಷಣಾ ಇಲಾಖೆ ಭೂಮಿಯಲ್ಲಿ ಉದ್ಯಾನವನ ನಿರ್ಮಿಸಲು ಅನುಮತಿ ನೀಡಿದ್ದರು. ಅದೇ ಮಾದರಿಯನ್ನು ನಾವು ಬೆಂಗಳೂರಿನಲ್ಲೂ ಅನುಸರಿಸಲಿದ್ದೇವೆ ಎಂದು ತಿಳಿಸಿದರು.

ಎಲ್ಲೆಲ್ಲಿ ಬರಲಿವೆ ಈ ಹೊಸ ಉದ್ಯಾನಗಳು?

  • ಒಂದು ಬೃಹತ್ ಉದ್ಯಾನವನ್ನು ರಕ್ಷಣಾ ಇಲಾಖೆಯ ಜಾಗದಲ್ಲಿ ನಿರ್ಮಿಸಲು ಕೇಂದ್ರದ ಅನುಮತಿ ಕೋರಲಾಗಿದೆ.
  • ನಗರದ ವ್ಯಾಪ್ತಿಯಲ್ಲಿರುವ ಅರಣ್ಯ ಇಲಾಖೆಯ ಭೂಮಿಯಲ್ಲಿ ಇನ್ನುಳಿದ ಎರಡು ಲಾಲ್ ಬಾಗ್ ಮಾದರಿಯ ಉದ್ಯಾನವನಗಳನ್ನು ನಿರ್ಮಿಸಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.
  • ಈ ಉದ್ಯಾನಗಳ ಜವಾಬ್ದಾರಿಯನ್ನು ಗ್ರೇಟರ್ ಬೆಂಗಳೂರು ಅಥಾರಿಟಿ, ಬಿಡಿಎ ಮತ್ತು ತೋಟಗಾರಿಕೆ ಇಲಾಖೆಗೆ ನೀಡಲು ನಿರ್ಧರಿಸಲಾಗಿದೆ.

ಹೆಬ್ಬಾಳ ಟನಲ್ ಪ್ರಾಜೆಕ್ಟ್ ಮತ್ತು ಮರಗಳ ರಕ್ಷಣೆ:

ಉತ್ತರ ಬೆಂಗಳೂರಿನಲ್ಲಿ ಉದ್ದೇಶಿತ ಸುರಂಗ ಮಾರ್ಗ (Tunnel Road) ನಿರ್ಮಾಣದ ವೇಳೆ ಸುಮಾರು 900 ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಪರಿಸರವಾದಿಗಳ ಈ ಆತಂಕಕ್ಕೆ ಪ್ರತಿಕ್ರಿಯೆಯಾಗಿ, ಸರ್ಕಾರವು ಈ ಮೂರು ಬೃಹತ್ ಉದ್ಯಾನಗಳನ್ನು ನಿರ್ಮಿಸುವ ಮೂಲಕ ಹಸಿರು ವಲಯವನ್ನು ವಿಸ್ತರಿಸಲು ಪ್ಲಾನ್ ಮಾಡಿದೆ. ಬಿಡಿಎ ಅಧಿಕಾರಿಗಳ ಪ್ರಕಾರ, ಶೇ. 85ರಷ್ಟು ಮರಗಳನ್ನು ಕತ್ತರಿಸುವ ಬದಲು ಸ್ಥಳಾಂತರಿಸಲು (Transplantation) ಉದ್ದೇಶಿಸಲಾಗಿದೆ.

ರೈತರಿಗಾಗಿ 100 ದಿನಗಳ ಕಾರ್ಯಕ್ರಮ

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರೈತರ ಸಬಲೀಕರಣಕ್ಕಾಗಿ ಸರ್ಕಾರವು ಹೊಸ ಯೋಜನೆ ಘೋಷಿಸಲಿದೆ. ರೈತರು ಮತ್ತು ಸರ್ಕಾರದ ಸಹಯೋಗದಲ್ಲಿ ಹಸಿರು ಹೆಚ್ಚಿಸುವ ಮತ್ತು ರೈತರ ಜೀವನೋಪಾಯಕ್ಕೆ ನೆರವಾಗುವ 100 ದಿನಗಳ ವಿಶೇಷ ಕಾರ್ಯಕ್ರಮವನ್ನು ನಾವು ಸಿದ್ಧಪಡಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು. ಈ ಬಾರಿಯ ಫಲಪುಷ್ಪ ಪ್ರದರ್ಶನವು 'ಗಂಗಾ ವಂಶದ ವೈಭವ' ಎಂಬ ವಿಷಯದ ಮೇಲೆ ಆಧಾರಿತವಾಗಿದೆ. ಗಂಗಾ ವಂಶದ ಇತಿಹಾಸವು ಸಮಾನತೆ ಮತ್ತು ರೈತರ ಹೋರಾಟದ ಸಂಕೇತವಾಗಿದೆ. ಅವರು ನಿರ್ಮಿಸಿದ ಕೆರೆಗಳು ಇಂದಿಗೂ ನಮಗೆ ನೀರು ನೀಡುತ್ತಿವೆ ಎಂದು ಅವರು ಸ್ಮರಿಸಿದರು.

PREV
Read more Articles on
click me!

Recommended Stories

ಬೆಂಗಳೂರು ಪೊಲೀಸ್‌ ಇತಿಹಾಸದಲ್ಲೇ ಅತಿದೊಡ್ಡ ಬದಲಾವಣೆ! 63 ವರ್ಷಗಳ ನಂತರ 5 ಭಾಗವಾಗಿ ವಿಭಜನೆ; 6,633 ಹೊಸ ಪೊಸ್ಟ್!
'SSLC ಮಾರ್ಕ್ಸ್‌ ಕಾರ್ಡ್‌ ಕೂಡ ಕೊಡಬೇಕಾ...?' ಬೆಂಗಳೂರಿನಲ್ಲಿ ಮನೆ ಓನರ್ ಪ್ರಶ್ನೆ ಕೇಳಿ ಬಾಡಿಗೆದಾರ ಕಂಗಾಲು