
ಬೆಂಗಳೂರು (ಜು.15): ಬೆಂಗಳೂರಿನ ಎಂದಿಗೂ ಮುಗಿಯದ ಸಂಚಾರ ಅವ್ಯವಸ್ಥೆ ಇಲ್ಲಿನ ನಿವಾಸಿಗಳಿಗೆ ದೈನಂದಿನ ದುಃಸ್ವಪ್ನವಾಗಿ ಮಾರ್ಪಟ್ಟಿದೆ, ಇದು ನಿರಂತರ ಆನ್‌ಲೈನ್ ಆಕ್ರೋಶಕ್ಕೆ ಕಾರಣವಾಗುತ್ತಿರುತ್ತದೆ. ಮೆಟ್ರೋ ನಿರ್ಮಾಣ ವಿಳಂಬವಾಗುತ್ತಿರುವುದರಿಂದ, ಎಲ್ಲೆಡೆ ಶಾಶ್ವತ ಎನಿಸುವಂಥ ಡೈವರ್ಷನ್‌ಗಳು ಕಾಣಿಸಿಕೊಳ್ಳುತ್ತಿದೆ. ಒತ್ತಡದಲ್ಲಿ ಉಸಿರುಗಟ್ಟಿಸುತ್ತಿರುವ ರಸ್ತೆ ಜಾಲದಿಂದಾಗಿ, ನಗರದ ಪ್ರಯಾಣವು ಯುದ್ಧದಂತೆ ಭಾಸವಾಗಿದೆ.
ಸೋಶಿಯಲ್ ಮೀಡಿಯಾ ಯೂಸರ್ ಒಬ್ಬರು ಬೆಂಗಳೂರಿನಲ್ಲಿರುವ ತಮ್ಮ ಕಚೇರಿಯನ್ನು ತಲುಪಲು ಪ್ರಯತ್ನಿಸುವಾಗ ಎದುರಿಸಿದ ಸಂಚಾರ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡಿದ್ದರು. ಟ್ರಾಫಿಕ್ ಜಾಮ್‌ನಿಂದಾಗಿ ಸುಮಾರು 1 ಗಂಟೆ 50 ನಿಮಿಷಗಳನ್ನು ತೆಗೆದುಕೊಂಡೆ ಎಂದು ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ, ಇಲ್ಲದಿದ್ದರೆ ಅದು 40 ನಿಮಿಷಗಳ ಪ್ರಯಾಣ ಎಂದು ತಿಳಿಸಿದ್ದಾರೆ.
ಇದೊಂದೇ ಕಾರಣಕ್ಕೆ ಮುಂದಿನ ಒಂದು ವರ್ಷದಲ್ಲಿ ನಾನು ಹೈದರಾಬಾದ್‌ಗೆ ಶಿಫ್ಟ್ ಆಗುವುದನ್ನು ಅಗತ್ಯಕ್ಕಿಂತ ಹೆಚ್ಚು ಬಾರಿ ಯೋಚನೆ ಮಾಡುತ್ತಿದ್ದೇನೆ ಎಂದಿದ್ದಾರೆ.
"ಬೆಂಗಳೂರು ಕೆಟ್ಟದಾಗಿದೆ. ಪದೇಪದೇ (ಶಾಶ್ವತ) ಸಂಚಾರ ಅಡಚಣೆಯಿಂದಾಗಿ, ಸಾಮಾನ್ಯ ದಿನಗಳಲ್ಲಿ 40 ನಿಮಿಷ ತೆಗೆದುಕೊಳ್ಳುತ್ತಿದ್ದ ಕಚೇರಿ ತಲುಪಲು ನನಗೆ 1 ಗಂಟೆ 50 ನಿಮಿಷ ಬೇಕಾಯಿತು. ಈಗ ಬೆಂಗಳೂರನ್ನು ಶಾಶ್ವತವಾಗಿ ಬಿಡುವ ಸಮಯ. 1 ವರ್ಷದ ನಂತರ, ನಾನು ಖಂಡಿತವಾಗಿಯೂ ಹೈದರಾಬಾದ್‌ಗೆ ಸ್ಥಳಾಂತರಗೊಳ್ಳುತ್ತಿದ್ದೇನೆ. ಹೈದರಾಬಾದ್‌ನಲ್ಲಿ ಹವಾಮಾನವು ಕೇವಲ 3 ತಿಂಗಳು ಮಾತ್ರ ಬಿಸಿ ಎನಿಸುತ್ತದೆ, ಮತ್ತು ನಂತರ ಅದು ಬಹುತೇಕ ಬೆಂಗಳೂರಿನ ರೀತಿಯೇ ಇರುತ್ತದೆ" ಎಂದು ಬಳಕೆದಾರರು X (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಆದರೆ, ಈ ಸೋಶಿಯಲ್ ಮೀಡಿಯಾ ಪೋಸ್ಟ್ ನೆಟ್ಟಿಗರನ್ನು ವಿಭಜಿಸಿದೆ. ಕೆಲವು ಯೂಸರ್‌ಗಳು ಈತನ ಬಗ್ಗೆ ಸಹಾನುಭೂತಿ ಹೊಂದಿದ್ದು ಮಾತ್ರವಲ್ಲದೆ, ಹೈದರಾಬಾದ್‌ಗೆ ಸ್ಥಳಾಂತರಗೊಳ್ಳದಂತೆ ಸಲಹೆ ನೀಡಿದರು.
"ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತುಂಬಾ ಕೆಟ್ಟದಾಗಿದೆ. ನನ್ನ ಮನೆಯಿಂದ 4 ಕಿ.ಮೀ ದೂರದಲ್ಲಿರುವ ಸಮ್ಮೇಳನಕ್ಕಾಗಿ ನಾನು ಹೋಟೆಲ್‌ಗೆ ಹೋಗಬೇಕಾಗಿತ್ತು. ಇದಕ್ಕಾಗಿ ನನಗೆ 90 ನಿಮಿಷ ಹಿಡಿಯಿತು. ಇದರಿಂದಾಗಿ ಕಾನ್ಫರೆನ್ಸ್‌ನ ಆರಂಭಿಕ ಸಮಾರಂಭ ತಪ್ಪಿಸಿಕೊಂಡೆ' ಎಂದು ಯೂಸರ್ ಒಬ್ಬರು ಬರೆದಿದ್ದಾರೆ.
"ಹೆಚ್ಚಿನ ಜನರು ಇದನ್ನು ಮಾಡಬೇಕಾಗಿದೆ ಅಥವಾ ದೂರದಿಂದಲೇ ಕೆಲಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಜನದಟ್ಟಣೆ ತುಂಬಾ ಹೆಚ್ಚಾಗಿದೆ, ಅದು ಜನದಟ್ಟಣೆಯಿಂದ ಕೂಡಿದೆ ಮತ್ತು ಇಲ್ಲಿ ವಾಸಿಸುವ ಪ್ರತಿಯೊಬ್ಬರನ್ನು ನಿಜವಾಗಿಯೂ ನಿಭಾಯಿಸಲು ಸಾಧ್ಯವಿಲ್ಲ" ಎಂದು ಮತ್ತೊಬ್ಬರು ಬರೆದಿದ್ದಾರ.
"ಟ್ರಾಫಿಕ್ ವಿಷಯದಲ್ಲಿ ಹೈದರಾಬಾದ್ ಖಂಡಿತವಾಗಿಯೂ ಉತ್ತಮವಾಗಿದೆ ಆದರೆ ಹೈದರಾಬಾದ್ ಹವಾಮಾನವು ಕೇವಲ 3 ತಿಂಗಳು ಮಾತ್ರ ಬೆಂಗಳೂರಿನಂತೆ ಇರುತ್ತದೆ ಮತ್ತು ನಂತರ ಅಲ್ಲಿ ಭಾರೀ ಸಖೆ," ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
'ಹೈದರಾಬಾದ್ ರಸ್ತೆ ಕೂಡ ಈಗ ಜನದಟ್ಟಣೆಯಿಂದ ಕೂಡಿದೆ. ಹೈದರಾಬಾದ್ ರಸ್ತೆಯ ಒಳ್ಳೆಯ ಅಂಶವೆಂದರೆ ORR, ಆದ್ದರಿಂದ ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬೇಗ ತಲುಪಬಹುದು. ವಿಮಾನ ನಿಲ್ದಾಣದ ಪ್ರಯಾಣವು ಊಹಿಸಬಹುದಾದದ್ದೇ, ಬಾಡಿಗೆಗಳು ಮತ್ತು ಫ್ಲಾಟ್ ದರಗಳು ತುಲನಾತ್ಮಕವಾಗಿ ಅಗ್ಗವಾಗಿವೆ. ಹೈದರಾಬಾದ್ ರಸ್ತೆಯ ದಟ್ಟಣೆಯನ್ನು ತಪ್ಪಿಸಲು ಬೆಳಿಗ್ಗೆ 8 ಗಂಟೆಯ ಮೊದಲು ಕಚೇರಿಗೆ ಹೊರಡಬೇಕು ಮತ್ತು ನಿಮ್ಮ ಕಲ್ಚರ್ ಸರಿಹೊಂದಿದರೆ ಮಧ್ಯಾಹ್ನ 3 ಗಂಟೆಯ ನಂತರ ಕಚೇರಿಯಿಂದ ಹೊರಟು ಉಳಿದ ಸಮಯಗಳು ಇದ್ದರೆ ಮನೆಯಿಂದ ಕೆಲಸ ಮಾಡಿ' ಎಂದು ಮತ್ತೊಬ್ಬರು ಬರೆದಿದ್ದಾರೆ.