ಫ್ರೀ ಆದಾಗ ತಿಳಿಸು, ಜೊತೆಯಲ್ಲಿ ಕಳೆಯೋಣ ಎಂದು ಕಿಸ್‌ ಕೊಟ್ಟ - ವಿದ್ಯಾರ್ಥಿನಿ ಜೊತೆ ಮನೆ ಮಾಲೀಕ ಪೋಲಿ ಆಟ

Published : Aug 20, 2026, 08:30 PM IST
bengaluru apartment owner

ಸಾರಾಂಶ

ಬೆಂಗಳೂರಲ್ಲಿ ಯಾರನ್ನ ನಂಬಬೇಕು? ನಂಬಬಾರದು ಎಂಬುದೇ ಗೊತ್ತಾಗಲ್ಲ. 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಮೇಲೆ ಮನೆ ಮಾಲೀಕನ ಕೆಟ್ಟ ಕಣ್ಣು ಬಿದ್ದು ಏನೆಲ್ಲ ಆಗೋಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಬೆಂಗಳೂರು: ನಗರದ ಲಾಂಗ್‌ಫೋರ್ಡ್ ಟೌನ್‌ನಲ್ಲಿ 20 ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳಿಗೆ ಮನೆ ಮಾಲೀಕನೇ ಲೈಂ*ಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಮೂರನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ ಕಳೆದ ಎರಡೂವರೆ ತಿಂಗಳಿನಿಂದ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಆಗಸ್ಟ್ 15 ರ ಸಂಜೆ ಸುಮಾರು 6:30 ಕ್ಕೆ ಮನೆ ಮಾಲೀಕ ಕಮಲೇಶ್ ಕುಮಾರ್ (60) ರಿಪೇರಿ ಕೆಲಸ ಪರಿಶೀಲಿಸುವ ನೆಪದಲ್ಲಿ ಯುವತಿಯ ಫ್ಲ್ಯಾಟ್‌ಗೆ ಬಂದಿದ್ದ. ಈ ವೇಳೆ ಯುವತಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಗಮನಿಸಿದ ಆತ, ಆಕೆಯ ಕಾಲೇಜು ಜೀವನದ ಬಗ್ಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾನೆ.

ನಂತರ ಮೆಹೆಂದಿ ನೋಡುವ ನೆಪದಲ್ಲಿ ಯುವತಿಯ ಕೈ ಹಿಡಿದ ಕಮಲೇಶ್, ಆಕೆ ಕೈ ಹಿಂಪಡೆಯಲು ಯತ್ನಿಸಿದಾಗ ಆಕೆಯನ್ನು ಬಲವಂತವಾಗಿ ತನ್ನತ್ತ ಎಳೆದುಕೊಂಡು ಬಿಗಿಯಾಗಿ ಅಪ್ಪಿಕೊಂಡಿದ್ದಾನೆ. ಯುವತಿ ದೂರ ಸರಿಯಲು ಯತ್ನಿಸಿದರೂ ಆಕೆಯ ಎರಡೂ ಕೆನ್ನೆಗೆ ಮುದ್ದು ಕೊಟ್ಟು, ಹೆದರಬೇಡ ಮಾ ಎಂದು ಹೇಳುತ್ತಾ ಅಸಭ್ಯವಾಗಿ ಸ್ಪರ್ಶಿಸಿದ್ದಾನೆ. ಘಟನೆಯ ನಂತರ ಆತ ನಗುತ್ತಾ ಅಲ್ಲಿಂದ ತೆರಳಿದ್ದು, ಫ್ರೀ ಇದ್ದಾಗ ತಿಳಿಸು, ಜೊತೆಯಲ್ಲಿ ಸಮಯ ಕಳೆಯೋಣ ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಿಂದ ಆಘಾತಕ್ಕೊಳಗಾದ ಯುವತಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕಮಲೇಶ್ ಕುಮಾರ್ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 74 (ದಾಳಿ) ಮತ್ತು 75 (ಲೈಂ*ಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ನೋಟಿಸ್ ಜಾರಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಎಚ್‌ಎಎಲ್-ಸೈಯಂಟ್ ಜಂಟಿ ಉದ್ಯಮಕ್ಕೆ ತೆರೆ: ಇನ್ಫೋಟೆಕ್ HAL ಮುಚ್ಚಲು NCLT ಆದೇಶ, ತೆರೆಮರೆಗೆ ಸರಿದ ಜಂಟಿ ಉದ್ಯಮ
ತೀರಾ ಮಂದಗತಿಯಲ್ಲಿ ಕಾಮಗಾರಿ, ಜೂನ್‌ 2027ಕ್ಕೂ ಹೆಬ್ಬಾಳ-ಏರ್‌ಪೋರ್ಟ್‌ ಮೆಟ್ರೋ ಲಿಂಕ್‌ ಅನುಮಾನ!