
ಬೆಂಗಳೂರು (ನ.23) ಬೆಂಗಳೂರಿನಲ್ಲಿ ನಡೆದ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಕ್ಸೇವಿಯರ್ ಮತ್ತು ಗೋಪಿ 7 ಕೋಟಿ ರೂಪಾಯಿ ರಾಬರಿ ಪ್ಲಾನ್ ಮಾಡುವ ಮಹತ್ವದ ಜವಾಬ್ದಾರಿಯನ್ನು ನೇರವಾಗಿ ಪೊಲೀಸ್ ಕಾನ್ಸ್‌ಸ್ಟೇಬಲ್ ಅಣ್ಣಪ್ಪ ನಾಯಕ್‌ಗೆ ನೀಡಲಾಗಿತ್ತು. ಇದರಂತೆ ಪ್ಲಾನ್ ಯಶಸ್ವಿಯಾಗಿ ಸಾಗಿತ್ತು. ಆದರೆ ಬೆಂಗಳೂರು ಪೊಲೀಸರು ಅಷ್ಟೇ ವೇಗದಲ್ಲಿ ಆರೋಪಿಗಳ ಪತ್ತೆ ಹಚ್ಚಿದ್ದಾರೆ. 5 ಕೋಟಿಗೂ ಹೆಚ್ಚು ಹಣ ರಿಕವರಿ ಮಾಡಲಾಗಿದೆ. ಇತ್ತ ಪೊಲೀಸ್ ಕಾನ್ಸ್‌ಸ್ಟೇಬಲ್ ಅಣ್ಣಪ್ಪ ನಾಯಕ್ ಪೊಲೀಸರ ಅತಿಥಿಯಾಗಿದ್ದಾನೆ. ಇತ್ತ ಈನತ ಕೆಲಸವೂ ಹೋಗಿದೆ. ಗೋವಿಂದಪುರ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್‌ನನ್ನು ಅಮಾನತು ಮಾಡಲಾಗಿದೆ.
7 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಪೇದೆ ಅಣ್ಣಪ್ಪ ನಾಯಕ್ ಶಾಮೀಲಾಗಿರುವುದು ತನಿಖೆಯಲ್ಲಿ ಬಯಲಾಗಿದೆ. ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಹತ್ವದ ಆದೇಶ ನೀಡಿದ್ದರೆ. ಅಣ್ಣಪ್ಪ ನಾಯಕ್ ಸಸ್ಪೆಂಡ್ ಮಾಡಿ ಆದೇಶ ನೀಡಿದ್ದಾರೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಬೀಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ನಾಯಕ್‌ನನ್ನು ಕ್ರೈಮ್ ನಿಂದ ತೆಗೆದು ಬೀಟ್ ಡ್ಯೂಟಿಗೆ ಹಾಕಲಾಗಿತ್ತು.ಇದೀಗ ರಾಬರಿ ಪ್ರಕರಣದಲ್ಲಿ ಭಾಗಿಯಾದ ಹಿನ್ನಲೆ ಅಣ್ಣಪ್ಪ ನಾಯಕ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ದರೋಡೆ ಗ್ಯಾಂಗ್‌ನಲ್ಲಿದ್ದ ಬಹುತೇಕರಿಗೆ ಉದ್ಯೋಗ ಇರಲಿಲ್ಲ. ಕೆಲಸವಿಲ್ಲದೆ ಆರೋಪಿಗಳು ಸುತ್ತಾಡುತ್ತಿದ್ದರು. ಈ ಪೈಕಿ ಸಿಎಂಎಸ್ ಉದ್ಯೋಗಿ ಗೋಪಿಗೆ ಮಾತ್ರ 15 ಸಾವಿರ ಸಂಬಳ ಇತ್ತು. ಇನ್ನುಳಿದವರು ಕೆಲಸವೂ ಇಲ್ಲ, ದುಡ್ಡು ಇಲ್ಲದೆ ಪರದಾಡುತ್ತಿದ್ದರು. ಸಿಎಂಸ್ ವಾಹನದಲ್ಲಿ ಪ್ರತಿ ದಿನ ಲಕ್ಷ ಲಕ್ಷ ರೂಪಾಯಿ ಹಣ ನೋಡುತ್ತಿದ್ದರು. ಆದರೆ ನಮ್ಮ ಕೈಯಲ್ಲಿ ಇಲ್ಲ ಎಂದು ಮಾತನಾಡುತ್ತಿದ್ದರು. ಹೀಗಾಗಿ ಹೇಗಾದ್ರು ಮಾಡಿ ಒಂದಷ್ಟು ಹಣ ಲಪಟಾಯಿಸಬೇಕು ಎಂದು ಪ್ಲಾನ್ ಮಾಡಿದ್ದರು. ಆರೋಪಿಗಳಾದ ಕ್ಸೇವಿಯರ್, ಗೋಪಿಗೆ ಎಟಿಎಂ ಹಣ ಸಾಗಣೆ ವಿಚಾರ ತಿಳಿದಿತ್ತು. ಅಣ್ಣಪ್ಪ ನಾಯಕ್‌ಗೆ ಪೊಲೀಸರಿಗೆ ಕೈಗೆ ಸಿಕ್ಕಿ ಬೀಳದಂತೆ ಪ್ಲಾನ್ ಮಾಡಲು ಅಣ್ಣಪ್ಪ ನಾಯಕ್‌ಗೆ ಜವಾಬ್ದಾರಿ ನೀಡಲಾಗಿದೆ. ಇತ್ತ ಅಣ್ಣಪ್ಪ ನಾಯಕ್ 15 ದಿನದಲ್ಲಿ ಪ್ಲಾನ್ ರೂಪಿಸಿದ್ದ. ಬುಧವಾರ ಐದು ಕೋಟಿ ಹಣ ಸಾಗಾಟ ಆಗುತ್ತೆ ಅಂತಾ ದರೋಡೆಗೆ ಸಂಚು ಮಾಡಲಾಗಿತ್ತು. ಕೆಲಸ ಇಲ್ಲದೆ ಇದ್ದ, ರವಿ, ರಾಕೇಶ್, ನವೀನ್ ಜೊತೆಗೂಡಿ ದರೋಡೆ ಮಾಡಲಾಗಿದೆ. ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ದರೋಡೆ ಗ್ಯಾಂಗ್ ಪವರ್ ಸೆಂಟರ್ ಆಗಿದ್ದ. ಪೊಲೀಸ್ ನಮ್ಮ ಜೊತೆ ಇದ್ದಾನೆ ಅಂತಾ ಏಳು ಕೋಟಿ ದರೋಡೆಗೆ ಕೈ ಹಾಕಿದ ಗ್ಯಾಂಗ್. ಪಕ್ಕಾ ಪ್ಲಾನ್ ಇದೆ, ಸಿಕ್ಕಿ ಬಿಳಲ್ಲ ಅಂತಾ ದರೋಡೆ ಮಾಡಿದ್ದಾರೆ.