ವಾಹನ ಮಾಲೀಕರೇ ಎಚ್ಚರ ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಆರಂಭ, ಈ ಬಾರಿ ದಂಡ ಎಷ್ಟು?

Published : Mar 25, 2026, 08:15 AM IST
towing

ಸಾರಾಂಶ

ವಾಹನ ಮಾಲೀಕರೇ ಎಚ್ಚರ ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಆರಂಭ, ಈ ಬಾರಿ ದಂಡ ಎಷ್ಟು?, ಎಲ್ಲೆಂದರಲ್ಲಿ ಪಾರ್ಕಿಂಗ್, ನೋ ಪಾರ್ಕಿಂಗ್‌ನಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ನಿಮ್ಮ ವಾಹನ ಟೋಯಿಂಗ್ ಮಾಡಿ ದುಬಾರಿ ದಂಡ ವಿಧಿಸಲಾಗುತ್ತದೆ. 

ಬೆಂಗಳೂರು (ಮಾ.25) ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡುವ ಪದ್ಧತಿಗೆ ಕೆಲ ವರ್ಷಗಳ ಕಾಲ ಬ್ರೇಕ್ ಹಾಕಲಾಗಿತ್ತು. ಬೆಂಗಳೂರು ರಸ್ತೆಯ ಬದಿಗಳಲ್ಲಿ ಇದೀಗ ಹೆಚ್ಚು ವಾಹನಗಳು ಪಾರ್ಕಿಂಗ್ ಆಗುತ್ತಿದ್ದು, ಸಂಚಾರ ದಟ್ಟಣೆ ತೀವ್ರಗೊಳ್ಳುತ್ತಿದೆ. ಹೀಗಾಗಿ ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸರ ವಾಹನ ಟೋಯಿಂಗ್ ಮತ್ತೆ ಜಾರಿಗೆ ತಂದಿದ್ದಾರೆ. ನೋ ಪಾರ್ಕಿಂಗ್ ಸ್ಥಳಗಳಲ್ಲಿ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಎಚ್ಚರಿಕೆ ನೀಡಲಾಗಿದೆ. ಮತ್ತೆ ಹಳೆ ಟೋಯಿಂಗ್ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆದರೆ ಈ ಬಾರಿ ದಂಡ ದುಬಾರಿಯಾಗಿದೆ. ರಾಜಧಾನಿ ಕೇಂದ್ರ ವಾಣಿಜ್ಯ ಪ್ರದೇಶ (CBD)ಯಲ್ಲಿ ಮತ್ತೆ ಟೋಯಿಂಗ್ ಕಾರ್ಯಾಚರಣೆ ಆರಂಭಗೊಳ್ಳುತ್ತಿದೆ.

ಇನ್ನೆರಡು ದಿನಗಳಲ್ಲಿ ಪ್ರಾಯೋಗಿಕವಾಗಿ ಟೋಯಿಂಗ್ ಆರಂಭ

ಇನ್ನೆರಡು ದಿನಗಳಲ್ಲಿ ಪ್ರಾಯೋಗಿಕವಾಗಿ ಟೋಯಿಂಗ್ ಕ್ರಮ ಆರಂಭಗೊಳ್ಳುತ್ತಿದೆ. ನಗರದ ಎಂ.ಜಿ. ರಸ್ತೆ, ವಿಧಾನಸೌಧ ಸುತ್ತಮುತ್ತ ಸೇರಿದಂತೆ ನೋ-ಪಾರ್ಕಿಂಗ್ ಪ್ರದೇಶಗಳಲ್ಲಿ ಟೋಯಿಂಗ್ ಕ್ರಮ ಜಾರಿಯಾಗುತ್ತಿದೆ. ಎಲೆ ದರಲ್ಲಿ ವಾಹನ ನಿಲ್ಲಿಸಿದರೆ ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಚಾರ ಪೊಲೀಸರು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದಾರೆ. ಮೊದಲ ಹಂತದಲ್ಲಿ ಕೇಂದ್ರ ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಟೋಯಿಂಗ್ ಕ್ರಮ ಜಾರಿಗೆ ಬರಲಿದೆ.

ದಂಡ ಮತ್ತು ಶುಲ್ಕದ ವಿವರ

ಈ ಬಾರಿ ನೋ ಪಾರ್ಕಿಂಗ್ ಅಥವಾ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡಿದರೆ ದಂಡ ದುಬಾರಿಯಾಗಿದೆ. ವಾಹನ ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡಿದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಟೋಯಿಂಗ್ ಶುಲ್ಕ ವಿಧಿಸಲಾಗುತ್ತದೆ. ಇದು ವಾಹನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಬೈಕ್ ಸೇರಿದಂತೆ ದ್ವಿಚಕ್ರ ವಾಹನಗಳ ಟೋಯಿಂಗ್ ಶುಲ್ಕ 650 ರೂಪಾಯಿ. ಇನ್ನು ಕಾರು ಸೇರಿದಂತೆ ಇತರ ವಾಹನಗಳ ಟೋಯಿಂಗ್ ಶುಲ್ಕ 1000 ರೂಪಾಯಿ.

ರಸ್ತೆಗಿಳಿದ ಮೂರು ಟೋಯಿಂಗ್ ವಾಹನ

ಜಿಬಿಎ ಅಧಿಕಾರಿಗಳು ಈಗಾಗಲೇ ವಾಹನ ಟೋಯಿಂಗ್ ಮಾಡಲು ಮೂರು ವಾಹನಗಳನ್ನು ನೀಡಿದೆ. ಇನ್ನು ಹಂತ ಹಂತವಾಗಿ ಎಲ್ಲಾ ಕಡೆ ಟೋಯಿಂಗ್ ವಾಹನಗಳು ರಸ್ತೆಗೆ ಇಳಿಯಲಿದೆ. ಈ ಮೂಲಕ ಸಂಚಾರ ದಟ್ಟಣೆ ತಗ್ಗಿಸಲು, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

 

PREV
Read more Articles on
click me!

Recommended Stories

ಮಾ.30ರ ವರೆಗೆ ರಾಜ್ಯದಲ್ಲಿ ಗುಡುಗು ಮಿಂಚು ಸಹಿತ ಮಳೆ, 17 ಜಿಲ್ಲೆಗಳಿಗೆ ಯೆಲ್ಲೆ ಅಲರ್ಟ್
Karnataka News Live: ಬಿಪಿಎಲ್‌ ಕನಿಷ್ಠ ಆದಾಯ ಮಿತಿ ಏರಿಕೆ - ಮುನಿಯಪ್ಪ