ಕಂಠೀರವ ಸ್ಟುಡಿಯೋ To ಬಿಇಎಲ್ ವೃತ್ತದವರೆಗಿನ 4.5 km ಉದ್ದದ 6 ಲೇನ್‌ ಸುರಂಗ ಮಾರ್ಗ

Published : Aug 08, 2026, 08:42 AM IST
Tunnel

ಸಾರಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಂಠೀರವ ಸ್ಟುಡಿಯೋ ಅಂಡರ್‌ಪಾಸ್‌ನಿಂದ ಗೊರಗುಂಟೆಪಾಳ್ಯ ಮೂಲಕ ಬಿಇಎಲ್ ವೃತ್ತದವರೆಗೆ 4.5 ಕಿ.ಮೀ ಉದ್ದದ 6 ಲೇನ್‌ಗಳ ಸುರಂಗ ಮಾರ್ಗ ನಿರ್ಮಿಸಲು ಪ್ರಸ್ತಾಪಿಸಿದೆ. ಈ ಯೋಜನೆಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಬಿಡಿಎ ಅರ್ಹ ಗುತ್ತಿಗೆದಾರರಿಂದ ಟೆಂಡರ್ ಆಹ್ವಾನಿಸಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಂಠೀರವ ಸ್ಟುಡಿಯೋ ಅಂಡರ್‌ಪಾಸ್‌ನಿಂದ (ಡಾ.ರಾಜ್‌ಕುಮಾರ್ ಸ್ಮಾರಕದ ಬಳಿ) ಗೊರಗುಂಟೆಪಾಳ್ಯ ಮೂಲಕ ಬಿಇಎಲ್ ವೃತ್ತದವರೆಗೆ 4.5 ಕಿ.ಮೀ ಉದ್ದದ 6 ಲೇನ್‌ಗಳ ಸುರಂಗ ಮಾರ್ಗ ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಿದ್ದು, ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಟೆಂಡರ್ ಆಹ್ವಾನಿಸಲಾಗಿದೆ.

1ನೇ ದರ್ಜೆಯ ಗುತ್ತಿಗೆದಾರರಿಂದ ಅಲ್ಫಾವಧಿ ಟೆಂಡರ್‌

ಬಿಡಿಎ ಪೂರ್ವ ವಿಭಾಗದ ಕನೆಕ್ಟಿಂಗ್‌ ಲೂಪ್‌ಗಳೊಂದಿಗೆ ಕಂಠೀರವ ಸ್ಟುಡಿಯೋ ಅಂಡರ್‌ಪಾಸ್‌ನಿಂದ ಗೊರಗುಂಟೆಪಾಳ್ಯ ಜಂಕ್ಷನ್‌ ಮೂಲಕ ಬಿಇಎಲ್‌ ವೃತ್ತದವರೆಗೆ ಸುರಂಗ ಮಾರ್ಗದ ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಅನ್ನು ಸಿದ್ಧಪಡಿಸುವ ಕಾಮಗಾರಿಗೆ ಕೆಪಿಸಿ ಪೋರ್ಟಲ್‌ ಮೂಲಕ ಅರ್ಹ 1ನೇ ದರ್ಜೆಯ ಗುತ್ತಿಗೆದಾರರಿಂದ ಅಲ್ಫಾವಧಿ ಟೆಂಡರ್‌ ಕರೆಯಲಾಗಿದೆ. ಬಿಡ್‌ ಸಲ್ಲಿಸಲು ಆಗಸ್ಟ್‌ 12 ಕೊನೆಯ ದಿನವಾಗಿದೆ. ತಾಂತ್ರಿಕ ಬಿಡ್‌ಗಳನ್ನು ಆಗಸ್ಟ್‌ 13ರಂದು ಸಂಜೆ 5ಕ್ಕೆ ತೆರೆಯಲಾಗುವುದು.

ಹೆಚ್ಚಿನ ವಿವರಗಳಿಗೆ https://kppp/karnataka.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಇ-ಪ್ರೊಕ್ಯೂರ್‌ಮೆಂಟ್‌ಗೆ ಸಂಬಂಧಿಸಿದ ಸಹಾಯಕ್ಕಾಗಿ ದೂರವಾಣಿ:080-22230960 ಮತ್ತು ಬಿಡಿಎ ಸಹಾಯವಾಣಿ 9483166622 ಸಂಪರ್ಕಿಸುವಂತೆ ಕೋರಲಾಗಿದೆ.

PREV
Read more Articles on
click me!

Recommended Stories

Bengaluru Namma Metro ನಿರ್ಲಕ್ಷ್ಯ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ!
HAL: ದೇಶದಲ್ಲೇ ಮೊದಲು, ಎಚ್‌ಎಎಲ್‌ನಲ್ಲಿ ಉಪಗ್ರಹ ಬಳಸಿ ಹೆಲಿಕಾಪ್ಟರ್‌ ಲ್ಯಾಂಡ್‌