ರಾಜ್ಯ ಸರ್ಕಾರ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಬೆಂಗಳೂರಿನಲ್ಲಿ ಐದು ಹೊಸ ಪೊಲೀಸ್ ಕಮಿಷನರೇಟ್ಗಳನ್ನು ರಚಿಸಲಾಗಿದೆ. ಆರ್. ಹಿತೇಂದ್ರ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಹಾಲಿ ಆಯುಕ್ತ ಸೀಮಂತ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಭರ್ಜರಿ ಮೇಜರ್ ಸರ್ಜರಿ ಮಾಡಿದೆ. ಇವತ್ತು (ಬುಧವಾರ) ಒಟ್ಟು 32 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇನ್ನು ಬೆಂಗಳೂರನ್ನು ಐದು ಪೊಲೀಸ್ ಕಮಿಷನರೇಟ್ಗಳಾಗಿ ವಿಭಜಿಸಿ ಸರ್ಕಾರ ಆದೇಶ ಹೊರಡಿಸಿರುವ ಬೆನ್ನಲ್ಲೇ ಈ ಬೃಹತ್ ಆಡಳಿತಾತ್ಮಕ ಬದಲಾವಣೆ ನಡೆದಿದೆ. ಜೊತೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಸೀಮಾಂತ್ ಕುಮಾರ್ ಸಿಂಗ್ ವರ್ಗಾವಣೆ
ಬೆಂಗಳೂರು ಕಾನೂನು ಸುವ್ಯವಸ್ಥೆಯ ಚುಕ್ಕಾಣಿ ಹಿಡಿದಿದ್ದ 1996ನೇ ಬ್ಯಾಚ್ನ ಹಿರಿಯ ಐಪಿಎಸ್ ಅಧಿಕಾರಿ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರ ಎಡಿಜಿಪಿ ಮತ್ತು ಪೊಲೀಸ್ ಆಯುಕ್ತರಾಗಿದ್ದ ಅವರನ್ನು, ಖಾಲಿ ಇದ್ದ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ADGP) ನಿಯೋಜಿಸಲಾಗಿದೆ.
ಇನ್ನು, ಸೀಮಾಂತ್ ಕುಮಾರ್ ಸಿಂಗ್ ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ಹಾಗೂ ಹೊಸ ಕಮಿಷನರೇಟ್ ವ್ಯವಸ್ಥೆಯ ಮುಖ್ಯಸ್ಥರಾಗಿ 1996ನೇ ಬ್ಯಾಚ್ನ ಆರ್.ಹಿತೇಂದ್ರ ಅವರನ್ನು ನೇಮಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್.ಹಿತೇಂದ್ರ ಅವರು ಇನ್ನು ಮುಂದೆ ಬೆಂಗಳೂರು ನಗರದ ಎಡಿಜಿಪಿ ಹಾಗೂ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ (Chief Commissioner of Police) ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ಐದು ಕಮಿಷನರೇಟ್
ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ವಿಭಾಗಗಳಾಗಿ (ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ) ವಿಂಗಡಿಸಿ ಐದು ಕಮಿಷನರೇಟ್ ಹುದ್ದೆಗಳನ್ನು ಸರ್ಕಾರ ಸೃಷ್ಟಿಸಿದೆ. ಹೊಸದಾಗಿ ಸೃಷ್ಟಿಸಲಾದ ಎಲ್ಲಾ ಹುದ್ದೆಗಳಿಗೂ ಅಧಿಕಾರಿಗಳನ್ನು ನೇಮಕ ಮಾಡಿದೆ. ಇದರ ಜೊತೆಗೆ ಸ್ಥಳ ನಿರೀಕ್ಷೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ.ನಿಂಬಾಳ್ಕರ್ಗೆ ಬೆಂಗಳೂರು ನಗರ (ಸಂಚಾರ) ಪೊಲೀಸ್ ಆಯುಕ್ತರ ಹುದ್ದೆಯ ಜೊತೆಗೆ, ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ (Anti-Rowdy Squad) ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇವರು ಮುಖ್ಯ ಆಯುಕ್ತರ ಅಡಿಯಲ್ಲಿ ಅಪರಾಧ ನಿಯಂತ್ರಣದ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.
ಬೆಂಗಳೂರಿನ 5 ನೂತನ ಕಮಿಷನರೇಟ್ಗಳ ಆಯುಕ್ತರು
ಲಭು ರಾಮ್ -ಪೊಲೀಸ್ ಆಯುಕ್ತರು, ಕೇಂದ್ರ ಬೆಂಗಳೂರು ನಗರ
ಡಾ. ಪಿ.ಎಸ್. ಹರ್ಷ -ಪೊಲೀಸ್ ಆಯುಕ್ತರು, ಪೂರ್ವ ಬೆಂಗಳೂರು ನಗರ
ವಿಕಾಶ್ ಕುಮಾರ್ ವಿಕಾಶ್ - ಪೊಲೀಸ್ ಆಯುಕ್ತರು, ಪಶ್ಚಿಮ ಬೆಂಗಳೂರು ನಗರ
ಡಾ. ಎಂ.ಬಿ. ಬೋರಲಿಂಗಯ್ಯ - ಪೊಲೀಸ್ ಆಯುಕ್ತರು, ಉತ್ತರ ಬೆಂಗಳೂರು ನಗರ
ಸಿ. ವಂಶಿ ಕೃಷ್ಣ - ಜಂಟಿ ಪೊಲೀಸ್ ಆಯುಕ್ತರು (ಆಡಳಿತ), ಬೆಂಗಳೂರು ನಗರ ಹಾಗೂ ದಕ್ಷಿಣ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಹೆಚ್ಚುವರಿ ಹೊಣೆ
ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ
ಬಿಜಯ್ ಕುಮಾರ್ ಸಿಂಗ್ -ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ (ಆರ್. ಹಿತೇಂದ್ರ ಅವರ ಸ್ಥಾನಕ್ಕೆ)
ಎಸ್. ಮುರುಗನ್ - ಎಡಿಜಿಪಿ, ಲೋಕಾಯುಕ್ತ
ಮನೀಶ್ ಖರ್ಬೀಕರ್ - ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ, ಬೆಂಗಳೂರು
ಎನ್. ಶಶಿ ಕುಮಾರ್ - ಐಜಿಪಿ, ಪಶ್ಚಿಮ ವಲಯ, ಮಂಗಳೂರು
ಅನುಪಮ್ ಅಗ್ರವಾಲ್ - ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP)
ಡಾ. ಶರಣಪ್ಪ ಎಸ್.ಡಿ - ಡಿಐಜಿ, ರೈಲ್ವೆ
ಕುಲದೀಪ್ ಕುಮಾರ್ ಆರ್. ಜೈನ್ - ಡಿಐಜಿ ಮತ್ತು ಪೊಲೀಸ್ ಆಯುಕ್ತರು, ಕಲಬುರಗಿ ನಗರ
ಎಂ. ಪುಟ್ಟಮಾದಯ್ಯ - ಡಿಐಜಿ, ದಕ್ಷಿಣ ವಲಯ, ಮೈಸೂರು
ಡಾ. ಎಂ. ಅಶ್ವಿನಿ - ಡಿಐಜಿ, ನೇಮಕಾತಿ ವಿಭಾಗ, ಬೆಂಗಳೂರು
ಜೆ.ಕೆ. ರಶ್ಮಿ - ಡಿಐಜಿ, ವಿಜಿಲೆನ್ಸ್, ಜಲಸಂಪನ್ಮೂಲ ಇಲಾಖೆ
ಬೆಂಗಳೂರಿನ ವಿವಿಧ ವಲಯಗಳ ಡಿಸಿಪಿ/ಎಸ್ಪಿಗಳ ವರ್ಗಾವಣೆ
ಡಾ. ಅನೂಪ್ ಎ. ಶೆಟ್ಟಿ -ಡಿಸಿಪಿ (ಸಂಚಾರ), ಪೂರ್ವ ಬೆಂಗಳೂರು ನಗರ
ಲಕ್ಷ್ಮಣ್ ನಿಂಬರಗಿ - ಡಿಸಿಪಿ, ಸಿಎಆರ್ (CAR - ಕೇಂದ್ರ ಕಚೇರಿ), ಕೇಂದ್ರ ಬೆಂಗಳೂರು ನಗರ
ಚನ್ನಬಸವಣ್ಣ ಲಂಗೋಟಿ - ಡಿಸಿಪಿ, ಇಂದಿರಾನಗರ, ಕೇಂದ್ರ ಬೆಂಗಳೂರು ನಗರ
ನಾಗೇಶ್ ಡಿ.ಎಲ್ - ಡಿಸಿಪಿ, ಯಶವಂತಪುರ, ಉತ್ತರ ಬೆಂಗಳೂರು ನಗರ
ಲೋಕೇಶ್ ಭರಮಪ್ಪ ಜಗಲಾಸರ್ - ಡಿಸಿಪಿ (ಸಂಚಾರ), ಕೇಂದ್ರ ಬೆಂಗಳೂರು ನಗರ
ಯತೀಶ್ ಎನ್ - ಡಿಸಿಪಿ, ಕೆಂಗೇರಿ (ನೈಋತ್ಯ), ಪಶ್ಚಿಮ ಬೆಂಗಳೂರು ನಗರ
ಸೈದುಲು ಅಡಾವತ್ - ಎಸ್ಪಿ, ಆಂತರಿಕ ಭದ್ರತಾ ವಿಭಾಗ (ISD), ಬೆಂಗಳೂರು
ಶ್ರೀಹರಿ ಬಾಬು ಬಿ.ಎಲ್ - ಡಿಸಿಪಿ, ವೈಟ್ಫೀಲ್ಡ್, ಪೂರ್ವ ಬೆಂಗಳೂರು ನಗರ
ಡಾ. ಗೀತಾ ಎಂ.ಎಸ್ - ಡಿಸಿಪಿ, ಪೂರ್ವ ಬೆಂಗಳೂರು ನಗರ
ರಂಜಿತ್ ಕುಮಾರ್ ಬಂಡಾರು - ಡಿಸಿಪಿ (ಆಡಳಿತ), ಬೆಂಗಳೂರು ನಗರ
ಅಶೋಕ್ ಕೆ.ವಿ - ಡಿಸಿಪಿ, ಪೀಣ್ಯ, ಪಶ್ಚಿಮ ಬೆಂಗಳೂರು ನಗರ
ಅಮತೆ ವಿಕ್ರಮ್- ಡಿಸಿಪಿ, ಉತ್ತರ ಬೆಂಗಳೂರು ನಗರ
ಲಕ್ಷ್ಮಿ ಗಣೇಶ್ ಕೆ- ಡಿಸಿಪಿ, ಗಾಂಧಿನಗರ, ಕೇಂದ್ರ ಬೆಂಗಳೂರು ನಗರ
ಪಿ.ವಿ. ಸ್ನೇಹಾ - ಡಿಸಿಪಿ (ಸಂಚಾರ), ಪಶ್ಚಿಮ ಬೆಂಗಳೂರು ನಗರ