ಬೆಂಗಳೂರು ಹೊಸವರ್ಷ ಸಂಭ್ರಮದಲ್ಲಿ ನಶೆ ಏರಿದ ಮಹಿಳೆಯರಿಗೆ ರಾತ್ರಿ ಇಡಿ ಉಚಿತ ಡ್ರಾಪ್

Published : Dec 31, 2025, 10:25 PM IST
Police

ಸಾರಾಂಶ

ಬೆಂಗಳೂರು ಹೊಸವರ್ಷ ಸಂಭ್ರಮದಲ್ಲಿ ನಶೆ ಏರಿದ ಮಹಿಳೆಯರಿಗೆ ರಾತ್ರಿ ಇಡಿ ಉಚಿತ ಡ್ರಾಪ್, ಬೆಂಗಳೂರು ಪೊಲೀಸರು ಜೊತೆ ಆಟೋ ಚಾಲಕರು ಕೈಜೋಡಿಸಿದ್ದಾರೆ. ಈ ಮೂಲಕ ಮಹಿಳೆಯರಿಗೆ ಆಟೋ ಸೇವೆ ನೀಡಲಿದ್ದಾರೆ. 

ಬೆಂಗಳೂರು (ಡಿ.31) ಹೊಸ ವರ್ಷದ ಸಂಭ್ರಮ ದೇಶದೆಲ್ಲೆಡೆ ನಡೆಯುತ್ತಿದೆ. ಬೆಂಗಳೂರು ನ್ಯೂ ಇಯರ್ ಸೆಲೆಬ್ರೆಷನ್‌ನಲ್ಲಿ ಇತರ ಎಲ್ಲಾ ನಗರಗಳಿಂದ ಅದ್ದೂರಿಯಾಗಿ ಆಚರಣೆ ಮಾಡುತ್ತದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಭರ್ಜರಿಯಾಗಿ ನಡೆಯುತ್ತಿದೆ. ಇದೇ ವೇಳೆ ಬೆಂಗಳೂರು ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಭಿಗಿ ಬಂದೋಬಸ್ತ್ ನಡೆಸಿದ್ದಾರೆ. ಇದೇ ವೇಳೆ ಹೊಸ ವರ್ಷದ ಸಂಭ್ರಮದಲ್ಲಿ ಕುಡಿದು ಟೈಟಾದ ಮಹಿಳೆಯರನ್ನು ಮನೆಗೆ ಡ್ರಾಪ್ ಮಾಡಲು ಉಚಿತ ಆಟೋ ವ್ಯವಸ್ಥೆ ಇದೆ. ಈ ಸೇವೆ ಕೋರಮಂಗಲಿಂದ ಇಡೀ ಬೆಂಗಳೂರಿಗೆ ಲಭ್ಯವಿದೆ.

ಕೋರಮಂಗಲದಲ್ಲಿ ಆಟೋ ವ್ಯವಸ್ಥೆ

ಪ್ರತಿನಿತ್ಯ ಕೋರಮಂಗಲ ದಲ್ಲಿ ಆಟೋ ಓಡಿಸುವ ಸುಮಾರು 25 ಆಟೋ ಚಾಲಕರು ಪೊಲೀಸರಿಗೆ ಸಾಥ್ ನೀಡಿದ್ದಾರೆ. ಇವರ ಸಹಯೋಗದಲ್ಲಿ ಹೊಸ ವರ್ಷದ ಪಾರ್ಟಿ ಮಾಡಿ ನಶೆಯಲ್ಲಿ ಮನಗೆ ತೆರಳಲು ಸಾಧ್ಯವಾಗದವರಿಗೆ ಉಚಿತ ಆಟೋ ವ್ಯವಸ್ಥೆ ಮಾಡಲಾಗಿದೆ. ಪ್ರಜ್ಞೆ ತಪ್ಪಿ ಬಿದ್ದ, ನಶೆಯಲ್ಲಿ ಏಳಲುಸಾಧ್ಯವಾಗದ ಮಹಿಳೆಯರನ್ನು ಆಟೋ ಚಾಲಕರು ಮನೆಗೆ ಡ್ರಾಪ್ ಮಾಡಲಿದ್ದಾರೆ. ಕೋರಮಂಗಲದಿಂದ ಇಡೀ ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಮನೆಯಿದ್ರು ಡ್ರಾಪ್ ಮಾಡಲಾಗುತ್ತದೆ.ಯಾವುದೇ ಹಣ ಪಡೆಯದೇ ಇವತ್ತು ಇಡೀ ರಾತ್ರಿ ಮಹಿಳೆಯರನ್ನ ಉಚಿತವಾಗಿ ಡ್ರಾಪ್ ಮಾಡುವ ಕೆಲಸ ಮಾಡಲಾಗುತ್ತದೆ.

ಆರೋಗ್ಯದಲ್ಲಿ ವ್ಯತ್ಯಾಸವಾದರೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಆಟೋ ಡ್ರೈವರ್ಸ್

ಕೋರಮಂಗದಲ್ಲಿನ ಉಚಿತ ಆಟೋ ವ್ಯವಸ್ಥೆಯಲ್ಲಿ ಮಹಿಳಾ ಸುರಕ್ಷತೆ ಹಾಗೂ ಆರೋಗ್ಯದ ಮೇಲೂ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ್ರೆ ಹತ್ತಿರದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಿದ್ದಾರೆ. ಕುಡಿದು ಅಥವಾ ಇನ್ಯಾವುದೇ ಕಾರಣದಿಂದ ಆರೋಗ್ಯ ಸಮಸ್ಯೆ ಎದುರಿಸಿದರೆ ಅಂತಹ ಮಹಿಳೆಯರನ್ನು ಅಸ್ಪತ್ರೆ ದಾಖಲಿಸುವ ಜವಾಬ್ದಾರಿಯನ್ನು ಆಟೋ ಡ್ರೈವರ್ಸ್ ಹೊತ್ತಿದ್ದಾರೆ.

ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಮಹಿಳಾ ಪಡೆ ನಿಯೋಜನೆ

ಬೆಂಗಳೂರಿನ ಹೊಸ ವರ್ಷ ಸಂಭ್ರಮಾಚರಣೆ ಪ್ರದೇಶದಲ್ಲಿ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಪಡೆ ನಿಯೋಜನೆ ಮಾಡಲಾಗಿದೆ. QRT (ಕ್ವಿಕ್ ರೆಸ್ಪಾನ್ಸ್ ಟೀಂ) ತಂಡವನ್ನು ಪೊಲೀಸರು ಕೋರಮಂಗಲಲ್ಲಿ ನಿಯೋಜಿಸಿದ್ದಾರೆ . ಈ ತಂಡದಲ್ಲಿ 20 ಮಹಿಳಾ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ತೊಂದರೆಯಾದರೆ ತಕ್ಷಣವೇ ಈ ತಂಡ ಸಹಾಯಕ್ಕೆ ಬರಲಿದೆ. ಈ ತಂಡ ಖಾಕಿ ಸಮವಸ್ತ್ರ ಬದಲು ವಿಶೇಷ ಸಮವಸ್ತ್ರದಲ್ಲಿ ಕಾರ್ಯಾಚರಣೆ ನಡೆಸಲಿದೆ.

ಈ ಬಾರಿ ಬೆಂಗಳೂರಿನಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಚಿನ್ನಸ್ವಾಮಿ ಕಾಲ್ತುಳಿತ ದುರಂತದ ಬಳಿಕ ಪೊಲೀಸರು ಭಾರಿ ಅಲರ್ಟ್ ಆಗಿದ್ದಾರೆ. ಬೆಂಗಳೂರಿನ ಹಲೆವೆಡೆ ದೀಪಾಲಂಕಾರದ ಜೊತೆಗೆ ಪೊಲೀಸ್ ಮಯವಾಗಿದೆ. ಬ್ರಿಗೇಡ್ ರೋಡ್ ನಲ್ಲಿ ಹೆಜ್ಜೆ ಹೆಜ್ಜೆ ಪೊಲೀಸ್ ಪಡೆಗಳ ನಿಯೋಜನೆಯಾಗಿದೆ. ಲಾ & ಆರ್ಡರ್ ಆರ್ಡರ್,ಟ್ರಾಫಿಕ್,ಸಿ ಎ ಆರ್,ಸಿಐಡಿ,ಸಿಸಿಬಿ, ಐಎಸ್ ಡಿ ಸೇರಿ ಜಿಲ್ಲೆಗಳಿಂದ ಪೊಲೀಸ್ರುನ್ನ ಕರೆಸಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

PREV
Read more Articles on
click me!

Recommended Stories

ಹೊಸ ವರ್ಷ ಪಾರ್ಟಿ ಮೂಡ್‌ನಲ್ಲಿದ್ದವರಿಗೆ ಶಾಕ್, ಬೆಂಗಳೂರಿನ ಕೆಲವೆಡೆ ಭಾರಿ ಮಳೆ
ಹೊಸ ವರ್ಷದ ಕಿಕ್‌ನಲ್ಲಿ ಡ್ರಿಂಕ್ ಆಂಡ್ ಡ್ರೈವ್ ಮಾಡಿದ್ರೆ ಅಷ್ಟೇ.. ಬೆಂಗಳೂರಿನ 50 ಫ್ಲೈ ಓವರ್‌ಗಳು ಬಂದ್; ರಸ್ತೆಗಿಳಿಯುವ ಮುನ್ನ ತಿಳಿಯಿರಿ