Bengaluru: ನಗರದಲ್ಲಿ ಹೊಸ ಸ್ಕ್ಯಾಮ್; ಅಜ್ಜನೊಬ್ಬನ ವಿಡಿಯೋ ಸೆರೆ ಹಿಡಿದ ಬೈಕ್ ರೈಡರ್

Published : Sep 24, 2026, 11:36 AM IST
Bengaluru New Scam

ಸಾರಾಂಶ

Bengaluru Video: ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಡೆಯುವ ಹೊಸ ಸ್ಕ್ಯಾಮ್‌ನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಗ್ನಲ್‌ನಲ್ಲಿ ಬರುವ ಅಜ್ಜನ ಬಗ್ಗೆ ವಿಡಿಯೋದಲ್ಲಿ ಹೇಳಲಾಗಿದೆ,

ಬೆಂಗಳೂರು: ಸಿಲಿಕಾನ್ ಸಿಟಿ ಮಹಾನಗರದ ಟ್ರಾಫಿಕ್‌ನಲ್ಲಿ ಬಹುತೇಕರು ದಿನದ ಎರಡ್ಮೂರು ಗಂಟೆಯನ್ನು ಕಳೆಯುತ್ತಾರೆ. ಟ್ರಾಫಿಕ್‌ ಸಿಗ್ನಲ್‌ಗಳಲ್ಲಿಯೇ ವ್ಯಾಪಾರ ಮಾಡಿಕೊಂಡು ಬಹುತೇಕರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಒಂದಿಷ್ಟು ಜನರು ಟ್ರಾಫಿಕ್ ಸಿಗ್ನಲ್ ಬೀಳೋದನ್ನು ಕಾಯುತ್ತಾ ಕುಳಿತಿರುತ್ತಾರೆ. ವಾಹನಗಳು ನಿಲ್ಲುತ್ತಿದ್ದಂತೆ ಕೈಯಲ್ಲಿ ಕಡಲೆಕಾಯಿ, ನೀರಿನ ಬಾಟೆಲ್, ಆಟಿಕೆ ಸಾಮಾನು ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಆದ್ರೆ ಮತ್ತೊಂದಿಷ್ಟು ಜನರು ನೋಡಲು ಗಟ್ಟಿಮುಟ್ಟಾಗಿದ್ರೂ ಮಾರುವೇಷದಲ್ಲಿ ಭಿಕ್ಷಾಟನೆಗೆ ಇಳಿಯುತ್ತಾರೆ.

ರಾಜಧಾನಿ ಹಲವೆಡೆ ನಕಲಿ ಭಿಕ್ಷುಕರ ಹಾವಳಿ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಆರ್‌ಆರ್ ನಗರ ವ್ಯಾಪ್ತಿಯಲ್ಲಿ ವಿಕಲಾಂಗಕನಂತೆ ನಟಿಸಿ ಭಿಕ್ಷೆ ಕೇಳುತ್ತಿದ್ದ ಹದಿಹರೆಯದ ಯುವಕನನ್ನು ಹಿಡಿದು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಅಂತಹವುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬೈಕ್ ರೈಡರ್ ಒಬ್ಬರು ನಕಲಿ ಭಿಕ್ಷುಕನ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಕಲಿ ಭಿಕ್ಷುಕನಾಗಿ ಬರೋ ಅಜ್ಜ!

toofan_rider___ ಹೆಸರಿನ್ ಇನ್‌ಸ್ಟಾಗ್ರಾಂನಲ್ಲಿ ನಕಲಿ ಭಿಕ್ಷುಕನ ವಿಡಿಯೋವನ್ನು ಕಿರಣ್‌ ಗೌಡ ಎಂಬವರು ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋಗೆ 53 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ಈ ವಿಡಿಯೋಗೆ ಖ್ಯಾತ ಆರ್‌ಜೆ ನೇತ್ರಾ ಸಹ ಕಮೆಂಟ್ ಮಾಡಿದ್ದಾರೆ. ಇನ್ನುಳಿದಂತೆ ಜನರು ಸಹ ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಬೆನ್ನು ಬಾಗಿದ ಮುದುಕ, ಕೈಯಲ್ಲೊಂದು ಕೋಲು ಹಿಡಿದುಕೊಂಡು, ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ದಯನೀಯ ಸ್ಥಿತಿಯಲ್ಲಿ ಭಿಕ್ಷೆ ಕೇಳುತ್ತಿರುತ್ತಾನೆ. ನಡು ಬಾಗಿದ ಅಜ್ಜನನ್ನು ನೋಡಿದ ಜನರು ಸಹ ಮರುಕುದಿಂದ ಒಂದಿಷ್ಟು ಧನ ಸಹಾಯ ಮಾಡ್ತಾರೆ. ಆದ್ರೆ ಕೆಲವೇ ಕ್ಷಣಗಳಲ್ಲಿ ಬಾಗಿದ ನಡು ಸರಿಯಾಗಿ ಮಾಡಿಕೊಂಡ ಅಜ್ಜ, ಕೈಯಲ್ಲಿನ ಕೋಲನ್ನು ಸ್ಟೈಲ್ ಆಗಿ ಹಿಡಿದುಕೊಂಡು ಸ್ಕೂಟಿ ಬಳಿ ಬರುತ್ತಾನೆ. ನಂತರ ಸ್ಕೂಟಿ ಹತ್ತಿಕೊಂಡು ಅಲ್ಲಿಂದ ಹೋಗುತ್ತಾನೆ.

ಈ ವಿಡಿಯೋವನ್ನು ಕಿರಣ್ ಗೌಡ ಅವರು, ನ್ಯೂ ಸ್ಕ್ಯಾಮ್ ಇನ್ ಬೆಂಗಳೂರು ಎಂಬ ಶೀರ್ಷಿಕೆಯಡಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಆರ್‌ ಜೆ ನೇತ್ರಾ, ನಾನು ಈ ಅಜ್ಜನನ್ನು ಎಂಜಿ ರೋಡ್ ಸಿಗ್ನಲ್‌ನಲ್ಲಿ ನೋಡಿರೋದಾಗಿ ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ಕಿರಣ್ ಗೌಡ, ದಯವಿಟ್ಟು ಈ ವಿಷಯದ ಬಗ್ಗೆ ನಿಮ್ಮ ಕಾರ್ಯಕ್ರಮದಲ್ಲಿ ಮಾತನಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ವೈರಲ್ ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/DdlMmfdx6Pb/

PREV
Read more Articles on
click me!

Recommended Stories

Bengaluru: ಲೋಕ ಅದಾಲತ್‌ 44.28 ಲಕ್ಷ ಕೇಸ್‌ ಇತ್ಯರ್ಥ, ಮುನಿಸು ಮರೆತು ಒಂದಾದ 287 ದಂಪತಿ
ಬಾಯಿಚಪಲಕ್ಕೆ ಸರ್ಕಾರನ ಇಕ್ಕಟ್ಟಿಗೆ ಸಿಲುಕಿಸಿದ್ರಾ ಶಿವಲಿಂಗೇಗೌಡ? 'ಗೌರವ' ಕೊಡೋಕೆ ನಾವ್ ರೆಡಿ, ರಸ್ತೆ ಸರಿ ಮಾಡಿ' ಎಂದ ಸಿಲಿಕಾನ್ ಸಿಟಿ ಜನ!