ಬೈಕ್ ಜಾಥಾ ಮೂಲಕ ಲೆಕ್ಕ ಪರಿಶೋಧಕರಿಂದ ಸ್ವಚ್ಛ ಭಾರತ ಅಭಿಯಾನ!

Published : Oct 03, 2020, 08:46 PM IST
ಬೈಕ್ ಜಾಥಾ ಮೂಲಕ ಲೆಕ್ಕ ಪರಿಶೋಧಕರಿಂದ ಸ್ವಚ್ಛ ಭಾರತ ಅಭಿಯಾನ!

ಸಾರಾಂಶ

ಸ್ವಚ್ಚ ಭಾರತ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಲೆಕ್ಕ ಪರಿಶೋಧಕರಿಂದ ಬೈಕ್ ಜಾಥಾ ಮೂಲಕ ಸ್ವಚ್ಚ ಭಾರತ ಅಭಿಯಾನ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಂದಿ ಭಾಗಿ

ಬೆಂಗಳೂರು(ಅ.03):  ಸ್ವಚ್ಚ ಭಾರತ ಅಭಿಯಾನದ ಮೂಲಕ ದೇಶವನ್ನು ಸ್ವಚ್ಚಗೊಳಿಸುವ ಹಾಗೂ ಶುಚಿಯಾಗಿಡುವ ಜಾಗೃತಿ ಮೂಡುತ್ತಿದೆ. ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸ್ವಚ್ಚತೆಯ ದೃಷ್ಟಿಕೋನ ಬದಲಾಗಿದೆ. ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇದೀಗ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ನಾಯಕತ್ವ ಮತ್ತು ಕೌಶಲ್ಯ ಅಭಿವೃದ್ಧಿ ಸಮಿತಿಯ ವತಿಯಿಂದ ಸ್ವಚ್ಛ ಭಾರತ ಅಭಿಯಾನ ನಡೆಸಿದ್ದಾರೆ.

ಲೆಕ್ಕ ಪರಿಶೋಧಕರು ಬೈಕ್ ಜಾಥಾ ಮೂಲಕ ಸ್ವಚ್ಚ ಭಾರತ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೈಕ್ ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತ್ತು.

 
ಬೈಕ್ ಜಾಥಾಗೆ ಹಿರಿಯ ಲೆಕ್ಕ ಪರಿಶೋಧಕರಾದ ಎಚ್. ಸುಂದರೇಶ್ ಅವರು ಚಾಲನೆ ನೀಡಿದ್ರು. ಜಯನಗರದ ಶಾಲಿನಿ ಮೈದಾನದಿಂದ ರಾಜಾಜಿನಗರದವರೆಗೆ ಈ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ರಾಜಾಜಿನಗರದ ಬಾಲವನ ಉದ್ಯಾನವನ್ನು ಸ್ವಚ್ಛ ಮಾಡಲಾಯಿತ್ತು. ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

PREV
click me!

Recommended Stories

ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ