ಮೆಟ್ರೋ ಪ್ರಯಾಣಿಕರೇ ಗಮನಿಸಿ; ಆ.15ರಂದು ನಿಮ್ಮ ರೈಲು ಡಾ.ಬಿ.ಆರ್. ಅಂಬೇಡ್ಕರ್ ರೈಲು ನಿಲ್ದಾಣ ವಿಧಾನ ಸೌಧಕ್ಕೆ ನಿಲ್ಲುವುದಿಲ್ಲ!

Published : Aug 13, 2026, 04:06 PM IST
Bengaluru Namma Metro

ಸಾರಾಂಶ

2026ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ 'ಫ್ರೀಡಂ ಹಬ್ಬ'ದ ಪ್ರಯುಕ್ತ, ವಿಧಾನಸೌಧ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಪ್ರಯಾಣಿಕರು ಪರ್ಯಾಯವಾಗಿ ಕಬ್ಬನ್ ಪಾರ್ಕ್ ಮತ್ತು ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣಗಳನ್ನು ಬಳಸಲು ನಮ್ಮ ಮೆಟ್ರೋ ಸೂಚಿಸಿದೆ.

ಬೆಂಗಳೂರು (ಆ.13): ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದು, ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಬೃಹತ್ 'ಫ್ರೀಡಂ ಹಬ್ಬ' ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆಯ ಹಿತದೃಷ್ಟಿಯಿಂದ, ಆಗಸ್ಟ್ 15, 2026 ರಂದು ಡಾ. ಬಿ.ಆರ್. ಅಂಬೇಡ್ಕರ್ - ವಿಧಾನಸೌಧ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿ ನಮ್ಮ ಮೆಟ್ರೋ (BMRCL) ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರ ಸೂಚನೆ ಹಾಗೂ ಭದ್ರತಾ ನಿಯಮಗಳ ಅನ್ವಯ BMRCL ಈ ನಿರ್ಧಾರ ಕೈಗೊಂಡಿದೆ. ಪ್ರಯಾಣಿಕರು ಯಾವುದೇ ಅಡಚಣೆಯಿಲ್ಲದೆ ಪ್ರಯಾಣಿಸಲು ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಪ್ರಯಾಣಿಕರಿಗೆ ನಿಲ್ದಾಣದ ಪ್ರಮುಖ ಸಮಯ ಮತ್ತು ನಿರ್ಬಂಧಗಳ ವಿವರ:

ಬೆಳಿಗ್ಗೆ 10:00 ರಿಂದ ರಾತ್ರಿ 9:30 ರವರೆಗೆ: ಈ ಅವಧಿಯಲ್ಲಿ ವಿಧಾನಸೌಧ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶ (Entry) ಮತ್ತು ನಿರ್ಗಮನವನ್ನು (Exit) ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ. ಈ ಸಮಯದಲ್ಲಿ ಮೆಟ್ರೋ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲದೆ ನೇರವಾಗಿ ಚಲಿಸಲಿವೆ.

ರಾತ್ರಿ 9:30 ರಿಂದ ಪ್ರವೇಶ ಪ್ರಾರಂಭ: ಕಾರ್ಯಕ್ರಮ ಮುಗಿದ ಬಳಿಕ ಸಾರ್ವಜನಿಕರು ಹಾಗೂ ಪ್ರಯಾಣಿಕರು ತಮ್ಮ ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ರಾತ್ರಿ 9:30 ರಿಂದ ನಿಲ್ದಾಣದ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.

ರಾತ್ರಿ 10:00 ಗಂಟೆಯವರೆಗೆ ಮಾತ್ರ ನಿರ್ಗಮನ: ನಿಲ್ದಾಣದಿಂದ ಹೊರಬರುವ (Exit) ಸೌಲಭ್ಯವು ರಾತ್ರಿ 10:00 ಗಂಟೆಯವರೆಗೆ ಮಾತ್ರ ಸೀಮಿತವಾಗಿರಲಿದೆ.

ಹೆಚ್ಚುವರಿ ಮೆಟ್ರೋ ರೈಲು ಸೇವೆ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ನಂತರ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಮೆಟ್ರೋ ರೈಲುಗಳ ಸೇವೆಯನ್ನು ಒದಗಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಪರ್ಯಾಯ ಮೆಟ್ರೋ ನಿಲ್ದಾಣಗಳನ್ನು ಬಳಸಿ:

ವಿಧಾನಸೌಧ ನಿಲ್ದಾಣ ಬಂದ್ ಇರುವ ಸಮಯದಲ್ಲಿ ಪ್ರಯಾಣಿಕರು ತಮ್ಮ ಸಾರಿಗೆ ಅಗತ್ಯಗಳಿಗಾಗಿ ಹತ್ತಿರದ ಈ ಕೆಳಗಿನ ನಿಲ್ದಾಣಗಳನ್ನು ಬಳಸಬಹುದಾಗಿದೆ:

  • ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ (Cubbon Park Metro Station)
  • ಸರ್ ಎಂ. ವಿಶ್ವೇಶ್ವರಯ್ಯ - ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣ (Sir M. Visvesvaraya - Central College Metro Station)

ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಮತ್ತು ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಮನವಿ ಮಾಡಿದೆ.

PREV
Read more Articles on
click me!

Recommended Stories

ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರರಣಕ್ಕೆ ಟ್ವಿಸ್ಟ್, ನನಗೆ ಭಾರತದ ಕಾನೂನು ಅನ್ವಯವಾಗಲ್ಲ ಆಪ್ತ ಗೆಳೆಯನ ವಾದ!
ಸೈಕಲ್‌ನಿಂದ ಶುರುವಾದ ಪಯಣ, ಈಗ ಸ್ವಂತ ಮನೆಯತ್ತ: ಕಠಿಣ ಪರಿಶ್ರಮದಿಂದಲೇ ಗೆದ್ದ ಬೆಂಗಳೂರಿನ ಡೆಲಿವರಿ ಪಾರ್ಟ್‌ನರ್‌ ಯಶೋಗಾಥೆ