2037ರ ವೇಳೆಗೆ $400 ಬಿಲಿಯನ್ ಆರ್ಥಿಕತೆಯತ್ತ ಬೆಂಗಳೂರು: ಮೂಲಸೌಕರ್ಯದ ಸವಾಲು ಮೆಟ್ಟಿ ನಿಲ್ಲುವುದೇ ಸಿಲಿಕಾನ್ ಸಿಟಿ?

Published : Sep 11, 2026, 08:00 AM IST
Bengaluru infrastructure Challenges to Achieve $400 Billion Economy by 2037

ಸಾರಾಂಶ

ಬೆಂಗಳೂರು 2037ರ ವೇಳೆಗೆ $400 ಬಿಲಿಯನ್‌ ಆರ್ಥಿಕತೆಯ ಗುರಿ ಹೊಂದಿದೆ. 20-25 ಲಕ್ಷ ಉದ್ಯೋಗ, AI, IT, ಡೀಪ್‌ಟೆಕ್‌ ಉತ್ಪಾದನೆಗೆ ಒತ್ತು ನೀಡಲಾಗಿದೆ. ಮೆಟ್ರೋ, ಸಬರ್ಬನ್‌ ರೈಲು, RRTS, 2ನೇ ವಿಮಾನ ನಿಲ್ದಾಣ, ನೀರು ಮತ್ತು ಕೈಗೆಟುಕುವ ವಸತಿಗೆ ಬಿಗ್‌ ಪ್ಲಾನ್‌ ರೂಪಿಸಲಾಗಿದೆ.

ಬೆಂಗಳೂರು ₹400 ಬಿಲಿಯನ್‌ ಆರ್ಥಿಕ ಗುರಿ: ಮೂಲಸೌಕರ್ಯ ಕೈಹಿಡಿಯುತ್ತಾ?

ಕರ್ನಾಟಕದ ರಾಜಧಾನಿ ಬೆಂಗಳೂರು 2037ರ ವೇಳೆಗೆ $400 ಬಿಲಿಯನ್ ಆರ್ಥಿಕತೆಯ ಗುರಿ ಇಟ್ಟುಕೊಂಡಿದೆ. ಸದ್ಯ ಸುಮಾರು $149 ಬಿಲಿಯನ್‌ ಇರುವ ಬೆಂಗಳೂರು ಮೆಟ್ರೋಪಾಲಿಟನ್ ರೀಜನ್‌ (BMR) ಆರ್ಥಿಕತೆಯನ್ನು ಎರಡೂವರೆ ಪಟ್ಟು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. 2037ರಲ್ಲಿ ಬೆಂಗಳೂರು 500 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಈ ಗುರಿ ಮತ್ತಷ್ಟು ಮಹತ್ವ ಪಡೆದಿದೆ.

$149 ಬಿಲಿಯನ್‌ನಿಂದ $400 ಬಿಲಿಯನ್‌ವರೆಗೆ!

ಬೆಂಗಳೂರು ಸುಮಾರು 1.6 ಕೋಟಿ ಜನಸಂಖ್ಯೆ ಹೊಂದಿದ್ದು, ಕರ್ನಾಟಕದ ಒಟ್ಟು GSDPಗೆ ಸುಮಾರು 40% ಕೊಡುಗೆ ನೀಡುತ್ತಿದೆ. ಹೊಸ Economic Master Plan ಮೂಲಕ ಮುಂದಿನ 11 ವರ್ಷಗಳಲ್ಲಿ 20ರಿಂದ 25 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಗುರಿಯೂ ಇದೆ. ತಂತ್ರಜ್ಞಾನ, AI, GCC, ಸ್ಟಾರ್ಟ್‌ಅಪ್‌ಗಳು ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರಗಳನ್ನು ಬೆಳವಣಿಗೆಯ ಪ್ರಮುಖ ಎಂಜಿನ್‌ಗಳಾಗಿ ಗುರುತಿಸಲಾಗಿದೆ.

AI, IT ಜೊತೆಗೆ Deep-Techಗೆ ಬಿಗ್‌ ಬೂಸ್ಟ್

ಬೆಂಗಳೂರು ಈಗಾಗಲೇ ಭಾರತದ ಪ್ರಮುಖ ಟೆಕ್‌ ಹಬ್‌. ಮುಂದಿನ ಹಂತದಲ್ಲಿ AI, Global Capability Centres, deep-tech ಮತ್ತು ಟೆಕ್‌ ಸ್ಟಾರ್ಟ್‌ಅಪ್‌ಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಯೋಜಿಸಲಾಗಿದೆ. ಜೊತೆಗೆ ಏರೋಸ್ಪೇಸ್‌ ಮತ್ತು ಡಿಫೆನ್ಸ್‌, ಎಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌, ಬಯೋಫಾರ್ಮಾ ಹಾಗೂ ಮೆಡಿಕಲ್‌ ಡಿವೈಸ್‌ಗಳಂತಹ ಕ್ಷೇತ್ರಗಳಲ್ಲಿ ಬೆಂಗಳೂರನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಬೆಳೆಸುವ ಉದ್ದೇಶವಿದೆ.

ಟ್ರಾಫಿಕ್‌ಗೆ ಬ್ರೇಕ್‌ ಹಾಕಲು ಬಿಗ್‌ ಪ್ಲಾನ್‌!

ಆರ್ಥಿಕತೆ ಬೆಳೆದಂತೆ ಟ್ರಾಫಿಕ್‌ ಮತ್ತು ಸಂಚಾರದ ಒತ್ತಡವೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಯೋಜನೆಯ ಪ್ರಮುಖ ಭಾಗವೇ ಸಾರ್ವಜನಿಕ ಸಾರಿಗೆ ವಿಸ್ತರಣೆ. ಈಗಿರುವ ಸುಮಾರು 35% ಸಾರ್ವಜನಿಕ ಸಾರಿಗೆ ಪಾಲನ್ನು 75%ಕ್ಕೆ ಹೆಚ್ಚಿಸುವ ಗುರಿ ಇದೆ.

ಮೆಟ್ರೋ, ಸಬರ್ಬನ್‌ ರೈಲು ಮತ್ತು Regional Rapid Transit System (RRTS) ಮಾರ್ಗಗಳನ್ನು ವಿಸ್ತರಿಸುವುದರ ಜೊತೆಗೆ ಎರಡನೇ ವಿಮಾನ ನಿಲ್ದಾಣ, ರಿಂಗ್‌ ರೋಡ್ ಗಳು, ರೇಡಿಯಲ್‌ ಮತ್ತು ಕಾರ್ಡ್‌ ರಸ್ತೆಗಳು ಹಾಗೂ ಮಲ್ಟಿಮೋಡಲ್‌ ಟ್ರಾನ್ಸ್‌ಪೋರ್ಟ್‌ ಹಬ್‌ಗಳಿಗೂ ಒತ್ತು ನೀಡಲಾಗಿದೆ.

ನೀರು, ಮನೆ, ನಗರ ಯೋಜನೆಗೂ ಆದ್ಯತೆ!

ಬೆಂಗಳೂರು ಬೆಳೆಯಬೇಕಾದರೆ ನೀರಿನ ಭದ್ರತೆ ಮತ್ತು ವಸತಿ ಸಮಸ್ಯೆ ಪರಿಹಾರವೂ ಅಗತ್ಯ. ಹೆಚ್ಚುವರಿ ನೀರು ಪೂರೈಕೆ, ಶುದ್ಧೀಕರಿಸಿದ ನೀರಿನ ಮರುಬಳಕೆ ಮತ್ತು ವಿತರಣಾ ವ್ಯವಸ್ಥೆಯ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ.

ಇದರ ಜೊತೆಗೆ ಕೈಗಾರಿಕಾ, ಗಿಗ್‌ ಮತ್ತು ಸೇವಾ ವಲಯದ ಕಾರ್ಮಿಕರಿಗೆ ಕೈಗೆಟುಕುವ ಮನೆಗಳು ಮತ್ತು ಬಾಡಿಗೆ ವಸತಿ, ಯೋಜಿತ ನಗರಗಳು, ಬಿಸಿನೆಸ್‌ ಜಿಲ್ಲೆಗಳು ಹಾಗೂ Transit-Oriented Developmentಗೂ ಒತ್ತು ನೀಡಲಾಗಿದೆ.

$400 ಬಿಲಿಯನ್‌ ಗುರಿ ಸಾಧ್ಯವೇ?

ಗುರಿ ದೊಡ್ಡದಾಗಿದೆ; ಅದಕ್ಕೆ ತಕ್ಕ ಮೂಲಸೌಕರ್ಯ ನಿರ್ಮಾಣವೇ ದೊಡ್ಡ ಸವಾಲು. ರಸ್ತೆ, ನೀರು, ಸಾರ್ವಜನಿಕ ಸಾರಿಗೆ, ವಸತಿ ಮತ್ತು ನಗರ ಯೋಜನೆಗಳು ಆರ್ಥಿಕ ಬೆಳವಣಿಗೆಯ ವೇಗಕ್ಕೆ ಸರಿಯಾಗಿ ಸಾಗಿದರೆ ಬೆಂಗಳೂರು ಮತ್ತಷ್ಟು ಜಾಗತಿಕ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಬಹುದು. ಸರ್ಕಾರದ ಕರಡು ಯೋಜನೆ ಈಗ ಸಂಬಂಧಿತ ಇಲಾಖೆಗಳ ಚರ್ಚೆಯ ಹಂತದಲ್ಲಿದ್ದು, ಬಳಿಕ ಅಂತಿಮ ಕಾರ್ಯಯೋಜನೆ ರೂಪುಗೊಳ್ಳಲಿದೆ.

PREV
Read more Articles on
click me!

Recommended Stories

ಸರ್ಕಾರದ ಹಣ ಉಳಿಸಲು ಪೊಲೀಸ್ ಇಲಾಖೆಗೆ ಇನ್ನುಂದೆ ಗುತ್ತಿಗೆ ವಾಹನ: ಲೀಸ್ ಮಾದರಿಯಲ್ಲಿ 1,000 ವಾಹನಕ್ಕೆ ಸರ್ಕಾರ ಪ್ಲಾನ್
ಸೈಟ್‌ಗಾಗಿ ಅರ್ಜಿ ಸಲ್ಲಿಸಿದವ ಆಕಾಶ ನೋಡುತ್ತಿರುವಾಗಲೇ ಸುಸ್ಥಿತಿಯಲ್ಲಿರುವ BDA ಕಚೇರಿ ಕೆಡವಿ ಗಗನಚುಂಬಿ ಕಟ್ಟಡ ಕಟ್ಟಲು ಮೆಗಾಪ್ಲ್ಯಾನ್‌