
ಬೆಂಗಳೂರು, (ಸೆ.25): ಪ್ರಜ್ವಲ್ ರೇವಣ್ಣ ಮಾದರಿಯ ರೀತಿಯಲ್ಲಿ ಸಾವಿರಾರು ಮಹಿಳೆಯರ ಜೊತೆ ಕಾಮದಾಟದಲ್ಲಿ ಭಾಗಿಯಾಗಿ ಈಗ ಎಸ್ಕೇಪ್ ಆಗಿರುವ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಹಾಗೂ ಕ್ರಿಕೆಟ್ ಕೋಚ್ ಮ್ಯಾಥ್ಯೂನ ಇನ್ನಷ್ಟು ವಿವರಗಳನ್ನು ಸಂತ್ರಸ್ಥೆ ಬಹಿರಂಗ ಮಾಡಿದ್ದಾಳೆ. ಮದ್ವೆಯಾಗುವುದಾಗಿ ನಂಬಿಸಿ, ಗರ್ಭಿಣಿ ಮಾಡಿ ಮೋಸ ಮಾಡಿದ್ದಾನೆ ಎಂದು ಮಹಿಳೆಯೊಬ್ಬಳು ದೂರು ನೀಡಿದ್ದಲ್ಲದೆ, ಮ್ಯಾಥ್ಯೂನ ಕಾಮಕಾಂಡವನ್ನು ಜನರಿಗೆ ತಿಳಿಸಿದ್ದಾಳೆ. ನಾನು ಕ್ರಿಶ್ಚಿಯನ್ ನೀನು ಹಿಂದೂ ಮದುವೆಯಾಗಲ್ಲ ಎಂದು ಹೇಳಿ ಮ್ಯಾಥ್ಯೂ ಎಸ್ಕೇಪ್ ಆಗಿದ್ದಾನೆ. ಸಂಬಂಧ ಮ್ಯಾಥ್ಯೂ ಬಗ್ಗೆ ಮಾತನಾಡಿರುವ ಸಂತ್ರಸ್ಥ ಮಹಿಳೆ, 2500 ವಿಡಿಯೋ ಪೈಕಿ ಒಂದು ವಿಡಿಯೋ ಮಾತ್ರ ಅಪ್ರಾಪ್ತ ಯುವತಿಯದ್ದು ಎಂದು ಹೇಳಿದ್ದಾರೆ.
ಕಳೆದ ವರ್ಷ ಮ್ಯಾಥ್ಯೂ ಸ್ಕೂಲ್‌ನಲ್ಲಿಯೇ ಪರಿಚಯ ಆಗಿದ್ದ. ನನ್ನ ಮಗಳು ಕೂಡ ಅದೇ ಸ್ಕೂಲ್‌ನಲ್ಲಿ ಓದ್ತಾ ಇದ್ದಳು. ಆಕೆಯಿಂದಲೇ ನನಗೆ ಪರಿಚಯ ಆಗ್ತಾರೆ. ನಂತರ ನಂದು ಕಾನೂನುಬದ್ಧವಾಗಿ ವಿಚ್ಛೇದನ ಆಗುತ್ತೆ. ಅದಾದ ಮೇಲೆ ಮ್ಯಾಥ್ಯೂ ನನಗೆ ಲೈಫ್ ಕೊಡ್ತಿನಿ ಅಂತಾ ಹೋಪ್ ನೀಡಿದ್ದರು. ನನ್ನ ತಂದೆ-ತಾಯಿ ಚಿಕ್ಕ ವಯಸ್ಸಲ್ಲೇ ತೀರಿಕೊಂಡಿದ್ದರು. ಕುಟುಂಬದಿಂದ ಯಾರೂ ಬೆಂಬಲಕ್ಕೆ ಇಲ್ಲ. ನಾನು ಒಬ್ಬಳೇ ಇರೋದು. ಇವರನ್ನೇ ನಂಬಿ ನಾನು ಬಂದಿದ್ದೆ.
ಕಳೆದ ಒಂದು ವರ್ಷದಿಂದ ಜೊತೆಯಲ್ಲಿದ್ದರು. ಎಲ್ಲೂ ಬಿಟ್ಟುಹೋಗಿಲ್ಲ. ಎಲ್ಲಾ ಕಡೆ ನನ್ನನ್ನು ವೈಫ್ ಅಂತಲೇ ಹೇಳಿಕೊಂಡು ಬರುತ್ತಿದ್ದರು. ಸ್ಕೂಲ್‌ಗೆ ಹಾಗೂ ನಾವಿರುವ ಸ್ಥಳೀಯರಲ್ಲಿ ಎಲ್ಲರಿಗೂ ಇದು ಗೊತ್ತಿದೆ. ಈಗ ನನ್ನ ಪ್ರೆಗ್ನೆನ್ಸಿ ಕನ್ಫರ್ಮ್ ಆಗಿದೆ. ಅವಳನ್ನ ಬಿಟ್ಬಿಡು ಅಂತಾ..ಅವರ ತಂದೆ-ತಾಯಿ ತುಂಬಾ ಒತ್ತಡ ಹಾಕ್ತಾ ಇದ್ರು.
ಕಳೆದ ಏಪ್ರಿಲ್ ತಿಂಗಳಲ್ಲಿ ಈತನ ಪುರಾಣ ಗೊತ್ತಾಗಿತ್ತು. ಎರಡು ಫೋನ್‌ಗಳ ಪೈಕಿ ಒಂದು ಫೋನ್ ಮರೆತು ಮೈಸೂರಿಗೆ ಹೋಗಿದ್ದ. ಆಗ ಇವನ ಮೊಬೈಲ್‌ನಲ್ಲಿ 2 ಸಾವಿರ, 2500ಕ್ಕೂ ವಿವಿಧ ಮಹಿಳೆಯ ಜೊತೆಗಿನ ಲೈಂಗಿಕ ಸಂಪರ್ಕದ ವಿಡಿಯೋ ಸಿಕ್ಕಿತ್ತು. ಎಲ್ಲವೂ ಕೂಡ ಬೇರೆ ಬೇರೆ ಹುಡುಗಿಯರು. ಅದು ನೋಡಿ ನನಗೆ ಶಾಕ್ ಆಗಿತ್ತು. ಅವನಿಗೆ ಕಾಲ್ ಮಾಡಿ ಇದರ ಬಗ್ಗೆ ಕೇಳಿದ್ದೆ. ಏನಕ್ಕೆ ಇದೆಲ್ಲಾ ಇಟ್ಕೊಂಡಿದ್ದೀರಿ, ಏನಾಯ್ತು ಎಂದು ಕೇಳಿದ್ದೆ. ನಾನು ಬರೋವರೆಗೂ ಯಾವ ವಿಡಿಯೋ ಕೂಡ ಡಿಲೀಟ್ ಮಾಡ್ಬೇಡ. ಅದಕ್ಕೊಂದು ರೀಸನ್ ಇದೆ ಅಂತಾ ಹೇಳಿದ್ದ. ನಾನು ಏನಕ್ಕೆ ಇದೆಲ್ಲಾ ಬೇಕು. ಇದೆಲ್ಲಾ ಆಗಿರೋ ವಿಚಾರವಲ್ವಾ ಅಂದಿದ್ದೆ. ನಾನಿದ್ದಾಗ ಇದೆಲ್ಲಾ ಯಾಕೆ ಮಾಡ್ತೀಯಾ ಅಂತಾ ಪ್ರಶ್ನೆ ಮಾಡಿದ್ದೆ.
ಆದ್ರೆ ಆತ ನನ್ನ ಮೊಬೈಲ್ ಮುಟ್ಟೋಕೆ ನಿನಗೆ ರೈಟ್ಸ್ ಇಲ್ಲ ಅಂತೆಲ್ಲಾ ಹೇಳಿದ್ದ. ಅದಾದ 2 ದಿನಗಳ ಬಳಿಕ ಮನೆಗೆ ಬಂದಿದ್ದ. ವಿಡಿಯೋ ಎಲ್ಲಾ ಡಿಲೀಟ್ ಮಾಡಿದ್ರು. ಆದರೆ, ಅದಕ್ಕೂ ಮುಂಚೆ ನಾನು ಸೇಫ್ಟಿ ಪರ್ಪಸ್‌ಗೆ ಅಂತಾ ಎಲ್ಲಾ ಹೆಣ್ಮಕ್ಕಳದು ಒಂದೊಂದು ಫೋಟೋ, ವಿಡಿಯೋಗಳನ್ನ ನನ್ನ ಫೋನ್‌ನಲ್ಲಿ ಸೇಫ್ಟಿ ಫೋಲ್ಡರ್‌ಮಾಡಿ ಹಾಕಿಕೊಂಡಿದ್ದೇನೆ.
ನನ್ನ ಪ್ರೆಗ್ನೆನ್ಸಿ ಕನ್ಫರ್ಮ್ ಆದ ಬಳಿಕ ಅವರ ತಂದೆ-ತಾಯಿ ಕಳೆದ ಒಂದು ತಿಂಗಳಿನಿಂದ ನನ್ನನ್ನು ಬಿಡಿಸಬೇಕು ಅಂತಾ ಪ್ಲ್ಯಾನ್ ಮಾಡ್ತಾ ಇದ್ದರು. ಆದರೆ, ಶನಿವಾರ ನನ್ನ ಪ್ರೆಗ್ನೆನ್ಸಿ ರಿಪೋರ್ಟ್, ನಮ್ಮಿಬ್ಬರ ಫೋಟೋ ಎಲ್ಲವನ್ನೂ ತೆಗೆದುಕೊಂಡು, ಹಳದಿ ಬಣ್ಣದ ಹಾಳೆಯಲ್ಲಿ ಏನೋ ಬರೆದಿಟ್ಟು ಹೋಗಿದ್ದಾರೆ. ನಾವು 15 ತಿಂಗಳಿನಿಂದ ಲಿವಿಂಗ್ ರಿಲೇಷನ್‌ಷಿಪ್‌ನಲ್ಲಿದ್ದೇವೆ. ಅವರ ತಂದೆ-ತಾಯಿಗೂ ಇದು ಗೊತ್ತು. ಅವರ ತಾಯಿ ಮ್ಯಾಥ್ಯೂಗೆ ಆಕೆಯ ಜೊತೆಯಲ್ಲಿರು ಆದರೆ ಲೀಗಲ್ ಆಗಿ ಮದುವೆ ಆಗೋಕೆ ಹೋಗಬೇಡ ಅಂತಿದ್ದರು. ಈ ಬಗ್ಗೆ ಕೋಣನಕುಂಟೆಯಲ್ಲಿ ಅವರ ತಾಯಿ, ತಂದೆ, ಅಕ್ಕ ದೂರು ಕೂಡ ಕೊಟ್ಟಿದ್ದಾರೆ. ಆದ್ರೆ ಆಗ ಈತ ನನ್ನನ್ನು ಬಿಟ್ಟುಕೊಟ್ಟಿರಲಿಲ್ಲ.
ಅವರ ವಿಡಿಯೋಗಳ ಪೈಕಿ ಒಂದು ಹುಡುಗಿ ಮೈನರ್ ಇದ್ದಳು. ಆದರೆ, ಈಗ ಆ ಹುಡುಗಿ ಡಿಗ್ರಿ ಎಲ್ಲಾ ಮುಗಿಸಿದ್ದಾಳೆ. ಇದು ತುಂಬಾ ಹಳೆಯ ವಿಡಿಯೋಗಳು. ಒಬ್ಬಾಕೆ ಮಾತ್ರ ಮೈನರ್. ಮತ್ತೆಲ್ಲಾ ಮದುವೆಯಾಗಿ ಮಕ್ಕಳಿರುವಂಥ ಮಹಿಳೆಯರ ಜೊತೆಗಿನ ವಿಡಿಯೋಗಳು. ಕ್ರಿಕೆಟ್ ಕ್ಯಾಂಪ್‌ಗೆ ಬರೋ ಯಾರ ವಿಡಿಯೋಗಳು ಅದರಲ್ಲಿಲ್ಲ. ಅದಲ್ಲೆ ಕೆಲವು ಸ್ಕೂಲ್ ಟೀಚರ್‌ಗಳ ವಿಡಿಯೋ. ಈತ ಸ್ಕೂಲ್ ಕೆಲಸ ಬಿಟ್ಟು ಒಂದು ವರ್ಷ ಆಗಿದೆ. ಈಗ ಆತ ಅಕಾಡೆಮಿ ಮಾತ್ರ ನಡೆಸ್ತಿದ್ದಾರೆ.