'₹12 ಲಕ್ಷ ಸ್ಯಾಲರಿ 4 ಲಕ್ಷ ಫೀಲ್ ಆಗ್ತಿದೆ' ಬೆಂಗಳೂರಿಗೆ ಬರಬೇಡಿ ಎಂದ ಟೆಕ್ಕಿ, ಕೊಟ್ಟ ಕಾರಣ ಏನು ಗೊತ್ತಾ?

Published : Oct 07, 2026, 07:20 PM IST
Bengaluru expensive city

ಸಾರಾಂಶ

Bengaluru expensive city: ಬೆಂಗಳೂರು ನಗರದಲ್ಲಿ ಜೀವನ ವೆಚ್ಚ ವಿಪರೀತವಾಗಿ ಹೆಚ್ಚಾಗುತ್ತಿದ್ದು, ಐಟಿ ಉದ್ಯೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ವರ್ಷಕ್ಕೆ 12 ಲಕ್ಷ ರೂ. ಗಳಿಸಿದರೂ ಅದು 4 ಲಕ್ಷದಂತೆ ಭಾಸವಾಗುತ್ತಿದೆ ಎಂದು ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಮನೆ ಬಾಡಿಗೆ, ಟ್ರಾಫಿಕ್ ಮತ್ತು ಮನರಂಜನೆ ವೆಚ್ಚಗಳು ದುಬಾರಿಯಾಗಿರುವುದೇ ಇದಕ್ಕೆ ಮುಖ್ಯ ಕಾರಣ.

ಬೆಂಗಳೂರು ಈಗ ದುಬಾರಿ ಊರು ಆಗ್ತಿದೆ. ಐಟಿ ಉದ್ಯೋಗಿಗಳು ಹೆಚ್ಚು ವಾಸಿಸುವ ಈ ನಗರದಲ್ಲಿ ಎಲ್ಲವೂ ಕಾಸ್ಟ್ಲಿ ಕಾಸ್ಟ್ಲಿ. ಸಣ್ಣಪುಟ್ಟ ಮಧ್ಯಮ ವರ್ಗದ ಉದ್ಯೋಗಿಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಇನ್ನೂ ತಿಂಗಳಿಗೆ ಲಕ್ಷ ಲಕ್ಷ ಎಣಿಸೋರ ಸ್ಥಿತಿಯೂ ಅಂಥ ನೆಮ್ಮದಿಯಾಗಿ ಏನೂ ಇಲ್ಲ.

ಶಿವಾಂಕ್ ಗೋಯೆಲ್ ಎಂಬ ಉದ್ಯೋಗಿಯೊಬ್ಬ ತಮ್ಮ ನೋವುಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವ ಇವರು.. ಬೆಂಗಳೂರು ಬದುಕಲು ಎಷ್ಟು ಕಷ್ಟ ಆಗ್ತಿದೆ ಅನ್ನೋದನ್ನು ವಿವರಿಸಿದ್ದಾರೆ. ಬೆಂಗಳೂರಲ್ಲಿ ವರ್ಷಕ್ಕೆ 12 ಲಕ್ಷ ರೂಪಾಯಿ ಗಳಿಸುವುದು 4 ಲಕ್ಷ ರೂಪಾಯಿ ಗಳಿಸಿದ ಅನುಭವ ಆಗುತ್ತಿದೆ ಎಂದು @thezeroquotient ಎಂಬ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಮುಂದುವರಿದು ಮಾತನ್ನಾಡಿರುವ ಅವರು.. ತಿಂಗಳಿಗೆ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಸಂಬಳ ಇದೆ ಅಂದರೆ ಅಂಥವ್ರು ಸಿಲಿಕಾನ್ ಸಿಟಿಗೆ ಬರುವ ಮುಂಚೆ ಯೋಚನೆ ಮಾಡಬೇಕು. ಅವರೆಲ್ಲ ಬೆಂಗಳೂರಿಗೆ ಬರದಿದ್ದರೇ ಒಳ್ಳೆಯದು. ನಿಮಗೆ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಸಂಬಳ ಇದ್ದರೆ ಬೆಂಗಳೂರಿಗೆ ಬರಬೇಡಿ ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದೇ ವೇಳೆ ಬೆಂಗಳೂರಲ್ಲಿ ಹೇಗೆ ಖರ್ಚು ಆಗಲಿದೆ ಎಂಬುದನ್ನು ವಿವರಿಸಿರುವ ಅವರು.. ಬೆಂಗಳೂರಿನ ಮನರಂಜನೆಯ ಕಲ್ಪನೆಯು ಕೆಫೆಗಳು, ರೆಸ್ಟೋರೆಂಟ್‌ಗಳು, ಇತರೆ ಕಾರ್ಯಕ್ರಮಗಳ ಜೊತೆ ನಮ್ಮ ವೆಚ್ಚಗಳು ಕನೆಕ್ಟ್ ಆಗಿವೆ. ನಮ್ಮ ಪ್ರತಿಯೊಂದು ಆಕ್ಟಿವಿಟಿಗಳಲ್ಲೂ ವೆಚ್ಚಗಳು ಇರುತ್ತವೆ. ಎಲ್ಲಾ ಸಣ್ಣ, ಪುಟ್ಟ ಮನರಂಜನೆ ಕಾರ್ಯಕ್ರಮಗಳಿಗೆ ಟಿಕೆಟ್ ಇರುತ್ತದೆ. ಹವ್ಯಾಸಗಳು ಹೆಚ್ಚಾದಾಗ ನಾವು ಹೆಚ್ಚು ಖರ್ಚು ಮಾಡದೇ ಅದರಿಂದ ಹರ ಬರೋದು ತುಂಬಾನೇ ಕಷ್ಟ ಎಂದು ವಾದಿಸುತ್ತಿದ್ದಾರೆ.

ಅಷ್ಟೇ ಅಲ್ಲ.. ಅವರು ವಸತಿ ಮತ್ತು ಸಾರಿಗೆ ವೆಚ್ಚವನ್ನು ಎತ್ತಿ ತೋರಿಸಿದ್ದಾರೆ. ಮನೆಗಳಲ್ಲಿ ಉಳಿದುಕೊಳ್ಳಬೇಕು ಅಂದರೆ ಅಡ್ವಾನ್ಸ್ ಆಗಿ 2 ಲಕ್ಷ ರೂಪಾಯಿ ನೀಡೋದು ಸಾಮಾನ್ಯವಾಗಿಬಿಟ್ಟಿದೆ. ಅದನ್ನು ಜನರು ಯಾವುದೇ ಪ್ರಶ್ನೆ ಮಾಡದೆಯೇ ಒಪ್ಪಿಕೊಂಡು ಬಿಡುತ್ತಾರೆ. ನೀವು ಐದು ಕಿಲೋ ಮೀಟರ್ ದೂರದ ಕ್ಯಾಬ್ ಪ್ರಯಾಣಕ್ಕೆ ಒಮೊಮ್ಮೆ 600 ರೂಪಾಯಿ ಖರ್ಚು ಆಗಲಿದೆ. ಜೊತೆಗೆ ಆ ಪ್ರಯಾಣದ ಅವಧಿ ಒಂದು ಗಂಟೆಯನ್ನೂ ಮೀರಿ ಹೋಗಬಹುದು.

ಬೆಂಗಳೂರಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಏನೇನು?

  • ನಗರವು 12 LPA ಸಂಬಳ 4 LPA ಜೈಸಿ ಲಗ್ತಿ ಹೈ ಅನ್ನು ವಾಣಿಜ್ಯೀಕರಿಸಿದೆ
  • 1BHK ಸುಮಾರು 25,000 ರಿಂದ 40,000 ರೂ.ಗಳ ವರೆಗೆ ಏರಿಕೆ ಆಗ್ತಿದೆ
  • ಇನ್ನು ಸೆಕ್ಯೂರಿಟಿ ಡೆಪಾಸಿಟ್ ದಿನದಿಂದ ದಿನಕ್ಕೆ ಹೆಚ್ಚಾಗುತಲೇ ಇದೆ
  • ವಿಪರಿತ ಟ್ರಾಫಿಕ್ ಸಮಸ್ಯೆಯಿದ್ದು ಪ್ರಯಾಣದ ಅವಧಿ ಕೂಡ ಹೆಚ್ಚು
  • ಪ್ರಯಾಣದ ವೆಚ್ಚ, ಫುಡ್ ಸೇರಿದಂತೆ ದುಬಾರಿ ಆನ್‌ಲೈನ್ ವೆಚ್ಚ

ಇವೆಲ್ಲ ಬೆಂಗಳೂರಲ್ಲಿ ಕೆಲಸ ಮಾಡಿಕೊಂಡು, ಬಾಡಿಗೆ ಕಟ್ಟಿಕೊಂಡು ಬದುಕುತ್ತಿರುವ ಉದ್ಯೋಗಿಗಳ ಮೇಲೆ ಬರೆ ಹಾಕುತ್ತಿದೆ ಅನ್ನೋದು ಗೋಯೆಲ್ ವಾದ. ಆದರೆ ಗೋಯೆಲ್ ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಕೈಗೆಟುಕುವ ಕೆಫೆಗಳು, ಉಚಿತ ಕಾರ್ಯಾಗಾರಗಳು ಮತ್ತು ಭಾರೀ ವೆಚ್ಚದ ಅಗತ್ಯವಿಲ್ಲದ ಸಮುದಾಯ ಕಾರ್ಯಕ್ರಮಗಳು ಸಹ ನಡೆಯುತ್ತವೆ ಎಂದು ವಾದಿಸಿದ್ದಾರೆ. ಆದರೂ ವರ್ಷಕ್ಕೆ 12 ಲಕ್ಷ ರೂ.ಗಳ ಪ್ಯಾಕೇಜ್ ತುಂಬಾ ಹೆಚ್ಚು ಎಂದು ಕಾಣಸಿದರೂ ಬೆಂಗಳೂರಲ್ಲಿ ಆಗುವ ಖರ್ಚು, ವೆಚ್ಚಗಳನ್ನ ಪರಿಗಣಿಸಿದ್ರೆ ನಗರ ಬದುಕು ತುಂಬಾ ಕಷ್ಟ ಎನಿಸುತ್ತದೆ..

PREV
Read more Articles on
click me!

Recommended Stories

'ನನ್ನ ಹಾಸನ ತಂಗಿ ಎನ್ನುತ್ತಾರೆ' 10 ವರ್ಷಗಳ ಹಿಂದಿನ ಸ್ಪೆಷಲ್ ಫೋಟೋ ಹಂಚಿಕೊಂಡು ಜಾಹ್ನವಿ ಭಾವುಕ
ಹುಟ್ಟಿದ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶಿಸಿದ ಕಂದಮ್ಮ: ಜೀರೋಧಾದ ಅತ್ಯಂತ ಕಿರಿಯ ಗ್ರಾಹಕನಾದ ನವಜಾತ ಶಿಶು