'ನನ್ನ ಹಾಸನ ತಂಗಿ ಎನ್ನುತ್ತಾರೆ' 10 ವರ್ಷಗಳ ಹಿಂದಿನ ಸ್ಪೆಷಲ್ ಫೋಟೋ ಹಂಚಿಕೊಂಡು ಜಾಹ್ನವಿ ಭಾವುಕ

Published : Oct 07, 2026, 05:47 PM IST
jahnavi state general secretary JDS

ಸಾರಾಂಶ

ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ನಿರೂಪಕಿ ಜಾಹ್ನವಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಭಾವುಕರಾಗಿರುವ ಅವರು, 10 ವರ್ಷಗಳ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಂದರ್ಶನ ಮಾಡಿದ್ದ ಕ್ಷಣವನ್ನು ಸ್ಮರಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಂಗಳೂರು (ಅಕ್ಟೋಬರ್, 7): ನಿರೂಪಕಿಯಾಗಿ, ರಿಯಾಲಿಟಿ ಶೋ ಹಾಗೂ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ಬಿಗ್‌ಬಾಸ್ ಮಾಜಿ ಸ್ಪರ್ಧಿ ಜಾಹ್ನವಿಗೆ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ಸಿಕ್ಕಿರೋದು ಗೊತ್ತಿರೋ ವಿಚಾರ. ಜಾಹ್ನವಿ ಅವರನ್ನು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿ ಜಾಹ್ನವಿ ಅವರು ತುಂಬಾ ಎಮೋಷನಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಫೋಟೋಗಳನ್ನ ಹಂಚಿಕೊಂಡು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಜಾಗ್ವರ್ ಸಿನಿಮಾ ರಿಲೀಸ್ ಸಂದರ್ಭ. ಈ ವೇಳೆ ಅವರು ಚಿತ್ರದ ಹೀರೋ ನಿಖಿಲ್ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿಯನ್ನ ಸಂದರ್ಶನ ನಡೆಸಿದ್ದರು. ಆ ಕ್ಷಣದ ಫೋಟೋವನ್ನು ಜಾಹ್ನವಿ ಶೇರ್ ಮಾಡಿದ್ದಾರೆ.

ಏನೆಂದು ಬರೆದುಕೊಂಡಿದ್ದಾರೆ?

2016, ಹತ್ತು ವರ್ಷಗಳ ಹಿಂದೆ ಜಾಗ್ವಾರ್ ಸಿನಿಮಾ ಸಂದರ್ಶನದ ಸಂದರ್ಭ.. ಆ ಸಂದರ್ಭದಲ್ಲಿ ನಾನೆಂದೂ ಎಣಿಸಿರಲಿಲ್ಲ, ಮುಂದೊಂದು ದಿನ ನಾನು ಜೆಡಿಎಸ್ ಪಕ್ಷ ಸೇರುತ್ತೇನೆ ಎಂದು.. ಆಂಕರ್ ಆಗಿ “ನಮ್ಮ ಜೊತೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ

H D ಕುಮಾರಸ್ವಾಮಿಯವರಿದ್ದಾರೆ'' ಇಂದ ಇವತ್ತು ಕುಮಾರಣ್ಣ ನವರೆಗೆ .. ಎಲ್ಲವೂ ದೈವನಿರ್ಣಯ..

ನನ್ನನ್ನು ಅಣ್ಣ ಹಾಸನತಂಗಿ ಎಂದು ಕರೆಯುತ್ತಾರೆ.. ಅಣ್ಣ ನನ್ನ ಮಾತು, ಕೆಲಸವನ್ನು ಗುರುತಿಸಿ ಚೆನ್ನಾಗಿ ಮಾತನಾಡುತ್ತೀಯ ಎಂದು ಗುರುತಿಸಿದ್ದು ಪದವಿಗಿಂತ ದೊಡ್ಡದು.. ಪಕ್ಷದ ಕಾರ್ಯಕರ್ತರು ತೋರಿಸುತ್ತಿರುವ ಪ್ರೀತಿ ಹುದ್ದೆಗೂ ಮೀರಿದ್ದು.. ಈ posting ಹೆಸರಿಗಷ್ಟೇ .. ನಾನು ಯಾವತ್ತಿದ್ದರೂ ಪಕ್ಷದ ನಿಷ್ಟಾವಂತ ಕಾರ್ಯಕರ್ತೆಯೇ. ನಾನು ಒಂಟಿ , ನನಗೆ ಯಾರು ಇಲ್ಲ ಅನ್ನೋ ಭಾವನೆ ನನಗೆ ಈಗ ಕಿಂಚಿತ್ತೂ ಇಲ್ಲ. ನನ್ನ ಕುಟುಂಬ ಈಗ ದೊಡ್ಡದಾಗಿದೆ.. ನನ್ನ ಜೆಡಿಎಸ್ ಕುಟುಂಬ ನನ್ನ ಮೇಲೆ ಸುರಿಸುತ್ತಿರುವ ಪ್ರೀತಿ ವರ್ಣಿಸಲಾಗದು.. ನಾನೇ ಪುಣ್ಯವಂತೇ ಅನ್ನೋ ಭಾವನೆ ಮೂಡಿಸುತ್ತದೆ..

''ನಡಿಯೋ ದಾರಿಯಲ್ಲಿ ನಿಯತ್ತು ಇದ್ದರೆ ತಡಿಯೋ ತಾಕತ್ತು ಯಾರಿಗೂ ಇರುವುದಿಲ್ಲ ಅನ್ನೋ ನಂಬಿಕೆ ನನ್ನದು'' 

ನನ್ನ ಜೀವನದಲ್ಲಿ ಆಗುತ್ತಿರುವ ಎಲ್ಲಾ ಬದಲಾವಣೆಗೂ ನಾನು 16 ವರ್ಷದಿಂದ ನಿಷ್ಟೆಯಿಂದ ಮಾಡಿಕೊಂಡು ಬರುತ್ತಿರುವ ಮಂಗಳಗೌರಿ ವ್ರತದ ಪ್ರಭಾವವೇ ಕಾರಣ ಅನ್ನೋದು ನನ್ನ ಬಲವಾದ ನಂಬಿಕೆ.. ಕುಮಾರಣ್ಣನಂತಹ ಮೇರು ವ್ಯಕ್ತಿತ್ವದ ನಾಯಕನ ಅಡಿಯಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ರಾಜ್ಯದ ರೈತರ, ಜನರ ಧ್ವನಿಯಾಗಿ ಕೆಲಸ ಮಾಡುತ್ತಿರುವುದು ನಿಜಕ್ಕೂ ತೃಪ್ತಿ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಇದೇ ಪೋಸ್ಟ್‌ನಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ನೇಮಕಾತಿ ಪತ್ರವನ್ನು ಸ್ವೀಕರಿಸಿದ ಫೋಟೋವನ್ನೂ ಜಾಹ್ನವಿ ಹಂಚಿಕೊಂಡಿದ್ದಾರೆ. ಟಿವಿಯಲ್ಲಿ ನ್ಯೂಸ್ ಆಂಕರ್ ಆಗಿ ವೃತ್ತಿಜೀವನ ಆರಂಭಿಸಿದ್ದ ಜಾಹ್ನವಿ, ತದನಂತರ ಕಿರುತೆರೆಯ ಶೋಗಳು, ರಿಯಾಲಿಟಿ ಶೋ ಹಾಗೂ ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಕಳೆದ ಮೇ ತಿಂಗಳಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ಜೆಡಿಎಸ್ ಪಕ್ಷ ಸೇರ್ಪಡೆಯಾಗುವ ಮೂಲಕ ತಮ್ಮ ರಾಜಕೀಯ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಪಕ್ಷಕ್ಕೆ ಬಂದ ಕಡಿಮೆ ಅವಧಿಯಲ್ಲೇ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಬೈರಮಂಗಲದ ರೈತರ ಪರವಾಗಿ ಧ್ವನಿಯೆತ್ತಿ ಗಮನ ಸೆಳೆದಿದ್ದರು. ಬೈರಮಂಗಲದ ಫಲವತ್ತಾದ ಸುಮಾರು 9,500 ಎಕರೆ ಜಮೀನನ್ನು ಸರ್ಕಾರ ಪಡೆದುಕೊಂಡು 'ಗ್ರೇಟರ್ ಬೆಂಗಳೂರು' ಮಾಡಲು ಹೊರಟಿರುವುದನ್ನು ವಿರೋಧಿಸಿ, ಬಿಡದಿ ಟೌನ್‌‌ಶಿಪ್ ವಿರುದ್ಧದ ಪಾದಯಾತ್ರೆಯಲ್ಲಿ ಯುವ ಹೋರಾಟಗಾರ್ತಿಯಾಗಿ ಮುಂಚೂಣಿಯಲ್ಲಿ ನಿಂತಿದ್ದರು.

PREV
Read more Articles on
click me!

Recommended Stories

ಹುಟ್ಟಿದ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶಿಸಿದ ಕಂದಮ್ಮ: ಜೀರೋಧಾದ ಅತ್ಯಂತ ಕಿರಿಯ ಗ್ರಾಹಕನಾದ ನವಜಾತ ಶಿಶು
ಬೆಂಗಳೂರು ಸಿಲಿಂಡರ್ ಸ್ಫೋಟ ಪ್ರಕರಣ: ಗಂಭೀರ ಗಾಯಗೊಂಡಿದ್ದ ರಾಯಚೂರು ಮೂಲದ ತಾಯಿ-ಮಗು ಸಾವು