ಅಪ್ಪ-ಮಗಳ ಸ್ಕೆಚ್‌ಗೆ ಬಲಿಯಾಯ್ತು ಕೂಡು ಕುಟುಂಬ; ಆಸ್ತಿ ದ್ವೇಷವೋ, ಸೌಂದರ್ಯದ ಕೀಳರಿಮೆಯೋ? ರಹಸ್ಯ ಬಿಚ್ಚಿಟ್ಟ ಸಂಬಂಧಿ!

Published : Nov 06, 2026, 05:46 PM IST
Indushekar Case

ಸಾರಾಂಶ

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಹತ್ತಿರದ ಸಂಬಂಧಿ ನೀಡಿರುವ ಆಘಾತಕಾರಿ ಹೇಳಿಕೆ ಹತ್ತಾರು ನಿಗೂಢ ಪ್ರಶ್ನೆಗಳನ್ನು ಹುಟ್ಟುಹಾಕಿದೆ! ಹಾಗಾದರೆ ಆ ಸಂಬಂಧಿ ಬಿಚ್ಚಿಟ್ಟ ರಹಸ್ಯವೇನು? ಇಂಟರನೆಟ್‌ ಬ್ರಹ್ಮಾಸ್ತ್ರವಾಗಿದ್ದು ಹೇಗೆ? ಈ ರಕ್ತಸಿಕ್ತ ಕರಾಳ ಕಥೆಯ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಬೆಂಗಳೂರಿನ ರಾಜಾಜಿನಗರದ ಆ ಘಟನೆ ಇದೆಯಲ್ಲ, ಎಂಥವರ ಎದೆಯನ್ನೂ ಒಂದು ಕ್ಷಣ ನಡುಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಭೀಕರ ಕೃತ್ಯದ ಕುರಿತು ಯೋಚಿಸುತ್ತಿದ್ದರೆ, ಮನುಕುಲದಲ್ಲಿ ಮನುಷ್ಯತ್ವವೇ ಸತ್ತುಹೋಗಿದೆಯೇ ಎನಿಸಿಬಿಡುತ್ತದೆ. ಒಬ್ಬ ವ್ಯಕ್ತಿ ಒಂದೇ ಕುಟುಂಬದ 7 ಜನರನ್ನು ಕ್ರೂರವಾಗಿ ಮುಗಿಸಿ, ಶವಗಳನ್ನು ತುಂಡರಿಸಿ ಪುಣ್ಯಕ್ಷೇತ್ರಗಳ ಸುತ್ತಮುತ್ತ ಎಸೆದು ಬರುತ್ತಾನೆ ಎಂದರೆ, ಆತನಲ್ಲಿ ಇಂತಹ ಪೈಶಾಚಿಕ ಮನಸ್ಥಿತಿ ಬೆಳೆದದ್ದಾದರೂ ಹೇಗೆ? ಮೊದಲಿಗೆ ಈ ಹ*ಕಾಂಡಕ್ಕೆ ಕೌಟಂಬಿಕ ಕಲಹವೇ ಕಾರಣ ಎಂದು ತಳುಕು ಹಾಕಲಾಗಿತ್ತಾದರೂ, ತನಿಖೆ ಮುಂದುವರಿದಂತೆ ಇದರ ಹಿಂದೆ ಕೋಟ್ಯಂತರ ರೂಪಾಯಿ ಆಸ್ತಿಯ ಹಪಾಹಪಿತನ ಇರುವುದು ಬೆಳಕಿಗೆ ಬಂದಿದೆ. ಇದರ ನಡುವೆ, ಈಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಹತ್ತಿರದ ಸಂಬಂಧಿ ನೀಡಿರುವ ಆಘಾತಕಾರಿ ಹೇಳಿಕೆ ಹತ್ತಾರು ನಿಗೂಢ ಪ್ರಶ್ನೆಗಳನ್ನು ಹುಟ್ಟುಹಾಕಿದೆ! ಹಾಗಾದರೆ ಆ ಸಂಬಂಧಿ ಬಿಚ್ಚಿಟ್ಟ ರಹಸ್ಯವೇನು? ಇಂಟರನೆಟ್‌ ಬ್ರಹ್ಮಾಸ್ತ್ರವಾಗಿದ್ದು ಹೇಗೆ? ಈ ರಕ್ತಸಿಕ್ತ ಕರಾಳ ಕಥೆಯ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಅದು ಸಾಧಾರಣ ಜಗಳವಾಗಿರಲಿಲ್ಲ!

ಬೆಂಗಳೂರಿನ ರಾಜಾಜಿನಗರದ ಆ ಮನೆಯೊಳಗೆ ಕಳೆದ ಎರಡು ತಿಂಗಳುಗಳಿಂದ ನಡೆಯುತ್ತಿದ್ದದ್ದು ಸಾಧಾರಣ ಜಗಳಗಳಲ್ಲ, ಬದಲಿಗೆ ಇಡೀ ಕರುನಾಡೇ ಬೆಚ್ಚಿಬೀಳುವಂತಹ ಸರಣಿ ಕೊಲೆಗಳ ಕರಾಳ ಸಂಚು. ಕ್ಯಾಬ್ ಚಾಲಕ ಇಂದುಶೇಖರ್ ಹೆಣೆದ ಆ ಪೈಶಾಚಿಕ ಜಾಲದ ಒಂದೊಂದೇ ಎಳೆಗಳು ಈಗ ಮೃತರ ಹತ್ತಿರದ ಸಂಬಂಧಿ ವೆಂಕಟೇಶ್ ಅವರ ಆಘಾತಕಾರಿ ಹೇಳಿಕೆಯಿಂದ ಹೊರಬರುತ್ತಿವೆ.

ಹೆಂಡತಿಯ ಸೌಂದರ್ಯ ಮತ್ತು ಆ ಕೀಳರಿಮೆಯ ವಿಷಬೀಜ!

ನನ್ನ ಹೆಂಡತಿ ತುಂಬಾ ಸುಂದರಿ, ಆದರೆ ಅವಳಿಗೆ ಈಗ ವಯಸ್ಸಾಗುತ್ತಿದೆ, ಆರೋಪಿ ಇಂದುಶೇಖರ್ ಆಗಾಗ ಸಂಬಂಧಿಕರ ಮುಂದೆ ಆಡುತ್ತಿದ್ದ ಮಾತುಗಳಿವು. ತನ್ನ ಪತ್ನಿ ಸುನೀತಾಳ ಸೌಂದರ್ಯವನ್ನು ನೋಡಿ ಆತನಿಗೆ ಮನಸ್ಸಿನಲ್ಲೇ ಎಲ್ಲೋ ಒಂದು ಕಡೆ ತೀವ್ರವಾದ ಕೀಳರಿಮೆ ಶುರುವಾಗಿತ್ತು. ದಂಪತಿಗಳ ನಡುವಿನ ವಯಸ್ಸಿನ ವ್ಯತ್ಯಾಸವೇ ಅವರ ಸಂಸಾರದಲ್ಲಿ ಪ್ರತಿದಿನವೂ ಕಿಡಿ ಹೊತ್ತಿಸುತ್ತಿತ್ತು ಎಂದು ವೆಂಕಟೇಶ ಹೇಳಿದ್ದಾರೆ. ಸಣ್ಣ ಪುಟ್ಟ ವಾದಗಳು ದೊಡ್ಡ ಜಗಳಗಳಾಗಿ ಮಾರ್ಪಡುತ್ತಿದ್ದವು. ಆದರೆ, ಇದು ಗಂಡ-ಹೆಂಡತಿಯ ವೈಯಕ್ತಿಕ ವಿಚಾರ ಎಂದು ಭಾವಿಸಿದ ಕುಟುಂಬಸ್ಥರು ಯಾರೂ ಇದರ ಆಳದಲ್ಲಿದ್ದ ಕ್ರೌರ್ಯವನ್ನು ಊಹಿಸಿರಲಿಲ್ಲ.

ಕುಟುಂಬದ ದೀಪವಾಗಿದ್ದ ಅತ್ತೆ ರೂಪಾವತಿ!

ಇಡೀ ಕುಟುಂಬಕ್ಕೆ ತಾಯಿಯಂತೆ, ಕಣ್ಣಿನಂತೆ ಇದ್ದವರು ಅತ್ತೆ ರೂಪಾವತಿ. ಸಂಬಂಧಿಕರ ಮದುವೆಗಳನ್ನು ಹತ್ತಿರ ನಿಂತು ಮಾಡಿಸುವುದು, ಕಷ್ಟದಲ್ಲಿದ್ದವರಿಗೆ ಜೀವನ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ಮಾಡುವುದು ಅವರ ದಿನಚರಿಯಾಗಿತ್ತು. ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿದ್ದ ಆ ಕುಟುಂಬ ಆರ್ಥಿಕವಾಗಿ ತುಂಬಾ ಸೌಮ್ಯವಾಗಿ, ಚೆನ್ನಾಗಿಯೇ ಇತ್ತು. ಆದರೆ, ಆ ನಗುವಿನ ಹಿಂದೆಯೇ ಯಮನೊಬ್ಬ ಹೊಂಚು ಹಾಕುತ್ತಿರುವುದು ಆ ರೂಪಾವತಿಗೆ ತಿಳಿದಿರಲಿಲ್ಲ.

ಬ್ರಹ್ಮಾಸ್ತ್ರವಾದ ಇಂಟರ್ನೆಟ್ ಮತ್ತು ಎರಡು ತಿಂಗಳ ಸ್ಕೆಚ್!

ಇಂದುಶೇಖರ್ ಈ ಭೀಕರ ಕೃತ್ಯವನ್ನು ದಿಢೀರನೆ ಮಾಡಿದ್ದಲ್ಲ. ಈ ಇಡೀ ಕೊಲೆ ಯೋಜನೆಯನ್ನು ಆತ ಯಾವುದೋ ಕ್ರೈಮ್ ಥ್ರಿಲ್ಲರ್ ಸಿನಿಮಾ ಅಥವಾ ಯೂಟ್ಯೂಬ್, ಗೂಗಲ್ ನೋಡಿ ಕಲಿತಿದ್ದನೇ? ಎಂಬ ದಟ್ಟವಾದ ಅನುಮಾನ ಈಗ ಮೂಡಿದೆ. ಪೊಲೀಸರು ಆತನ ಮೊಬೈಲ್ ವಶಪಡಿಸಿಕೊಂಡು ಡಿಜಿಟಲ್ ಹಿಸ್ಟರಿಯನ್ನು ಜಾಲಾಡುತ್ತಿದ್ದಾರೆ. ಯಾರೂ ಊಹಿಸದ ಕರಾಳ ಯೋಜನೆಯೊಂದನ್ನು ಆತ ಎರಡು ತಿಂಗಳ ಮೊದಲೇ ರೂಪಿಸಿದ್ದ. ಎಲ್ಲರನ್ನೂ ಒಟ್ಟಿಗೆ ಕೊಂದರೆ ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ, ಒಬ್ಬೊಬ್ಬರನ್ನೇ ಆಮಿಷವೊಡ್ಡಿ ಮನೆಗೆ ಕರೆಯಿಸಿಕೊಳ್ಳಲು ಪ್ಲಾನ್ ಮಾಡಿದ್ದಾನೆ. ಕನ್ಯಾಕುಮಾರಿಗೆ ಪ್ರವಾಸ ಹೋಗೋಣ ಬನ್ನಿ ಎಂದು ಆಸೆಯ ಆಮಿಷವೊಡ್ಡಿ ಮೊದಲು ಅತ್ತೆ ರೂಪಾವತಿಯನ್ನು ಮನೆಗೆ ಬರಮಾಡಿಕೊಂಡ. ಆ ನಂತರ ಒಂದೇ ಕುಟುಂಬದ 7 ಜನರನ್ನು ಬೇರೆ ಬೇರೆ ದಿನಗಳಲ್ಲಿ ನಂಬಿಸಿ ಮನೆಗೆ ಕರೆಸಿಕೊಂಡ. ಎಲ್ಲರ ಮೇಲೂ ಒಳ ಕಲ್ಲಿನಿಂದ ಹಲ್ಲೆ ನಡೆಸಿ ಕ್ರೂರವಾಗಿ ಮುಗಿಸಿದ್ದಾನೆ ಎನ್ನಲಾಗಿದೆ. ಸಂಬಂಧಿಕರ ಈ ಆಘಾತಕಾರಿ ಹೇಳಿಕೆ ಮತ್ತು ಪೊಲೀಸರ ತನಿಖೆ ಈಗ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಈ ರಕ್ತಸಿಕ್ತ ಕರಾಳ ಕಥೆಯ ಹಿಂದಿನ ಸಂಪೂರ್ಣ ಸತ್ಯ ಮತ್ತು ಇಂಟರ್ನೆಟ್‌ನ ಆ 'ಬ್ರಹ್ಮಾಸ್ತ್ರ'ದ ಬಳಕೆ ಹೇಗೆ ನಡೆಯಿತು ಎಂಬುದು ಸದ್ಯದಲ್ಲೇ ಕಂಪ್ಲೀಟ್ ಆಗಿ ಹೊರಬರಬೇಕಿದೆ.

PREV
Read more Articles on
click me!

Recommended Stories

'ಪ್ರಿಯಾಂಕ್ ಖರ್ಗೆ ನೀನು ಬಲಿತ ದಲಿತ, ನಿನಗೆ ಮೇಲ್ಜಾತಿಯವರ ಹುಡುಗಿ ಬೇಕಾ?: ಡಾ. ಚಿ.ನಾ. ರಾಮು ತೀವ್ರ ವಾಗ್ದಾಳಿ!
ಕನ್ನಡಿಗರ ವಿಚಾರದಲ್ಲಿ ನುಡಿದಂತೆ ನಡೆಯಿರಿ: ಶೇ.80 ಉದ್ಯೋಗ ಮೀಸಲಾತಿ ಪ್ರಣಾಳಿಕೆ ನೆನಪಿಸಿದ ಕರವೇ ನಾರಾಯಣಗೌಡ!