1427 ಎಕರೆ ಭೂಸ್ವಾಧೀನಕ್ಕೆ BDA ಸಿದ್ಧತೆ; ಹೊಸೂರು-ಮೈಸೂರು-ತುಮಕೂರು ಸಂಪರ್ಕಿಸೋ ದಶಪಥ

Published : Sep 09, 2026, 12:12 PM IST
PRR 2

ಸಾರಾಂಶ

ಬೆಂಗಳೂರಿನ ಹೊಸೂರು, ಮೈಸೂರು ಮತ್ತು ತುಮಕೂರು ರಸ್ತೆಗಳನ್ನು ಸಂಪರ್ಕಿಸುವ ಎರಡನೇ ಹಂತದ ಪೆರಿಫೆರಲ್ ರಿಂಗ್ ರಸ್ತೆ (PRR-2) ಯೋಜನೆಗಾಗಿ ಬಿಡಿಎ 1,427 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಎರಡು ದಶಕಗಳಷ್ಟು ಹಳೆಯದಾದ ಈ ಯೋಜನೆಗೆ ರೈತರಿಂದ ಪರಿಹಾರದ ಕುರಿತು ವಿರೋಧ ವ್ಯಕ್ತವಾಗಿದೆ.

ಬೆಂಗಳೂರು: ಹೊಸೂರು, ಮೈಸೂರು ಮತ್ತು ತುಮಕೂರು ರಸ್ತೆಗಳನ್ನು ಸಂಪರ್ಕಿಸುವ ಎರಡನೇ ಹಂತದ ಪೆರಿಫೆರಲ್ ರಿಂಗ್ ರಸ್ತೆ (PRR-2) ಸಂಬಂಧ ಬಿಡಿಎ 1,427 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. 52 ಕಿ.ಮೀ ಉದ್ದದ 10-ಪಥದ ರಸ್ತೆ ಇದಾಗಿದ್ದು, ಈಗಾಗಲೇ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವೆ 10 ಕಿ.ಮೀ ರಸ್ತೆಯನ್ನು ನಿರ್ಮಿಸಿದೆ. ಉಳಿದ 42 ಕಿ.ಮೀ ಭಾಗಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ರಸ್ತೆಯು ಪ್ರಸ್ತಾವಿತ ಬಿಡದಿ ಟೌನ್‌ಗೂ ಸಂಪರ್ಕ ಕಲ್ಪಿಸುತ್ತದೆ. ಎರಡನೇ ಹಂತದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಅಂದಾಜು ವೆಚ್ಚ 3500 ಕೋಟಿ ರೂಪಾಯಿ ಆಗಿದೆ.

ಬಿಡಿಎ 1427 ಎಕರೆ ಭೂಮಿ ಸ್ವಾಧೀನಕ್ಕೆ ಸಿದ್ಧತೆ ನಡೆಸಿದ್ದು, ಇದರಿಂದ 1126 ಭೂಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳಲಿದ್ದಾರೆ. ಈ ಯೋಜನೆ ವ್ಯಾಪ್ತಿಗೆ ಅತ್ತಿಬೆಲೆ, ಜಿಗಣಿ, ಬೇಗೂರು, ಉತ್ತರಹಳ್ಳಿ, ಕೆಂಗೇರಿ ಮತ್ತು ದಾಸನಪುರ ಸೇರಿದಂತೆ ಒಟ್ಟು 30 ಹಳ್ಳಿಗಳು ಒಳಪಡುತ್ತವೆ. ಮೈಸೂರು, ತುಮಕೂರು, ಕನಕಪುರ ಮತ್ತು ಹೊಸೂರು ರಸ್ತೆಯ ಭಾಗದಲ್ಲಿ ಕ್ಲೋವರ್‌ಲೀಫ್ ಜಂಕ್ಷನ್‌ (Cloverleaf Interchange Junction) ನಿರ್ಮಾಣಕ್ಕಾಗಿ ಬಿಡಿಎಗೆ ಹೆಚ್ಚುವರಿ ಭೂಮಿಯ ಅಗತ್ಯವಿದೆ.

ಯೋಜನೆಯ ಇತಿಹಾಸ

ಈ ಯೋಜನೆಗೆ 2004ರಲ್ಲಿ ಅನುಮೋದನೆ ದೊರೆತಿದ್ದು, ಡಿಸೆಂಬರ್ 2005ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಸುಮಾರು ಎರಡು ದಶಕಗಳ ನಂತರ ಈ ಯೋಜನೆ ಮರುಜೀವ ಪಡೆದುಕೊಂಡಿದೆ. ಅನಮೋದನೆ ದೊರೆತ ನಂತರ ವಿಳಂಬವಾದ ಕಾರಣ ಭೂಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಿರಿಂದ ನ್ಯಾಯಾಲಯ ಪ್ರಾಥಮಿಕ ಅಧಿಸೂಚನೆಗಳನ್ನು ರದ್ದುಗೊಳಿಸಿತ್ತು.

ಯೋಜನಗೆ ಸ್ಥಳೀಯ ರೈತರಿಂದ ವಿರೋಧ

ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಎರಡು ದಶಕಗಳು ಕಳೆದಿರುವುದರಿಂದ ಪ್ರಸ್ತುತ ಮಾರುಕಟ್ಟೆ ಮೌಲ್ಯದಂತೆ ಪರಿಹಾರ ನೀಡದಿದ್ದರೆ ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ 'ಕರ್ನಾಟಕ ಪ್ರಾಂತ ರೈತ ಸಂಘ'ದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಎಚ್ಚರಿಸಿದ್ದಾರೆ.

'ಬೆಂಗಳೂರು ಬಿಸಿನೆಸ್ ಕಾರಿಡಾರ್' ಯೋಜನೆಗೆ ನೀಡಲಾದ ಪರಿಹಾರ ರೂಪರೇಷೆಯನ್ನೇ ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಇಲ್ಲಿಯೂ ಅಳವಡಿಸಿಕೊಳ್ಳಲು ಸರ್ಕಾರದ ಅನುಮೋದನೆ ಕೋರಲಾಗಿದೆ.

ಬೆಂಗಳೂರಿನ ಸುತ್ತಮುತ್ತ ಕೈಗೆತ್ತಿಕೊಳ್ಳಲಾದ ಇತರ ಬೃಹತ್ ಯೋಜನೆಗಳಾದ 71 ಕಿ.ಮೀ ಬೆಂಗಳೂರು ಬಿಸಿನೆಸ್ ಕಾರಿಡಾರ್, ಸರ್ಜಾಪುರದ ಸ್ವಿಫ್ಟ್ ಸಿಟಿ, ದೊಡ್ಡಬಳ್ಳಾಪುರದ 'ಕ್ವಿನ್ ಸಿಟಿ' ಹಾಗೂ ಎಸ್‌ಟಿಆರ್‌ಆರ್ (STRR) ಯೋಜನೆಗಳ ಸಾಲಿಗೆ ಈ PRR-2 ಭೂಸ್ವಾಧೀನ ಸೇರಿಕೊಂಡಿದೆ.

ಇದನ್ನೂ ಓದಿ: 15 ವರ್ಷದ ಬಳಿಕ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗಲ್ಲಿ, ಗಲ್ಲಿಗೂ ಬಿಎಂಟಿಸಿ ಸೇವೆ; 200 ಮಿನಿಬಸ್ ಸಂಚಾರ!

PREV
Read more Articles on
click me!

Recommended Stories

Bengaluru: ತಡರಾತ್ರಿವರೆಗೂ ಮೊಬೈಲ್‌ನಲ್ಲಿ ರೀಲ್ಸ್ ನೋಡ್ತಿದ್ದ ಹೆಂಡತಿ; ಕೋಪದಿಂದ ನೀಚ ಕೆಲಸ ಮಾಡಿದ ಗಂಡ
15 ವರ್ಷದ ಬಳಿಕ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗಲ್ಲಿ, ಗಲ್ಲಿಗೂ ಬಿಎಂಟಿಸಿ ಸೇವೆ; 200 ಮಿನಿಬಸ್ ಸಂಚಾರ!