ಏರ್ಟೆಲ್ ಗೆ ಬಿತ್ತು 68 ಲಕ್ಷ ರು. ದಂಡ! ಕಾರಣ?

By Kannadaprabha NewsFirst Published Oct 15, 2019, 7:52 AM IST
Highlights

ಏರ್ಟೆಲ್ ಸಂಸ್ಥೆಗೆ ಭರ್ಜರಿ ಮೊತ್ತದ ದಂಡ ವಿಧಿಸಲಾಗಿದೆ. ಬಿಬಿಎಂಪಿ ದಂಡ ಹಾಕಿದ್ದು ಇದಕ್ಕೆ ಕಾರಣ ಇಲ್ಲಿದೆ. 

ಬೆಂಗಳೂರು [ಅ.15]: ನಗರದ ಬನ್ನೇರುಘಟ್ಟಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಡಾಂಬರೀಕರಣ ಮಾಡಲಾಗಿದ್ದ ರಸ್ತೆಯನ್ನು ಅಗೆದು ಹಾಳು ಮಾಡಿದ ಹಿನ್ನೆಲೆಯಲ್ಲಿ ಭಾರತಿ ಏರ್‌ಟೆಲ್‌ ಸಂಸ್ಥೆಗೆ ಬಿಬಿಎಂಪಿ 68.14 ಲಕ್ಷ ರು. ದಂಡ ವಿಧಿಸುವುದರ ಜತೆಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಬನ್ನೇರುಘಟ್ಟಮುಖ್ಯರಸ್ತೆಯಲ್ಲಿ ಇತ್ತೀಚೆಗಷ್ಟೆಹೊಸದಾಗಿ ಡಾಂಬರೀಕರಣ ಮಾಡಲಾಗಿತ್ತು. ಭಾರತಿ ಏರ್‌ಟೆಲ್‌ ಸಂಸ್ಥೆ ಪಾಲಿಕೆಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ರಸ್ತೆ ಅಗೆದು ಓಎಫ್‌ಸಿ ಕೇಬಲ್‌ ಅಳವಡಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ .25 ಲಕ್ಷ, ತಲಾ ಒಂದು ಗುಂಡಿಗೆ 10 ಸಾವಿರದಂತೆ 15 ಗುಂಡಿಗೆ 1.5 ಲಕ್ಷ ರು., ರಸ್ತೆ ಮತ್ತು ಗುಂಡಿ ಮರು ಭರ್ತಿ ವೆಚ್ಚ 41,64,000 ರು. ಸೇರಿದಂತೆ ಒಟ್ಟು 68,14,000 ರು. ದಂಡ ಪಾವತಿಸುವಂತೆ ಭಾರತಿ ಏರ್‌ಟೆಲ್‌ಗೆ ಬಿಬಿಎಂಪಿ ಸೂಚಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಕುರಿತು ಬಿಬಿಎಂಪಿಯ ರಸ್ತೆ ಅಗಲೀಕರಣ ವಿಭಾಗದ ಸಹಾಯಕ ಎಂಜಿನಿಯರ್‌ ಎಚ್‌.ಸಿ.ಕೃಷ್ಣ ಕುಮಾರ್‌, ಭಾರತಿ ಏರ್‌ಟೆಲ್‌ ಸಂಸ್ಥೆ ಹಾಗೂ ಓಎಫ್‌ಸಿ ಅಳವಡಿಕೆ ಗುತ್ತಿಗೆದಾರರನ ವಿರುದ್ಧ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜತೆಗೆ ರಸ್ತೆ ಪುನರ್‌ ನಿರ್ಮಾಣ ಮಾಡುವುದಲ್ಲದೆ, ನಿಯಮಾವಳಿ ಮೀರಿ ರಸ್ತೆ ಅಗೆದು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟಉಂಟು ಮಾಡಿರುವ ಹಿನ್ನೆಲೆಯಲ್ಲಿ ಭಾರತಿ ಏರ್‌ಟೆಲ್‌ ಲಿಮಿಟೆಡ್‌ ಓಎಫ್‌ಸಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿದ್ದಾರೆ.

click me!