ಸುದೀರ್ಘ ದೀಪಾವಳಿ ರಜೆ ಮಗಿಯುತ್ತಿದ್ದಂತೆ ಆಫೀಸ್ ಚಿಂತೆ, ಇಂಟರ್‌ನೆಟ್‌ನಲ್ಲಿ ಫುಲ್ ಮೀಮ್ಸ್

Published : Nov 10, 2026, 04:43 PM IST
Diwali Vacation Ends

ಸಾರಾಂಶ

ದೀಪಾವಳಿ ರಜೆ ಕೊನೆಗೊಳ್ಳುತ್ತಿದೆ. ಕೆಲ ಕಚೇರಿಗಳಿಗೆ ಮಂಗಳವಾರವೂ ರಜೆ ನೀಡಲಾಗಿದೆ. ಹೀಗಾಗಿ ಬುಧವಾರ ಕಚೇರಿಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದೀಗ ಸೋಶಿಯಲ್ ಮೀಡಿಯಾಗಲ್ಲಿ ಮೀಮ್ಸ್ ಹರಿದಾಡುತ್ತಿದೆ.

ಬೆಂಗಳೂರು (ನ.10) ದೀಪಾವಳಿ ರಜೆ ಆರಂಭಗೊಳ್ಳುತ್ತಿದ್ದಂತೆ ಊರಿಗೆ ತೆರಳುವ ಕಾರಣದಿಂದ ಬೆಂಗಳೂರಿನ ಮೆಜೆಸ್ಟಿಕ್ ಸೇರಿದಂತೆ ಸುತ್ತ ಮತ್ತು ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇದೀಗ ಸುದೀರ್ಘ ರಜೆಯಲ್ಲಿ ತೆರಳಿದ ಉದ್ಯೋಗಿಗಳು ಮತ್ತೆ ಕಚೇರಿಗೆ ಹಾಜರಾಗಲು ಬೆಂಗಳೂರಿನತ್ತ ಮುಖಮಾಡುತ್ತಿದ್ದಾರೆ. ಇಷ್ಟು ದಿನ ಹಾಯಾಗಿ ಕುಟುಂಬದ ಜೊತೆ, ಆಪ್ತರ ಜೊತೆ ರಜಾ ದಿನ ಸವಿದ ಉದ್ಯೋಗಿಗಳು ಇದೀಗ ಕಚೇರಿಗೆ ಮರಳಬೇಕಾಗಿದೆ. ಇದರ ನಡುವೆ ಹಲವರು ರಜಾ ದಿನಗಳು ಮುಗಿಯಿತು. ಇನ್ನು ಕೆಲಸ, ಸಿಕ್ ಲೀವ್ ಸೇರಿದಂತೆ ಇತರ ಮೂಲಗಳಲ್ಲಿ ರಜೆ ಬಾಕಿ ಇದೆಯಾ ಎಂದು ಹಲವರು ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ದೀಪಾವಳಿ ರಜೆ ಮುಗಿಸಿ ಕಚೇರಿಗೆ ಮರಳುತ್ತಿರುವ ಉದ್ಯೋಗಿಗಳ ಕುರಿತು ಫುಲ್ ಮೀಮ್ಸ್ ಹರಿದಾಡುತ್ತಿದೆ.

ದೀಪಾವಳಿ ಮೀಮ್ಸ್

ಸಿನಿಮಾಗಳ ಹಲವು ಡೈಲಾಗ್ ಮೂಲಕ ಮೀಮ್ಸ್ ಮಾಡಲಾಗಿದೆ. ಈ ಸ್ಥಳ ಎಲ್ಲೋ ನೋಡಿದ ರೀತಿ ಇದೆ. ಇಲ್ಲಿ ಮೊದಲು ನಾನು ಕೆಲಸ ಮಾಡಿದ ನೆನಪು ನನಗಿದೆ ಅನ್ನೋ ಶಾರುಖ್ ಖಾನ್ ಡೈಲಾಗ್‌ನ್ನೇ ಇದೀಗ ಉದ್ಯೋಗಿಗಳು ತಮ್ಮ ಕಚೇರಿ ಒಳ ಪ್ರವೇಶಿಸುತ್ತಿದ್ದಂತೆ ದಿಢೀರ್ ಹಳೇ ನೆನಪುಗಳು ಮರಕಳಿಸುವಂತ ಮೀಮ್ಸ್ ಮಾಡಲಾಗಿದೆ. ಇದೇ ರೀತಿ ಹಲವು ಡೈಲಾಗ್‌ಗಳ ಹಿಡಿದು ಮೀಮ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.

ಬೆಂಗಳೂರಿನತ್ತ ಜನ

ದೀಪಾವಳಿ ರಜೆಗೆ ಊರಿಗೆ ತೆರಳಿದ್ದ ಬೆಂಗಳೂರು ಜನ ಮತ್ತೆ ಮರಳುತ್ತಿದ್ದಾರೆ. ಇದೀಗ ಬೆಂಗಳೂರು ಮತ್ತೆ ಟ್ರಾಫಿಕ್ ದಟ್ಟಣೆ ಹೆಚ್ಚಾಗುತ್ತಿದೆ. ಕಚೇರಿಗಳು ಮೆಲ್ಲನೆ ಬಾಗಿಲು ತರೆದಿದೆ. ಕೆಲ ಕಂಪನಿಗಳು ಬುಧವಾರದ ವರೆಗೆ ರಜೆ ನೀಡಲಾಗಿದೆ. ಕೆಲ ಉದ್ಯೋಗಿಗಳು ದೀಪಾವಳಿ ರಜೆ ಜೊತೆ ತಮ್ಮ ವೈಯುಕ್ತಿಕ ರಜೆ ಹಾಕಿ ಸುದೀರ್ಘ ರಜಾ ದಿನಗಳನ್ನು ಅನುಭವಿಸುತ್ತಿದ್ದಾರೆ. ಮಂಗಳವಾರದಿಂದ ಬೆಂಗಳೂರು ಮತ್ತೆ ಗಿಜಿಗಿಡಲು ಆರಂಭಿಸುತ್ತದೆ. ಮಂಗಳವಾರದಿಂದ ಪ್ರತಿ ದಿನ ಬೆಂಗಳೂರಿಗೆ ಮರಳುವ ಸಂಖ್ಯೆ ಹೆಚ್ಚಾಗಲಿದೆ. ಇದಕ್ಕೆ ತಕ್ಕಂತೆ ಮೀಮ್ಸ್‌ಗಳು ಹರಿದಾಡುತ್ತಿದೆ.

ರಜೆ ಮುಗಿದಿದೆ , ಆಫೀಸ್ ಹೋಗಬೇಕಿದೆ. ಆಫೀಸ್ ಈ ದೀಪಾವಳಿಗೆ ನೀಡುವ ಸ್ವೀಟ್ಸ್ ಕಚೇರಿಯಲ್ಲಿದೆ. ಅದೇ ಖುಷಿಯಲ್ಲಿ ಹೋಗಬೇಕು ಎಂದು ಹಲವರು ತಮ್ಮ ರಜೆ ಮುಗಿದ ನೋವು ತೋಡಿಕೊಂಡಿದ್ದಾರೆ. ಇತ್ತ ಕೆಲ ಕಚೇರಿಗಳು ಹೆಚ್ಚುವರಿ ರಜೆ ನೀಡಿ ಸುದೀರ್ಘ ರಜೆ ಅನುಭವಿಸಲು ಅವಕಾಶ ನೀಡಿದೆ.

PREV
Read more Articles on
click me!

Recommended Stories

Bengaluru air pollution ಬೆಂಗಳೂರಿನಲ್ಲಿ ದಿಢೀರ್ ವಾಯು ಗುಣಮಟ್ಟ ಕುಸಿತ, ಮೆಜೆಸ್ಟಿಕ್‌ನಲ್ಲಿ ಪರಿಸ್ಥಿತಿ ಗಂಭೀರ!
ವಿಜಯನಗರ ಮೆಟ್ರೋ ಹಳಿಗೆ ಹಾರಿದ ಪ್ರಯಾಣಿಕ: ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲು, ನೇರಳೆ ಮಾರ್ಗದ ಸಂಚಾರ ಯಥಾಸ್ಥಿತಿಗೆ!