ಯಾರೋ ಇವೆಲ್ಲ, ಬಾರ್ ಮುಂದೆಯೇ ಕೂತು ಗುಂಡು ತುಂಡು ಪಾರ್ಟಿ, ರೊಚ್ಚಿಗೆದ್ದ ಜನ

Published : Sep 13, 2026, 07:49 PM IST
anekal drinking party

ಸಾರಾಂಶ

ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತ ಬಾರ್ ಮುಂಭಾಗವೇ ಕೂತು ಎಣ್ಣೆ ಪಾರ್ಟಿ ಮಾಡಿದ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ನಡೆದಿದೆ. ಹಬ್ಬದ ನೆಪದಲ್ಲಿ ಬಾರ್ ಮುಂದೆ ಕೂತು ಮೋಜು ಮಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ಆನೇಕಲ್ : ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತ ಬಾರ್ ಮುಂಭಾಗವೇ ಕೂತು ಎಣ್ಣೆ ಪಾರ್ಟಿ ಮಾಡಿದ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ನಡೆದಿದೆ.

ಏನಿದು ವಿಚಿತ್ರ ಪ್ರಕರಣ?

ಅಂದಹಾಗೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನೂರಾರು ಮಂದಿ ರಸ್ತೆ ಬದಿಯ ಬಾರ್ ಮುಂಭಾಗದಲ್ಲಿ ಕೂತು ಎಣ್ಣೆ ಪಾರ್ಟಿ ಮಾಡಿ ಮಕ್ಕಳಿಗೆ, ಹೆಣ್ಮಕ್ಕಳಿಗೆ, ರಸ್ತೆಯಲ್ಲಿ ಓಡಾಡುವ ನೂರಾರು ದಾರಿಹೋಕರಿಗೆ ಇವರು ತೊಂದರೆಯನ್ನ ನೀಡಿದ ಆರೋಪ ಕೇಳಿಬಂದಿದೆ .

ಯಾರೋ ಇವೆಲ್ಲ?

ಬಾರ್ ಮುಂದೆಯೇ ಕೂತು ಎಣ್ಣೆ ಜೊತೆ ಶೇಂಗಾ, ಸೈಡ್ಸ್ ಸವಿಯುತ್ತ ಅಮಲನ್ನು ಏರಿಸಿಕೊಂಡವರು ನಮ್ಮ ಕರ್ನಾಟಕದ ಮಂದಿ ಅಲ್ಲ. ಬದಲಾಗಿ ದೂರದ ಬಿಹಾರ, ಜಾರ್ಖಂಡ್, ಅಸ್ಸಾಂ ಹಾಗೂ ಮಣಿಪುರದ ಜನರು. ಯಾಕೆ ಅವರು ಹೀಗೆ ಮಾಡಿದರು ಅಂತಾ ನೋಡೋದಾದ್ರೆ ಅವರಿಗೆ ಹಬ್ಬ.

ಕರ್ಮಯೋಗ ಹಬ್ಬ

ಮರಸೂರು ಗೇಟ್ ಬಳಿ ಇರುವ ಬಾರ್ ಮುಂದೆ ಕೂತು ಮೋಜು ಮಸ್ತಿ ಮಾಡಿದವರೆಲ್ಲ ಬಿಹಾರ, ಜಾರ್ಖಂಡ್, ಅಸ್ಸಾಂ ಹಾಗೂ ಮಣಿಪುರ ಮೂಲದವರು. ಆ ಭಾಗದಲ್ಲಿ ಕರ್ಮಯೋಗ ಹಬ್ಬ ಎಂಬ ಹಬ್ಬವನ್ನು ಆಚರಿಸುತ್ತಾರೆ. ಹಬ್ಬ ಹಿನ್ನೆಲೆಯಲ್ಲಿ ಕುಡಿದು ಮಜಾ ಮಾಡುವ ಸಲುವಾಗಿ ದೊಡ್ಡ ಎಣ್ಣೆ ಪಾರ್ಟಿ ಮಾಡಿ ಅವಾಂತರ ಸೃಷ್ಟಿಸಿದ್ದಾರೆ.

ಮನೆಯಲ್ಲಿ ಪೂಜೆ ಮಾಡಿ ಬಾರ್‍‌ಗೆ ಬಂದು ಎಣ್ಣೆ ತೆಗೆದುಕೊಂಡು ಪಾರ್ಟಿ ಮಾಡಿದ್ದಾರೆ. ಇನ್ನು ಈ ಪರಭಾಷಿಕರ ಮೋಜು ಮಸ್ತಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಮೋಜು ಮಸ್ತಿ ಮಾಡೋದು ಸರಿಯಲ್ಲ. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕೂತು ಹೀಗೆ ಮಾಡಿದರೆ ಹೇಗೆ? ರಸ್ತೆಯಲ್ಲಿ ಓಡಾಡಲು ಹೆಣ್ಮಕ್ಕಳು, ಮಕ್ಕಳು ಮುಜುಗರ ಅನುಭವಿಸುತ್ತಿದ್ದಾರೆ. ಪಾರ್ಟಿ ವೇಳೆ ಬರುವ ಕೆಲವು ಡೈಲಾಗ್‌ಗಳು ಸಾರ್ವಜನಕರಿಗೆ ಕೇಳಿಸಿಕೊಳ್ಳಲು ಆಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಕಣ್ಮುಚ್ಚಿ ಕೂತ ಅಧಿಕಾರಿಗಳು

ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಏನೂ ನಡೆದೇ ಇಲ್ಲ ಎನ್ನುವಂತೆ ಕೂತಿರೋದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳಾಗಲಿ, ಪೊಲೀಸ್ ಇಲಾಖೆಯವವರು ಯಾರೇ ಆಗಲಿ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಾರ್ ಮುಂದೆಯೇ ಕಂಠಪೂರ್ತಿ ಕುಡಿದ ತೇಲಾಡಿದರೂ ಬಾರ್ ಸಿಬ್ಬಂದಿಯೂ ಸುಮ್ಮನೆ ಕೂತಿರೋದು ಕೂಡ ಪ್ರಶ್ನೆಯಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

ವೈರಲ್ ಆಯ್ತು ಫೋಟೋ, ವಿಡಿಯೋಗಳು

ಈ ಮೋಜು ಮಸ್ತಿಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ. ವಿಡಿಯೋ ನೋಡಿದ ಜನರು ಇದೆಂಥ ಕಾಲ ಬಂತು ಮಾರಾಯ್ರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

PREV
Read more Articles on
click me!

Recommended Stories

Bengaluru: ನದಿ ಸ್ವಚ್ಛಗೊಳಿಸಿ ಖ್ಯಾತಿ ಪಡೆದಿದ್ದ ಬಿಟ್ಟು ತಬಾಹಿಗೆ ಶಾಕ್! ಬೆಂಗಳೂರಿನ 'ಕ್ಲೀನ್ ಅಪ್ ತುರಹಳ್ಳಿ' ಅಭಿಯಾನದಲ್ಲಿ ಏನಾಯ್ತು?
ಬೆಂಗಳೂರಿನಲ್ಲಿ ಪ್ರಮುಖ ಸಂಚಾರ ಮಾರ್ಗ ಬದಲಾವಣೆ, ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ ಆರಂಭ