ಜಗಳ ಬಿಡಿಸಲು ಬಂದವನನ್ನೇ ಇರಿದು ಹತ್ಯೆಗೈದರು

By Kannadaprabha NewsFirst Published Oct 9, 2019, 7:50 AM IST
Highlights

ಕ್ಷುಲ್ಲಕ ಕಾರಣಕ್ಕೆ ತಮ್ಮ ಗೆಳೆಯನ ಮೇಲೆ ಹಲ್ಲೆ ನಡೆಸಿ ಕೊಂದಿದ್ದ ನೇಪಾಳ ಮೂಲದ ನಾಲ್ವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಬಂಧಿಸಲಾಗಿದೆ. 

ಬೆಂಗಳೂರು [ಅ.09]:  ಎರಡು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ತಮ್ಮ ಗೆಳೆಯನ ಮೇಲೆ ಹಲ್ಲೆ ನಡೆಸಿ ಕೊಂದಿದ್ದ ನೇಪಾಳ ಮೂಲದ ನಾಲ್ವರು ಸೆಕ್ಯೂರಿಟಿ ಗಾರ್ಡ್‌ಗಳನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೈಯಪ್ಪನಹಳ್ಳಿ ಸಮೀಪದ ನಿವಾಸಿಗಳಾದ ಅಮಿತ್‌, ಸುರೇಶ್‌, ಈಶ್ವರ್‌ ಹಾಗೂ ಗೋವಿಂದ್‌ ಬಂಧಿತರು. ರಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೇಪಾಳ ಮೂಲದ ಅಮಿತ್‌, ಸುರೇಶ್‌, ಈಶ್ವರ್‌, ಗೋವಿಂದ್‌, ರಾಜೇಂದ್ರ ಹಾಗೂ ಭೀಮ ಅವರು ಎರಡ್ಮೂರು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಬಳಿಕ ಖಾಸಗಿ ಭದ್ರತಾ ಏಜೆನ್ಸಿಯಲ್ಲಿ ಕಾವಲುಗಾರರಾಗಿ ಸೇರಿಕೊಂಡ ಅವರು, ನಗರದ ವಿವಿಧೆಡೆ ಕೆಲಸ ಮಾಡುತ್ತಿದ್ದರು. ಈ ಪೈಕಿ ಭೀಮ ಮತ್ತು ಅಮಿತ್‌, ಒಂದೇ ಕುಟುಂಬದ ಅಕ್ಕ-ತಂಗಿಯನ್ನು ವಿವಾಹವಾಗಿದ್ದರು. ಇತ್ತೀಚಿಗೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯಿಂದ ಪ್ರತ್ಯೇಕವಾಗಿ ಅಮಿತ್‌ ನೆಲೆಸಿದ್ದ. ಇದಕ್ಕೆ ಭೀಮ ಆಕ್ಷೇಪಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಷಡ್ಡಕ ಭೀಮನ ವಿರುದ್ಧ ಅಮಿತ್‌ ಕೋಪಗೊಂಡಿದ್ದ. ಕಸ್ತೂರಿ ನಗರದಲ್ಲಿ ಭಾನುವಾರ ಸಂಜೆ 6.30ರ ಸುಮಾರಿಗೆ ಭೀಮ ಮತ್ತು ಆತನ ಸ್ನೇಹಿತ ರಾಜೇಂದ್ರ ತೆರಳುವಾಗ ಆರೋಪಿಗಳು ಅಡ್ಡಗಟ್ಟಿ, ಜಗಳ ಆಡಿದ್ದರು. ಈ ಹಂತದಲ್ಲಿ ಭೀಮನ ರಕ್ಷಣೆಗೆ ಬಂದ ರಾಜೇಂದ್ರನಿಗೆ ಚಾಕುವಿನಿಂದ ಇರಿದು ಅಮಿತ್‌ ತಂಡ ಪರಾರಿಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

click me!