ಕೆ.ಆರ್‌. ಪುರ ಸಮೀಪ ರೈಲ್ವೆ ಪರ್ಯಾಯ ರಸ್ತೆಯಲ್ಲಿ 3 ತಿಂಗಳು ಸಂಚಾರ ನಿರ್ಬಂಧ

Published : Jun 15, 2025, 06:16 AM IST
Bengaluru traffic fine

ಸಾರಾಂಶ

ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕೆ.ಆರ್‌. ಪುರದ ಸಮೀಪ ರೈಲ್ವೆ ಪರ್ಯಾಯ ರಸ್ತೆಯಲ್ಲಿ 3 ತಿಂಗಳು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.

 ಬೆಂಗಳೂರು :  ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಕೆ.ಆರ್‌. ಪುರದ ಸಮೀಪ ರೈಲ್ವೆ ಪರ್ಯಾಯ ರಸ್ತೆಯಲ್ಲಿ 3 ತಿಂಗಳು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಕೋರಿದ್ದಾರೆ.

*ವಾಹನ ಸಂಚಾರ ನಿರ್ಬಂಧಿಸಿ ರಸ್ತೆ*

-ಬೆನ್ನಿಗಾನಹಳ್ಳಿ (ಸದಾನಂದನಗರ ಬ್ರಿಡ್ಜ್) ಕಡೆಯಿಂದ ಹಳೆ ಮದ್ರಾಸ್ ರಸ್ತೆಗೆ ಸೇರುವ ಕೊಕೊ ಕೋಲಾ ಗೋಡಾನ್ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

*ಪರ್ಯಾಯ ಮಾರ್ಗಗಳು*

-ಹಳೆ ಮದ್ರಾಸ್ ರಸ್ತೆ ಬೆನ್ನಿಗಾನಹಳ್ಳಿ ರೈಲ್ವೆ ಬ್ರಿಡ್ಜ್ ಕಡೆಯಿಂದ ಕಸ್ತೂರಿನಗರ ಕಡೆಗೆ ಹೋಗುವ ವಾಹನ ಸವಾರರು ಡಿಓಟಿ (DOT) ಬೈಪಾಸ್ ಹೆಬ್ಬಾಳ ಮೂಲಕ ಕಸ್ತೂರಿನಗರ ಕಡೆಗೆ ಸಂಚರಿಸುವುದು.

-ಕಸ್ತೂರಿನಗರ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಕಡೆಗೆ ತೆರಳುವ ವಾಹನ ಸವಾರರು ಸಂಚರಿಸಬಹುದು. ಸದಾನಂದನಗರ ಕಡೆಯಿಂದ ಎನ್.ಜಿ.ಇ.ಎಫ್ ಸಿಗ್ನಲ್ ಮೂಲಕ ಹಳೆ ಮದ್ರಾಸ್ ರಸ್ತೆ ಕಡೆಗೆ ಸಾಗಬೇಕಿದೆ.

ಬೆಂಗ್ಳೂರಲ್ಲಿ ಕೆಲಸ ಮಾಡೋಕೆ ಶುರು ಮಾಡಿದ AI ಟ್ರಾಫಿಕ್‌ ಸಿಗ್ನಲ್‌

ಬೆಂಗಳೂರು : ಬೆಂಗಳೂರು ಹಾಗೂ ಟ್ರಾಫಿಕ್‌ ಸಮನಾರ್ಥಕ ಪದಗಳಂತೆ ಆಗಿವೆ. ಅದೆಷ್ಟೇ ಹೊಸ ತಂತ್ರಜ್ಞಾನ ಬಂದರೂ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ಮಾತ್ರ ಮುಕ್ತಿ ನೀಡಲು ಸಾಧ್ಯವಾಗಿಲ್ಲ. ಉತ್ತಮ ಟ್ರಾಫಿಕ್ ನಿರ್ವಹಣೆಗಾಗಿ, ನಗರ ಪೊಲೀಸರು ಟ್ರಾಫಿಕ್‌ ಸಿಗ್ನಲ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನವೀಕರಣ ಮಾಡಲು ನಿರ್ಧಾರ ಮಾಡಿದ್ದಾರೆ. ಇದು ವಾಹನಗಳು ಅತ್ಯಂತ ಸುಲಭವಾಗಿ ಚಲನೆ ಮಾಡಲು ಸಹಾಯ ಮಾಡಲಿದೆ. ಈಗ, ಜನದಟ್ಟಣೆಯ ರಸ್ತೆಯಲ್ಲಿ ದೀರ್ಘಕಾಲ ಹಸಿರು ಬಣ್ಣದ ಸಿಗ್ನಲ್‌ಗಾಗಿ ಕಾಯುವ ಬದಲು ಬೆಂಗಳೂರು ಈಗ ಎಐ ಚಾಲಿತ ಸ್ಮಾರ್ಟ್‌ ಸಿಗ್ನಲ್‌ಗಳನ್ನು ಆಯ್ಕೆ ಮಾಡಿದೆ.

ಬೆಂಗಳೂರಿನ ಕೆಆರ್ ಮಾರುಕಟ್ಟೆ, ಟೌನ್ ಹಾಲ್ ಮತ್ತು ಕಿಮ್ಸ್ ಬಳಿ, ಸ್ಮಾರ್ಟ್ ಸಿಗ್ನಲ್ ಮಾಡ್ಯೂಲ್‌ಗಳು - ವೆಹಿಕಲ್‌ ಆಕ್ಟಿವಿಟಿ ಕಂಟ್ರೋಲ್‌ (ವಿಎಸಿ) ಅನ್ನು ರಿಯಲ್‌ ಟೈಮ್‌ ಟ್ರಾಫಿಕ್‌ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಈ ಹಿಂದೆ ಸಿಗ್ನಲ್‌ನಲ್ಲಿ ಪ್ರೀ ಸೆಟ್‌ ಆಗಿದ್ದ ಟೈಮರ್‌ಗಳು ಇರುತ್ತಿದ್ದವು. ಆ ಸಮಯ ಮುಗಿದ ಬಳಿಕ ಸಿಗ್ನಲ್‌ಗಳು ಗ್ರೀನ್‌ ಆಗುತ್ತಿದ್ದವು. ಆದರೆ, ಈಗ ಎಐ ಕ್ಯಾಮೆರಾಗಳನ್ನು ಪ್ರತಿ ಸಿಗ್ನಲ್‌ನಲ್ಲಿ ಅಳವಡಿಕೆ ಮಾಡಲಾಗಿದ್ದು, ಇದು ವೆಹಿಕಲ್‌ಗಳ ಚಲನೆಯನ್ನು ಟ್ರ್ಯಾಕ್‌ ಮಾಡುತ್ತದೆ.

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕೆಲವೊಂದು ಸಿಗ್ನಲ್‌ಗಳಲ್ಲಿ ಮೂರು ನಿಮಿಷದವರೆಗೆ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಕೆಲವೊಮ್ಮೆ ನೀವು ನಿಂತ ರಸ್ತೆಯಲ್ಲಿ ಹೆಚ್ಚು ವಾಹನಗಳಿರುತ್ತದೆ. ಹಾಗಿದ್ದರೂ ಕೂಡ ಗ್ರೀನ್‌ ಸಿಗ್ನಲ್‌ಗೂ ಬರೋದಕ್ಕೆ ನೀವು ಕಾಯುತ್ತಾ ಇರಬೇಕಾಗುತ್ತದೆ. ಬೇರೆ ರಸ್ತೆಯಲ್ಲಿ ವಾಹನಗಳೇ ಇಲ್ಲದೇ ಇದ್ದರೂ, ಗ್ರೀನ್‌ ಸಿಗ್ನಲ್‌ ಇದ್ದಿರುತ್ತದೆ. ಆದರೆ, ಈಗ ಬಂದಿರುವ ವ್ಯಾಕ್‌ ಟ್ರಾಫಿಕ್‌ ಸಿಗ್ನಲ್‌ಗಳಿಂದ ಈ ಸಮಸ್ಯೆ ತಪ್ಪಲಿದೆ. ಈಗ ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ಗಳು ಸ್ಮಾರ್ಟ್‌ ಆಗಿದ್ದು, VAC ಎನ್ನುವ ಸಾಲನ್ನು ಪ್ರಕಟ ಮಾಡಲಾಗುತ್ತಿದೆ. ಇದರ ಅರ್ಥ ಏನೆಂದರೆ, VAC ಆಕ್ಟೀವ್‌ ಆಗಿದೆ. ಯಾವ ರಸ್ತೆಯಲ್ಲಿ ಹೆಚ್ಚು ವಾಹನಗಳು ನಿಂತಿವೆಯೋ ಆ ರಸ್ತೆಯ ಪ್ರಯಾಣಿಕೆಯ ಆದ್ಯತೆಯ ಮೇರೆಗೆ ಹಸಿರು ಸಿಗ್ನಲ್‌ಅನ್ನು ನೀಡಲಾಗಿದೆ ಎನ್ನುವುದಾಗಿದೆ.

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ