ಶಿವರಾಮ ಕಾರಂತ ಲೇಔಟ್ ಜಾಗ ಕೊಟ್ಟ ರೈತರಿಗೆ ಗುಡ್ ನ್ಯೂಸ್, ಸೈಟ್ ಬೆಲೆ ಇಳಿಸಿದ ಡಿಕೆ ಶಿವಕುಮಾರ್

Published : Aug 31, 2026, 04:26 PM IST
shivaram karanth layout

ಸಾರಾಂಶ

ಶಿವರಾಮ ಕಾರಂತ ಬಡಾವಣೆ ಮಾಡಲು ಜಾಗ ಕೊಟ್ಟ ರೈತರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸೈಟ್ ನೀಡಲು ಸಿಎಂ ಸೂಚಿಸಿದ್ದಾರೆ.

ಬೆಂಗಳೂರು (ಆ.31) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಶಿವರಾಮ ಕಾರಂತ ಬಡಾವಣೆಗೆ ಜಾಗ ಕೊಟ್ಟ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಆದೇಶ ನೀಡಿದ್ದಾರೆ. ಜಾಗ ಕೊಟ್ಟ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸೈಟು ಹಂಚಿಕೆ ಮಾಡಲು ಆದೇಶ ನೀಡಲಾಗಿದೆ. ಶಿವರಾಮ ಕಾರಂತ ಬಡಾವಣೆಗೆ ಜಾಗ ನೀಡಿದ ರೈತರಿಗೆ ಪ್ರತಿ ಚದರ ಅಡಿಗೆ ಕೇವಲ 20 ರೂಪಾಯಿಯಲ್ಲಿ ನಿವೇಷನ ಹಂಚಿಕೆ ಮಾಡಲಾಗುತ್ತಿದೆ. ಮೊದಲು ನಿಗದಿ ಮಾಡಿದ್ದ ಬೆಲೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಕ್ರಮ ಕೈಗೊಂಡಿದ್ದಾರೆ.

ಪ್ರತಿ ಚದರ ಅಡಿ ವೆಚ್ಚ 20 ರೂಪಾಯಿ

ಶಿವರಾಮ ಕಾರಂತ ಬಡಾವಣೆಗೆ ಬೆಂಗಳೂರು ಉತ್ತರದ ಆವಲಹಳ್ಳಿ, ರಾಮಗೊಂಡನಹಳ್ಳಿ ಸೇರಿದಂತೆ 17 ಹಳ್ಳಿಗಳ ಜಾಗ ವಶಕ್ಕೆ ಪಡೆಯಲಾಗಿತ್ತು. 3069 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದೆ. 3200 ರೈತರು ಭೂಮಿ ನೀಡಿದ್ದಾರೆ. ಇದೀಗ ಈ ರೈತರಿಗೆ ಪ್ರತಿ ಚದರ ಅಡಿಗೆ 20 ರೂಪಾಯಿ ವೆಚ್ಚದಲ್ಲಿ ಸೈಟ್ ನೀಡಲಾಗುತ್ತದೆ. ಈ ಮೂಲಕ ಭೂಮಿ ನೀಡಿದ ರೈತರು ಕೈಗೆಟುಕುವ ದರದಲ್ಲಿ ನಿವೇಷನ ಪಡೆಯಲು ಸಾಧ್ಯವಾಗಲಿದೆ.

ಜಾಗ ನೀಡಿದ ರೈತರಿಗೆ ಪ್ರತಿ ಚದರ ಅಡಿಗೆ 50 ರೂಪಾಯಿ ವೆಚ್ಚದಲ್ಲಿ ಸೈಟ್ ನೀಡಲು ಬಿಡಿಎ ಮುಂದಾಗಿತ್ತು. ಆದರೆ 50 ರೂಪಾಯಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ತಮ್ಮ ಜಮೀನು ಬಿಟ್ಟುಕೊಟ್ಟು ಇದೀಗ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇದರ ನಡುವೆ 50 ರೂಪಾಯಿ ವೆಚ್ಚದಲ್ಲಿ ಖರೀದಿ ದುಬಾರಿಯಾಗಲಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಡಿಕೆ ಶಿವಕುಮಾರ್ ಈ ಕುರಿತು ಬಿಡಿಎ ಅಧಿಕಾರಿಗಳು ಹಾಗೂ ರೈತರ ಜೊತೆ ಸಭೆ ಮಾಡಿದ್ದಾರೆ. ಬಳಿಕ 20 ರೂಪಾಯಿಗೆ ನಿಗದಿ ಮಾಡಿದ್ದಾರೆ. ಪ್ರತಿ ಚದರ ಅಡಿಗೆ 20 ರೂಪಾಯಿಯಂತೆ ರೈತರಿಗೆ ಸೈಟ್ ನೀಡಲು ಸೂಚನೆ ನೀಡಲಾಗಿದೆ.

ಸಾರ್ವಜನಿಕರಿಗೆ ಸೈಟ್ ಖರೀದಿ ಬೆಲೆ ಎಷ್ಟು?

ಭೂಮಿ ನೀಡಿದ ರೈತರಿಗೆ ಮಾತ್ರ ಪ್ರತಿ ಚದರ ಅಡಿಗೆ 20 ರೂಪಾಯಿ ವೆಚ್ಚದಲ್ಲಿ ಸೈಟ್ ನೀಡಲಾಗುತ್ತದೆ. ಆದರೆ ಖಾಸಗಿ, ಸಾರ್ವಜನಿಕರ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾಗ ಕೊಟ್ಟ ರೈತರಿಗೆ ಮಾತ್ರ ದರ ಇಳಿಕೆ ಮಾಡಿ ನಿವೇಷ ಹಂಚಿಕೆಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರು, ಇತರ ಖಾಸಗಿ ನಿವೇಷ ಖರೀದಿಗೆ ಪ್ರತಿ ಚದರ ಅಡಿಗೆ 6000 ರೂಪಾಯಿ ನಿಗದಿ ಮಾಡಲಾಗಿದೆ. ಕಾರಂತ ಬಡಾವಣೆ ಅಭಿವೃದ್ಧಿ ಕಾಮಗಾರಿ ವೇಳೆ ಬೆಲೆ 4999 ರೂಪಾಯಿ ಇತ್ತು. ಇದೀಗ ಏರಿಕೆಯಾಗಿದೆ.

18 ಸಾವಿರ ನಿಷೇಷ ರೈತರಿಗೆ ಮೀಸಲು

ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ 3200 ರೈತರಿಗೆ 18 ಸಾವಿರ ನಿವೇಷನಗಳನ್ನು ಮೀಸಲಿಡಲಾಗಿದೆ. ಇಧೀಗ ಕಡಿಮೆ ಬೆಲೆಯಲ್ಲಿ ನಿವೇಷನ ಖರೀದಿಸುವ ಅವಕಾಶವನ್ನು ರೈತರು ಪಡೆದುಕೊಂಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು: ಬಾಲಕಾರ್ಮಿಕರ ವಿರುದ್ಧ ಖಾಕಿ ಅಟ್ಯಾಕ್: ಸಿಸಿಬಿ ಪೊಲೀಸರ ಬಿಗ್ ಆಪರೇಷನ್, 100ಕ್ಕೂ ಹೆಚ್ಚು ಮಕ್ಕಳ ರಕ್ಷಣೆ!
ದೇವನಹಳ್ಳಿ ಬಳಿಯ ಕೃಷ್ಣದೇವರಾಯ ಶಿಕ್ಷಣ ಟ್ರಸ್ಟ್‌ನ 31 ಎಕ್ರೆ ವಶಕ್ಕೆ ಪಡೆಯಿರಿ: ಹೈಕೋರ್ಟ್