ಎಲ್ಲಿಗಾದ್ರೂ ಹೋಗ್ತೀವಿ, ಕೇಳೋಕೆ ಕಾಂಗ್ರೆಸ್‌ಗೇನು ಹಕ್ಕು?: ಅನರ್ಹ ಶಾಸಕ

By Kannadaprabha News  |  First Published Nov 4, 2019, 8:25 AM IST

ನಾವು ಎಲ್ಲಿಗಾದ್ರೂ ಹೋಗ್ತೀವಿ ನಮ್ಮನ್ನು ಕೇಳೋಕೆ ಕಾಂಗ್ರೆಸ್‌ಗೇನು ಹಕ್ಕಿದೆ..? ಹೀಗೆಂದು ಅನರ್ಹ ಶಾಸಕರೋರ್ವರು ಪ್ರಶ್ನೆ ಮಾಡಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. 


ಸೂಲಿಬೆಲೆ [ನ.04]: ಮೈತ್ರಿ ಸರ್ಕಾರದಲ್ಲಿ ನಮ್ಮ ಕೆಲಸಗಳು ಆಗುತ್ತಿಲ್ಲ ಎಂದು ನಾವು ರಾಜೀನಾಮೆ ಕೊಟ್ಟಮೇಲೆ ಕಾಂಗ್ರೆಸ್‌ ಪಕ್ಷ ನಮ್ಮನ್ನು ಅನರ್ಹ ಮಾಡಿದೆ. 

ರಾಜೀನಾಮೆ ಕೊಟ್ಟಮೇಲೆ ನಾವು ಎಲ್ಲಿ ಬೇಕಾದ್ರೂ ಹೋಗ್ತೀವಿ. ನಮ್ಮನ್ನು ಕೇಳೋಕೆ ಅವರಿಗೇನು ಹಕ್ಕಿದೆ ಎಂದು ಎಂಟಿಬಿ ನಾಗರಾಜ್‌ ಗುಡುಗಿದ್ದಾರೆ. 

Latest Videos

undefined

ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಪಕ್ಷ ಬೇಡ ಅಂತ ರಾಜೀನಾಮೆ ಕೊಟ್ಟಮೇಲೆ ನಾವು ಏರೋಪ್ಲೇನ್‌ ಮೇಲಾದ್ರೂ ಹೋಗ್ತೀವಿ, ಜೆಡಿಎಸ್‌ ಅವರ ಜೊತೆನಾದ್ರೂ ಹೋಗ್ತೀವಿ. ಬಿಜೆಪಿ ಅವರ ಜೊತೆಯಾನಾದ್ರೂ ಹೋಗ್ತೀವಿ. ಇದು ನಮ್ಮ ಸ್ವಾತಂತ್ರ್ಯ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. 

‘ಎಂಟಿಬಿ ಈ ಬಾರಿ ಮುಸ್ಲಿಮರ 300 ವೋಟ್‌ ಪಡೆದ್ರೆ ರಾಜಕೀಯ ನಿವೃತ್ತಿ’...

ಯಡಿಯೂರಪ್ಪ ಅವರ ಆಡಿಯೋ ಸಂಬಂಧ ಸುಪ್ರೀಂಕೋರ್ಟ್‌ ಅಪೀಲು ಹೋಗ್ತೀವಿ ಅಂತ ಹೇಳ್ತಾರೆ. ಅದರಿಂದ ಏನೂ ಆಗೋಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯಿಂದ ನಮ್ಮ ಕೆಲಸನೇ ಆಗಿಲ್ಲ ಅಂತ ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಅಲ್ಲಿ ಏನು ನಮ್ಮ ಕೆಲಸಗಳಾಗಿಲ್ಲ ಅಂತಾನೆ ನಾವು ರಾಜೀನಾಮೆ ಕೊಟ್ಟು ಬಂದಿದ್ದು ಎಂದರು.

click me!