ಬೆಂಗಳೂರು ಅರಸೀಕೆರೆ ಪ್ರಯಾಣಿಕ ರೈಲಿಗೆ ಚಿಕ್ಕಬಾಣಾವರ ಬಳಿ ಕಿಡಿಗೇಡಿಗಳಿಂದ ಕಲ್ಲು ತೂರಾಟ

Published : Oct 19, 2026, 07:50 PM IST
Miscreants Pelt Stones at Train Near Chikbanavara

ಸಾರಾಂಶ

ಬೆಂಗಳೂರು ಹೊರವಲಯ ಚಿಕ್ಕಬಾಣಾವಾರ ಬಳಿ ಅರಸೀಕರೆ ಪ್ರಯಾಣಿಕರ ರೈಲಿನ ಮೇಲೆ ಕಲ್ಲು ತೂರಿದ ಘಟನೆ ನಡೆದಿದೆ. ರೈಲಿನ ಗಾಜು ಪುಡಿ ಪುಡಿಯಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು (ಅ.19) ಬೆಂಗಳೂರು–ಅರಸೀಕೆರೆ ಪ್ರಯಾಣಿಕ ರೈಲಿಗೆ ಚಿಕ್ಕಬಾಣಾವರ ಬಳಿ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ರೈಲಿನ ಗಾಜು ಪುಡಿಪುಡಿಯಾಗಿದೆ. ಸ್ವಲ್ಪದರಲ್ಲೇ ದುರಂತ ತಪ್ಪಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು (ಅ.19) ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಆಯುಧ ಪೂಜೆ, ವಿಜಯದಶಮಿ ಹಬ್ಬದ ಪ್ರಯುಕ್ತ ರೈಲು ತುಂಬಿತ್ತು.

ಏಕಾಏಕಿ ತೂರಿಬಂದ ಕಲ್ಲು

ಬೆಂಗಳೂರಿನಿಂದ ಹೊರಟ ರೈಲು ನಗರ ದಾಟಿ ಬೆಂಗಳೂರು ಹೊರವಲಯ ತಲುಪಿತ್ತು. ಕೆಲ ಪ್ರಯಾಣಿಕರು ನಿದ್ದೆಗೆ ಜಾರಿದ್ದರು. ಈ ವೇಳೆ ರೈಲು ಸಾಗುತ್ತಿದ್ದಂತೆ ಏಕಾಏಕಿ ರೈಲಿನ ಗಾಜಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಕಿಡಿಗೇಡಿಗಳು ಕಲ್ಲುಗಳನ್ನು ತೂರಿದ್ದಾರೆ. ಶಬ್ದ ಕೇಳಿಸುತ್ತಿದ್ದಂತೆ ಪ್ರಯಾಣಿಕರು ಆತಂಕಗೊಂಡಿದ್ದಾರೆ. ರೈಲಿನ ಗಾಜುಗಳು ಪುಡಿ ಪುಡಿಯಾಗಿದೆ.

ಸ್ವಲ್ಪದರಲ್ಲೇ ತಪ್ಪಿದ ದುರಂತ

ಕಲ್ಲು ತೂರಾಟದ ಘಟನೆಯಲ್ಲಿ ರೈಲಿನ ಗಾಜು ಹಾನಿಯಾಗಿದೆ. ತೂರಿದ ಕಲ್ಲು ರೈಲಿನ ಬೋಗಿಯೊಳಕ್ಕೆ ಬಿದ್ದಿದೆ. ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿದೆ. ಘಟನೆ ಕುರಿತು ರೈಲಿನಲ್ಲಿದ್ದ ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ. ಚಿಕ್ಕಬಾಣಾವಾರ ಬಳಿ ಕಲ್ಲುಗಳು ತೂರಿಬಂದಿದೆ. ರೈಲಿನ ಗಾಜು ಪುಡಿಯಾಗಿ ರೈಲಿನ ಬೋಗಿಯೊಳಕ್ಕೆ ಕಲ್ಲು ಬಿದ್ದಿದೆ. ಗಾಜಿನ ಚೂರುಗಳು ನಮ್ಮ ಮೇಲೆ ಬಿದ್ದಿದೆ. ಅದೃಷ್ಛವಶಾತ್ ಕಲ್ಲು ಪ್ರಯಾಣಿಕರ ಮೇಲೆ ಬೀಳಲಿಲ್ಲ. ಕುಳಿತ ಪಕ್ಕದಲ್ಲೇ ಕಲ್ಲು ಬಿದ್ದಿದೆ ಎಂದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಗಗನ್ ಹೇಳಿದ್ದಾರೆ. ಇದೇ ವೇಳೆ ಹಲವರು ಈ ರೀತಿ ಕಲ್ಲು ತೂರಾಟ ಹಲವು ಬಾರಿ ನಡದಿದೆ. ಈ ಹಿಂದಿನ ಘಟನೆಯಲ್ಲಿ ಪ್ರಯಾಣಿಕರು ಗಾಯಗೊಂಡಿದ್ದರು ಎಂದಿದ್ದಾರೆ. ಈ ಕುರಿತು ಅಧಿಕಾರಿಗಳು ಗಮನಹರಿಸಬೇಕು, ಇಷ್ಟೇ ಅಲ್ಲ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ 'ಸ್ಟೋನ್ ಟು ಲೈಫ್': 3D ಪ್ರೊಜೆಕ್ಷನ್ ಮೂಲಕ ಸಾಂಸ್ಕೃತಿಕ ಅನುಭವ
ಬೆಂಗಳೂರು-ವಿಜಯವಾಡ ಪ್ರಯಾಣ ಇನ್ಮುಂದೆ ಜಸ್ಟ್ 6 ಗಂಟೆ! ₹19,000 ಕೋಟಿ ವೆಚ್ಚ, 120 ಕಿ.ಮೀ ವೇಗ