ಡೀಸೆಲ್ ಖಾಲಿಯಾದ ಲಾರಿ ತಂದಿಟ್ಟ ಅವಾಂತರ

By Kannadaprabha NewsFirst Published Oct 18, 2019, 10:52 AM IST
Highlights

ದೊಡ್ಡ ಲಾರಿಯಲ್ಲಿ ಡಿಸೇಲ್ ಖಾಲಿಯಾಗಿ ರಸ್ತೆಯಲ್ಲಿ ನಿಂತುಕೊಂಡು ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದ ಘಟನೆ  ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.
 

ದಾಬಸ್‌ಪೇಟೆ [ಅ.18]:  ಕಾರು ತುಂಬುವ ದೊಡ್ಡ ಲಾರಿಯಲ್ಲಿ ಡಿಸೇಲ್ ಖಾಲಿಯಾಗಿ ರಸ್ತೆಯಲ್ಲಿ ನಿಂತುಕೊಂಡು ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದ ಘಟನೆ ತ್ಯಾಮಗೊಂಡ್ಲು ಹೋಬಳಿಯ ಕುಲುವನಹಳ್ಳಿ ಗ್ರಾಮದ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

ಅ. 12 ರ ಗುರುವಾರ ಸಂಜೆ 7 ಗಂಟೆಯ ಸಮಯದಲ್ಲಿ ಬೆಂಗಳೂರಿನಿಂದ ತುಮಕೂರು ಕಡೆಗೆ ಚಲಿಸುತ್ತಿದ್ದ ಕಾರು ತುಂಬುವ ದೊಡ್ಡ ಲಾರಿಯಲ್ಲಿ ಡಿಸೇಲ್ ಖಾಲಿಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯೂ ಟರ್ನ್ ಮಧ್ಯೆ ಲಾರಿ ನಿಂತಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಕಿ.ಮೀ. ಗಟ್ಟಲೇ ಟ್ರಾಫಿಕ್ ಜಾಂ ಉಂಟಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರಿನಿಂದ ಬೇರೆಡೆಗೆ ತೆರಳುತ್ತಿದ್ದ ವಾಹನ ಸವಾರರು ಇದರಿಂದ ಪರದಾಡುವಂತಾಯಿತು. ನಂತರ ಹತ್ತಿರದ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್ ಹಾಕಿ ಲಾರಿಯನ್ನು ಮಧ್ಯದ ರಸ್ತೆಯಿಂದ ತೆಗೆದು ಬೇರೆ ವಾಹನಗಳು ಓಡಾಡಲು ಸಾರ್ವಜನಿಕರು ಅನುವು ಮಾಡಿಕೊಟ್ಟಿದ್ದಾರೆ.

(ಸಾಂದರ್ಬಿಕ ಚಿತ್ರ)

click me!