
ಬೆಳಗಾವಿ[ಅ.23]: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸವದತ್ತಿಯಲ್ಲಿರುವ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನದ ಅವರಣಕ್ಕೂ ನೀರು ನುಗ್ಗಿದೆ. ದೇವಸ್ಥಾನದ ಆವರಣದಲ್ಲಿ ಭಾರಿ ಪ್ರಮಾಣದ ನೀರು ಆವರಸಿದೆ. ಇದರಿಂದ ದೇವಸ್ಥಾನ ಅಕ್ಷರಶಃ ನದಿಯಂತಾಗಿದೆ. ಹೀಗಾಗಿ ದೇವಿಯ ದರ್ಶನ ಪಡೆಯಲು ದೇವಸ್ಥಾನಕ್ಕೆ ಬಂದಿದ್ದ ಬಂದ ಭಕ್ತರು ಕಂಗಾಲಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಈ ಭಾಗದ ಜನ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೇ ಭೀಕರ ಪ್ರವಾಹ ಎದುರಾಗಿತ್ತು. ಈ ಪ್ರವಾಹದ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಪ್ರವಾಹ ಬಂದೊದಗಿದೆ.
ಸವದತ್ತಿ ಯಲ್ಲಮ್ಮ ದೇವಿಯ ದೇವಸ್ಥಾನದ ಹೆಲ್ಪ್ ಲೈನ್ ನಂಬರ್ ಗಳು- ಮಲ್ಲನಗೌಡ, ಸ್ಥಳಿಯರು : 9964850098, ರವಿ ಕೊಟಾರಗಸ್ತಿ, ಕಾರ್ಯನಿರ್ವಾಕ ಅದಿಕಾರಿ: 9448158115