ಧಾರಾಕಾರ ಮಳೆ: ನಾರಾಯಣಪುರ ಡ್ಯಾಂನಿಂದ 1ಲಕ್ಷ ಕ್ಯುಸೆಕ್ ನೀರು ಬಿಡುಗಡೆ

By Web DeskFirst Published Oct 21, 2019, 11:28 AM IST
Highlights

ಮಹಾರಾಷ್ಟ್ರ ಹಾಗೂ ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ಧಾರಾರಕಾರ ಮಳೆ| ಕೃಷ್ಣ ನದಿಯಲ್ಲಿ ಮತ್ತೆ ಪ್ರವಾಹದ ಭೀತಿ| ನಾರಾಯಣಪುರ ಜಲಾಶಯಕ್ಕೆ ಒಳ ಹರಿವು ಭಾರೀ ಹೆಚ್ಚಳ|  ಒಳಹರಿವು ಹೆಚ್ಚಳವಾಗಿದ್ದರಿಂದ ಕೃಷ್ಣ ನದಿಗೆ 1ಲಕ್ಷ 16 ಸಾವಿರ ಕ್ಯುಸೆಕ್ ನೀರು ಬಿಡುಗಡೆ| ಜಲಾಶಯದ 10 ಗೇಟ್ ಗಳ ಮುಖಾಂತರ ನೀರು ಬಿಡುಗಡೆ| ನಿರಂತರ ಮಳೆಯಾದರೆ ಮತ್ತಷ್ಟು ನೀರು ಕೃಷ್ಣ ನದಿಗೆ ಬಿಡುಗಡೆ ಸಾಧ್ಯತೆ| 

ರಾಯಚೂರು[ಅ.21]: ಮಹಾರಾಷ್ಟ್ರ ಹಾಗೂ ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ಧಾರಾರಕಾರ ಮಳೆ ಸುರಿದ ಪರಿಣಾಮ ಕೃಷ್ಣ ನದಿಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಮಹಾರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಒಳ ಹರಿವು ಭಾರೀ ಹೆಚ್ಚಳವಾಗಿದೆ. ಒಳಹರಿವು ಹೆಚ್ಚಳವಾಗಿದ್ದರಿಂದ ಕೃಷ್ಣ ನದಿಗೆ 1ಲಕ್ಷ 16 ಸಾವಿರ 
ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ 10 ಗೇಟ್ ಗಳ ಮುಖಾಂತರ ನೀರು ಬಿಡುಗಡೆ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿರಂತರ ಮಳೆಯಾದರೆ ಮತ್ತಷ್ಟು ನೀರು ಕೃಷ್ಣ ನದಿಗೆ ಬಿಡುಗಡೆ ಸಾಧ್ಯತೆ ಎಂದು ತಿಳಿದು ಬಂದಿದೆ. ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ನದಿ ಪಾತ್ರದ ಜನರರಲ್ಲಿ ಮತ್ತೆ ಆತಂಕ ಎದರಾಗಿದೆ. 
 

click me!