ಸಿದ್ದೇಶ್ವರ ಜಾತ್ರೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಹವಾ, ಟ್ರೋಫಿ ಮೂಲಕ ಪುಷ್ಪಾರ್ಷನೆ

Published : Apr 04, 2026, 10:37 PM IST
Athani Siddheshwara Jathre

ಸಾರಾಂಶ

ಸಿದ್ದೇಶ್ವರ ಜಾತ್ರೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಹವಾ, ಟ್ರೋಫಿ ಮೂಲಕ ಪುಷ್ಪಾರ್ಷನೆ ಮಾಡಲಾಗಿದೆ. ಈ ಬಾರಿಯೂ ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಪ್ರಾರ್ಥಿಸಿದ್ದಾರೆ. 

ಚಿಕ್ಕೋಡಿ (ಏ.04) ಪ್ರಖ್ಯಾತ ಅಥಣಿಯ ಸಿದ್ದೇಶ್ವರ ಜಾತ್ರೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಹವಾ ಜೋರಾಗಿದೆ. ನಿನ್ನೆ ನಡೆದ ಸಿದ್ದೇಶ್ವರ ಜಾತ್ರೆಯ ರಥೋತ್ಸವ ಮೆರವಣಿಗೆ ವೇಳೆ ಆರ್‌ಸಿಬಿ ಕಪ್ ಮೂಲಕ ಅಭಿಮಾನಿಗಳಿಂದ ಪುಷ್ಪಾರ್ಚನೆ ಸಲ್ಲಿಸಲಾಗಿದೆ. ಈ ಬಾರಿಯೂ ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.ಆರ್‌ಸಿಬಿ ಅಭಿಮಾನಿಗಳು ವಿಶೇಷ ರೀತಿಯಲ್ಲಿ ರಥೋತ್ಸವಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ.

ಟ್ರೋಫಿಯಿಂದ ಹೂವಿನ ಮಳೆ

ಸಿದ್ದೇಶ್ವರ ಜಾತ್ರೆ ಬರವು ದಾರಿಯಲ್ಲಿ ಆರ್‌ಸಿಬಿಯ ಚಾಂಪಿಯನ್ ಬ್ಯಾನರ್ ಕಟ್ಟಲಾಗಿದೆ. ಬಳಿಕ ಎತ್ತರದಲ್ಲಿ ಐಪಿಎಲ್ ಟ್ರೋಫಿ ಹೋಲುವ ಪ್ರತಿಯನ್ನು ಕಟ್ಟಲಾಗಿತ್ತು. ಈ ಟ್ರೋಫಿ ಒಳಗೆ ಹೂವಿನ ದಳಗಳನ್ನು ತುಂಬಿಸಲಾಗಿತ್ತು. ರಥೋತ್ಸವ ಈ ದಾರಿಯಲ್ಲಿ ಆಗಮಿಸುತ್ತಿದ್ದಂತೆ ಟ್ರೋಫಿಯಿಂದ ಹೂವಿನ ಮಳೆ ಸುರಿಸಲಾಗಿತ್ತು.

ಪ್ರತಿ ವರ್ಷ ಆರ್‌ಸಿಬಿ ಅಭಿಮಾನಿಗಳ ಬಳಕ ಸಿದ್ದೇಶ್ವರನಿಗೆ ಟ್ರೋಫಿ ಗೆಲ್ಲಲು ಪೂಜೆ ಸಲ್ಲಿಸಲಾಗುತ್ತದೆ. ಇದರಂತೆ ಈ ವರ್ಷವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲಲಿ ಎಂದು ಪ್ರಾರ್ಥಿಸಿದ್ದಾರೆ. ರಥೋತ್ಸವ ಆಗಮಿಸುತ್ತಿದ್ದಂತೆ ಟ್ರೋಫಿ ಮೂಲಕ ಪುಷ್ಪಾರ್ಷನೆ ಮಾಡಲಾಗಿದೆ. ಈ ವೇಳೆ ಈ ಸಲವೂ ಕಪ್ ನಮ್ದೆ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

2025ರಲ್ಲಿ ಚಾಂಪಿಯನ್ ಆದ ಆರ್‌ಸಿಬಿ

2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಐಪಿಎಲ್ ಇತಿಹಾಸದಲ್ಲಿ ಟ್ರೋಫಿ ಇಲ್ಲದೆ ಕೊರಗಿದ್ದ ಆರ್‌ಸಿಬಿ ಭರ್ಜರಿಯಾಗಿ ಟ್ರೋಫಿ ಗೆದ್ದಿತ್ತು. ಈ ಮೂಲಕ ಹೊಸ ಇತಿಹಾಸ ರಚಿಸಿತ್ತು. ಆದರೆ ಟ್ರೋಫಿ ಗೆಲುವಿನ ಸಂಭ್ರಮದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ನಡೆದಿತ್ತು. ನೂಕು ನುಗ್ಗಲಿನಲ್ಲಿ 11 ಅಭಿಮಾನಿಗಳು ಮೃತಪಟ್ಟಿದ್ದರು. ಐಪಿಎಲ್ ಹಾಗೂ ಭಾರತದ ಕ್ರೀಡಾ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿದೆ. ಈ ಘಟನೆಯಿಂದ ಚಿನ್ನಸ್ವಾಮಿಯಲ್ಲಿ ಐಪಿಎಲ್ ಸೇರಿದಂತೆ ಎಲ್ಲಾ ಪಂದ್ಯಗಳು ರದ್ದಾಗಿತ್ತು. ಆದರೆ ಸತತ ಪ್ರಯತ್ನಗಳ ಬಳಿಕ ಐಪಿಎಲ್ ಟೂರ್ನಿ ಆಯೋಜಿಸಲಾಗಿದೆ.

 

PREV
Read more Articles on
click me!

Recommended Stories

ಎಲ್‌ಪಿಜಿ ಸಿಲಿಂಡರ್ ಕೊರತೆ ನೀಗಿಸಿದ ಹೊಸ ಒಲೆ: ಬೆಳಗಾವಿ ಹೋಟೆಲ್‌ಗಳಲ್ಲಿ ಬಯೋಮಾಸ್
ಬೀದಿ ನಾಯಿಗಳ ರಕ್ಕಸ ದಾಳಿಗೆ ಕೋಮಾಕ್ಕೆ ಹೋದ ವ್ಯಕ್ತಿ; ಹುಲ್ಲೋಳಿ ಹಟ್ಟಿ ನಾಯಿಗಳ ಕಾಟಕ್ಕೆ, ಬೆಚ್ಚಿದ ಗ್ರಾಮಸ್ಥರು!