ಸಾಲ ತೀರಿಸೋಕೆ ಬಿಜೆಪಿಗೆ ಹೋದ ರಮೇಶ: ಸತೀಶ ಜಾರಕಿಹೊಳಿ

Published : Oct 18, 2019, 08:30 AM IST
ಸಾಲ ತೀರಿಸೋಕೆ ಬಿಜೆಪಿಗೆ ಹೋದ ರಮೇಶ: ಸತೀಶ ಜಾರಕಿಹೊಳಿ

ಸಾರಾಂಶ

ರಮೇಶ ಜಾರಕಿಹೊಳಿ ಪಕ್ಷ ಬೆಳೆಸಲು ಬಿಜೆಪಿಗೆ ಹೋಗಿಲ್ಲ| ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದು ಅದನ್ನು ತೀರಿಸಲು ಹೋಗಿದ್ದಾನೆ ಎಂದ ಮಾಜಿ ಸಚಿವ, ಸತೀಶ ಜಾರಕಿಹೊಳಿ| ಈಗಾಗಲೇ ಅವನು ಕಾಂಗ್ರೆಸ್‌ ಬಿಟ್ಟು ಹೋಗಿದ್ದು ಒಳ್ಳೆಯದೇ ಆಯಿತು| ರಮೇಶ ಸ್ವಂತ ಲಾಭಕ್ಕಾಗಿ ಹೋಗಿದ್ದಾನೆ| ಯಡಿಯೂರಪ್ಪಗೋಸ್ಕರ ಹೋಗಿಲ್ಲ|

ಗೋಕಾಕ(ಅ.18): ರಮೇಶ ಜಾರಕಿಹೊಳಿ ಪಕ್ಷ ಬೆಳೆಸಲು ಬಿಜೆಪಿಗೆ ಹೋಗಿಲ್ಲ. ಬದಲಾಗಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದು ಅದನ್ನು ತೀರಿಸಲು ಹೋಗಿದ್ದಾನೆ ಎಂದು ಮಾಜಿ ಸಚಿವ, ಸತೀಶ ಜಾರಕಿಹೊಳಿ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ. 

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರದಲ್ಲಿ ಬುಧವಾರ ರಾತ್ರಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಅವನು ಕಾಂಗ್ರೆಸ್‌ ಬಿಟ್ಟು ಹೋಗಿದ್ದು ಒಳ್ಳೆಯದೇ ಆಯಿತು. ಅವನು ಹೇಳಿಕೊಂಡಂತೆ ನಂದು ಸಾಲ ಆಗಿದೆ ಎಂದು ಹೇಳಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಷ್ಟು ತಗೋತೀನಿ ಸಾಲ ತೀರಿಸುತ್ತೇನೆ. ಮತ್ತೆ ಕಾಂಗ್ರೆಸ್‌ಗೆ ಬರುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಇಂತಹ ವಿಚಾರವು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿಗೆ ಇದು ಗೊತ್ತಾಗಬೇಕು. ಇವನನ್ನು ಅವರು (ಬಿಜೆಪಿ) ನಂಬಿರಬಹುದು. ಇವನು ಸ್ವಂತ ಲಾಭಕ್ಕಾಗಿ ಹೋಗಿದ್ದಾನೆಯೇ ಹೊರತು, ಯಡಿಯೂರಪ್ಪಗೋಸ್ಕರ ಹೋಗಿಲ್ಲ ಎಂದು ಹೇಳಿದ್ದಾರೆ. 
 

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ