ಬೆಳಗಾವಿ: ಪ್ರವಾಹ ಸಂತ್ರಸ್ತರನ್ನ ಭೇಟಿಯಾದ ಸಚಿವ ಅಶೋಕ

Published : Oct 28, 2019, 01:21 PM IST
ಬೆಳಗಾವಿ: ಪ್ರವಾಹ ಸಂತ್ರಸ್ತರನ್ನ ಭೇಟಿಯಾದ ಸಚಿವ ಅಶೋಕ

ಸಾರಾಂಶ

ಪ್ರವಾಹ ಬಂದು ಮೂರು ತಿಂಗಳ ನಂತರ ಜಿಲ್ಲೆಗೆ ಭೇಟಿ ನೀಡಿದ ಸಚಿವ ಅಶೋಕ| ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ವೀಕ್ಷಣೆ| ಮಾಧ್ಯಮದವರಿಗೂ ಮಾಹಿತಿ ನೀಡದೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ|

ಬೆಳಗಾವಿ(ಅ.28): ಕಂದಾಯ ಸಚಿವ ಆರ್.ಅಶೋಕ ಅವರು ಎಲ್ಲವೂ ಮುಗಿದ ಮೇಲೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದ್ದಾರೆ. ಸತತ ಮೂರನೇ ಬಾರಿಗೆ ನೆರೆ ಪ್ರವಾಹಕ್ಕೆ ಸಿಕ್ಕು ನಲುಗಿದ ಮೇಲೆ ಜಿಲ್ಲೆಗೆ ಸಚಿವ ಅಶೋಕ ಅವರು ಆಗಮಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲೆಗೆ ನಾಲ್ಕು ಬಾರಿ ಬಂದು ಹೋಗಿದ್ದಾರೆ. ಆದರೆ ಸಚಿವ ಅಶೋಕ ಮಾತ್ರ ಮೂರು ತಿಂಗಳ ಅವಧಿಯಲ್ಲಿ ಇದೇ‌ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದಾರೆ.  

ತರಾತುರಿಯಲ್ಲಿ ನೆರೆ ಪೀಡಿತ ಪ್ರದೇಶಗಳ ಭೇಟಿ 

ಜಿಲ್ಲೆಯ ಕಿತ್ತೂರು ತಾಲೂಕಿನ ಗದ್ದಿಕೇರಿ ಗ್ರಾಮದ ಕೆರೆ ಬಳಿ ರಸ್ತೆ ಮತ್ತು ಭೂಮಿ‌ ಕುಸಿದ ಸ್ಥಳಗಳ ವೀಕ್ಷಣೆಯನ್ನು ತರಾತುರಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇನ್ನು ಜಿಲ್ಲೆಯ ರಾಮದುರ್ಗ ತಾಲೂಕಿನ ಹಲವು ಪ್ರದೇಶಗಳಿಗೂ ಸಹ ಸಚಿವರು ಭೇಟಿ ನೀಡಿದ್ದಾರೆ. ಆದರೆ, ಮಾಧ್ಯಮದವರಿಗೂ ಮಾಹಿತಿ ನೀಡದೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. 
 

PREV
click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ: ಇಂದು ಕಲಾಪ ಮುಂದೂಡುವ ಸಾಧ್ಯತೆ
2028ಕ್ಕೆ ನಾನೇ ಸಿಎಂ, 11 ಜೆಸಿಬಿ ಪೂಜೆ ಮಾಡಿ ಪ್ರಮಾಣ ಸ್ವೀಕರಿಸ್ತೀನಿ, ಬೆಳಗಾವಿಯಲ್ಲಿ ಯತ್ನಾಳ್ ಅಬ್ಬರದ ಭಾಷಣ!