ಗೋಕಾಕ ಬೆಟ್ಟದಿಂದ ಉರುಳಿ ಬಿದ್ದ ಮತ್ತೊಂದು ಬೃಹತ್ ಬಂಡೆಗಲ್ಲು: ಆತಂಕದಲ್ಲಿ ಜನತೆ

By Web DeskFirst Published Oct 28, 2019, 9:09 AM IST
Highlights

ಬೆಟ್ಟದಿಂದ ಉರುಳಿ ಬಿದ್ದ ಬಂಡೆಗಲ್ಲು| ಗೋಕಾಕ ನಗರದ ಮಲ್ಲಿಕಾರ್ಜುನ ಬೆಟ್ಟದಿಂದ ಸುಮಾರು ಐದನೂರು ಮೀಟರ್ ಮೇಲಿಂದ ಕೆಳಗೆ ಉರುಳಿ ಬಿದ್ದ ಬಂಡೆಗಲ್ಲು| ಸ್ಥಳಿಯರಲ್ಲಿ ಆತಂಕ| ಅರ್ಧ ಭಾಗ ಇನ್ನೂ ಮೇಲೆ ಇದ್ದು ಯಾವಾಗ ಬೇಕಾದರೂ ಉರುಳುವ ಸಾಧ್ಯತೆ| ಅದೃಷ್ಟವಶಾತ್ ಯಾವುದೇ ಮನೆ ಹಾಗೂ ಜೀವ ಹಾನಿಯಾಗಿಲ್ಲ| 

ಬೆಳಗಾವಿ(ಅ.28): ಬಂಡೆಗಲ್ಲು ಬೆಟ್ಟದಿಂದ ಉರುಳಿ ಬಿದ್ದ ಘಟನೆ ಜಿಲ್ಲೆಯ ಗೋಕಾಕ ನಗರದಲ್ಲಿ ಭಾನುವಾರ ನಡೆದಿದೆ. ನಗರದ ಮಲ್ಲಿಕಾರ್ಜುನ ಬೆಟ್ಟದಿಂದ ಸುಮಾರು ಐದನೂರು ಮೀಟರ್ ಮೇಲಿಂದ ಕೆಳಗೆ ಉರುಳಿ ಬಿದ್ದ ಬಂಡೆಗಲ್ಲು ಸಣ್ಣ ಚೂರುಗಳಾಗಿದೆ. 

ಗೋಕಾಕ್‌ನಲ್ಲಿ ಮನೆಗಳಿಗೆ ಆತಂಕ ತಂದಿದ್ದ ಬಂಡೆ ತೆರವು

ಸಣ್ಣ ಚೂರಾದ ಹಿನ್ನಲೆಯಲ್ಲಿ ಮನೆಗಳ ಮೇಲೆ ಉರುಳದೆ ಮನೆ ಪಕ್ಕದಲ್ಲಿ ಕಲ್ಲುಗಳು ಬಂದು ನಿಂತಿವೆ. ಅರ್ಧ ಭಾಗ ಇನ್ನೂ ಮೇಲೆ ಇದ್ದು ಯಾವಾಗ ಬೇಕಾದರೂ ಉರುಳುವ ಸಾಧ್ಯತೆ ಇದೆ. ಇದರಿಂದ ಮರಾಠಾ ಕಾಲೋನಿ, ಸಿದ್ದೇಶ್ವರ ಕಾಲೋನಿ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಅದೃಷ್ಟವಶಾತ್ ಯಾವುದೇ ಮನೆ ಹಾಗೂ ಜೀವ ಹಾನಿಯಾಗಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಎನ್‌ಡಿಆರ್‌ಎಫ್‌ ಸಿಬ್ಬಂದಿ ಹಾಗೂ ಸತೀಶ್ ಜಾರಕಿಹೊಳಿ‌ ಫೌಂಡೇಷನ್ ಸಿಬ್ಬಂದಿ ಜೋಡಿ ಬಂಡೆಗಲ್ಲು ಒಡೆದು ಬ್ಲಾಸ್ಟ್ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಸುರಿ ಭಾರಿ ಮಳೆಗೆ ಭೂಕುಸಿತದಿಂದ 321 ಟನ್ ತೂಕದ ಎರಡು ಬೃಹತ್ ಬಂಡೆಗಲ್ಲು ಉರುಳುತ್ತಿದ್ದವು, ಉರುಳುತ್ತಿದ್ದ ಎರಡು ಬಂಡೆಗಲ್ಲುಗಳನ್ನು ಬ್ಲಾಸ್ಟ್ ಮಾಡಿ ಕರಗಿಸಲಾಗಿತ್ತು. ಮತ್ತೆ ಈಗ ಅದೇ ಬೆಟ್ಟದಲ್ಲಿ ಬೇರೊಂದು ಬಂಡೆಗಲ್ಲು ಉರುಳಿ ಬಿದ್ದು ಆತಂಕ ಸೃಷ್ಟಿಸಿದೆ. 
 

click me!