ರಾಜ್ಯದಲ್ಲಿನ ಬೆಳವಣಿಗೆ ಆಡಳಿತ ಪಕ್ಷಕ್ಕೆ ಗೌರವ ತರುವಂತಹದ್ದಲ್ಲ :ಮಾಧುಸ್ವಾಮಿ

Published : Apr 11, 2022, 04:41 AM IST
ರಾಜ್ಯದಲ್ಲಿನ ಬೆಳವಣಿಗೆ ಆಡಳಿತ ಪಕ್ಷಕ್ಕೆ ಗೌರವ ತರುವಂತಹದ್ದಲ್ಲ :ಮಾಧುಸ್ವಾಮಿ

ಸಾರಾಂಶ

ರಾಜ್ಯದಲ್ಲಿನ ಬೆಳವಣಿಗೆ ಒಪ್ಪುವಂತದಲ್ಲ ಇದು ಆಡಳಿತ ಪಕ್ಷಕ್ಕೆ ಗೌರವ ತರುವುದಿಲ್ಲ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಬೇಸರ

ಬೆಳಗಾವಿ(ಏ.11) ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆಡಳಿತ ಪಕ್ಷಕ್ಕೆ ಗೌರವ ತರುವುದಿಲ್ಲ ಎಂದು ಹೇಳುವ ಮೂಲಕ ತಮ್ಮದೇ ಸರ್ಕಾರದ ವಿರುದ್ಧ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಬೆಳಗಾವಿ (Belgavi) ನಿಪ್ಪಾಣಿ (nippani) ತಾಲೂಕಿನ ಬೂದಿಹಾಳ (Boodihala)ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗಾದರೂ ತೊಂದರೆ ಕೊಡುವುದು, ಶಾಂತಿ ಕದಡುವುದು ಇಂಥ ಘಟನೆಗಳನ್ನು ಯಾರು ಮಾಡಿದರೂ ಗೌರವ ಬರುವುದಿಲ್ಲ. ಅದರಲ್ಲೂ ಆಡಳಿತ ಪಕ್ಷಕ್ಕಂತೂ ಇದರಿಂದ ಗೌರವ ಬರುವುದಿಲ್ಲ. ಆಡಳಿತ ಮಾಡಬೇಕಾದರೆ ಎಲ್ಲರೂ ಈ ದೇಶದ ಪ್ರಜೆಗಳೇ ಎಂದು ಭಾವಿಸಬೇಕು. ಆಕಸ್ಮಿಕವಾಗಿ ನಡೆಯುವುದು ಬೇರೆ ದುರುದ್ದೇಶಪೂರ್ವಕವಾಗಿ ಮಾಡುವುದನ್ನು ಯಾರೂ ಒಪ್ಪಿಕೊಳ್ಳಲು ಆಗುವುದಿಲ್ಲ ಎಂದರು.

ಚಂದ್ರು ಕೊಲೆ ಕೇಸ್‌ (Chandru Murder case) ಸಿಐಡಿ ತನಿಖೆ (CID Enquiry) ವಹಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಐಡಿ ತನಿಖೆ ಆಗುವುದಾದರೆ ಆಗಲಿ ತಪ್ಪೇನು, ಈಗಾಗಲೇ ಗೃಹಸಚಿವ ಅರಗ ಜ್ಞಾನೇಂದ್ರ (Araga Jnanendra) ಆಕಸ್ಮಿಕವಾಗಿ ಆತುರವಾಗಿ ಬಂದ ಮಾಹಿತಿ ಮೇಲೆ ಮಾತನಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈಗ ಅದೇ ವಿಚಾರವನ್ನು ಚರ್ಚೆ ಮಾಡುವುದು ಸರಿ ಅಲ್ಲ, ಪೊಲೀಸ್‌ ಆಯುಕ್ತರು (Police Commissioner) ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ. ಗೃಹಸಚಿವರು (Home Minister) ತಮ್ಮ ಹೇಳಿಕೆಯನ್ನು ಸರಿಪಡಿಸಿದ್ದಾರೆ. ಸಿಐಡಿ ತನಿಖೆ ಆಗುವುದಾದರೆ ಆಗಲಿ ತಪ್ಪೇನು ಎಂದರು.

Fake Certificate ನಕಲಿ ಜಾತಿ ಪತ್ರ ಪಡೆದವರ ವಿರುದ್ಧ ಮುಲಾಜಿಲ್ಲದೆ ಕ್ರಮ, ಮಾಧುಸ್ವಾಮಿ ಎಚ್ಚರಿಕೆ!
 

ಸಿಎಂ (Chief Minister) ಹೇಳಿದ ಮೇಲೆ ಚರ್ಚೆ ಎನಿದೆ, ಗೃಹಸಚಿವರ ವಿರುದ್ಧ ಅಧಿಕಾರಿಗಳು ಯಾರೂ ತಿರುಗಿಬಿದ್ದಿಲ್ಲ. ಗೃಹಸಚಿವರಿಗೆ ಯಾರೋ ಮಾಹಿತಿ ಕೊಟ್ಟ ತಕ್ಷಣ ಅವರು ಮಾತನಾಡಿದ್ದಾರೆ. ಅದರ ಬದಲಾಗಿ ಒಂದೆರಡು ನಿಮಿಷ ತಡೆದು ಅವರು ಮಾತನಾಡಬೇಕಿತ್ತು. ಪೂರ್ಣ ಮಾಹಿತಿ ಪಡೆದು ಹೇಳಿಕೆ ನೀಡಿದ್ದರೆ ಸರಿ ಹೋಗುತ್ತಿತ್ತು. ಸರಿಯಾದ ಮಾಹಿತಿ ಬಂದ ನಂತರ ಗೃಹ ಸಚಿವರು ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ. ಅವರು ತಪ್ಪು ಒಪ್ಪಿಕೊಂಡ ಮೇಲೂ ಚರ್ಚೆ ಮಾಡುವುದರಲ್ಲಿ ಏನೂ ಅರ್ಥವಿಲ್ಲ. ಈ(ಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಸಮಾಧಾನವಾಗಿ ವರ್ತಿಸಬೇಕು. ಎಲ್ಲರೂ ಸಮಾನತೆಯಿಂದ ಬದುಕಬೇಕು. ಶಾಂತಿ ಇರುವ ಕಡೆ ಅಭಿವೃದ್ಧಿ ಜಾಸ್ತಿ. ಶಾಂತಿ ಕದಡಿದರೆ ಅನಿವಾರ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಸಂಪುಟ ಪುನರ್‌ ರಚನೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಸದ್ಯಕ್ಕೆ ಸಂಪುಟ ಪುನರ್‌ ರಚನೆ ಮಾಡುವ ಸಾಧ್ಯತೆ ಇಲ್ಲ. ಎಲ್ಲವೂ ಬರೀ ಊಹಾಪೋಹ ಎಂದು ಸ್ಪಷ್ಟಪಡಿಸಿದರು.  

ಮುಸ್ಲಿಂ ಅಂಗಡಿ ಧ್ವಂಸ ಮಾಡಿದವರ ವಿರುದ್ಧ ಕ್ರಮ Minister Madhuswamy

ಧಾರವಾಡದಲ್ಲಿ (Dharwad ) ಮುಸ್ಲಿಂ (muslim) ಕಲ್ಲಂಗಡಿ ವ್ಯಾಪಾರಿ ಅಂಗಡಿ ಮೇಲೆ ದಾಳಿ ಪ್ರಕರಣವಾಗಿ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ (Minister Madhuswamy), 'ಸರ್ಕಾರದವರು ದಾಳಿಗಳನ್ನು ತಡೆಯೋಕಾಗಲ್ವಾ ಅಂತಾ ಮಾಧ್ಯಮಗಳ ಪ್ರಶ್ನೆಗೆ 'ಹೇಗೆ ನಿರೀಕ್ಷೆ ಮಾಡ್ತೀರಿ? ಒಂದು ದಿವಸ ಮಾವಿನ ಹಣ್ಣಿಂದು ಇನ್ನೊಂದು ದಿವಸ ಯಾರದೋ ಚಂದ್ರುಂದು, ರಾಜ್ಯದಲ್ಲಿ ಎಲ್ಲೆಲ್ಲೋ ಒಂದು ಘಟನೆ ನಡೆಯೋದಕ್ಕೆಲ್ಲಾ ಈ ರೀತಿ ಬಣ್ಣ ಕಟ್ಟೋದನ್ನು ಯಾರು ಸರ್ಕಾರ ನಡೆಸುವವರು ನಿರೀಕ್ಷೆ ಮಾಡೋಕಾಗಿರುತ್ತೆ? ಗಲಾಟೆ ಮಾಡಿದವರ ಮೇಲೆ ಕ್ರಮ ಆಗುತ್ತೆ, ಕ್ರಮ ಆಗೋದಿಲ್ಲ ಅಂತಾ ಹೇಳೋಕಾಗೋದಿಲ್ಲ‌. ಸಿಎಂ ಬಸವರಾಜ ಬೊಮ್ಮಾಯಿ ತನಿಖೆ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾನೂ ಸಹ ಇವತ್ತು ಹೇಳಿದ್ದೇನೆ ತನಿಖೆ ಆಗಬೇಕಾಗುತ್ತೆ. ಯಾರು ವಾತಾವರಣ ಹಾಳು ಮಾಡ್ತಿದ್ದಾರೆ ಯಾರೇ ಆದ್ರೂ ನಾವು ಕ್ರಮ ಜರುಗಿಸುತ್ತೇವೆ‌. ಯಾವ ಸರ್ಕಾರವೂ ಇದನ್ನೆಲ್ಲಾ ಸಹಿಸಲು ಆಗಲ್ಲ' ಎಂದರು. 

ಇನ್ನು ಪೊಲೀಸರು ತಕ್ಷಣ ಸ್ವಯಂಪ್ರೇರಿತ ದೂರು ದಾಖಲಿಸಬಹುದಿತ್ತಲ್ವಾ ಅಂತಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಮಾಧುಸ್ವಾಮಿ, 'ನಮಗೂ ಯಾರೂ ಏನೂ ಅಂತಾ ಗೊತ್ತಾಗದೇನೆ ಹೇಗೆ ಕೇಸ್ ಹಾಕೋದು? ದೂರುದಾರ ಇಲ್ಲ ಹೇಳಿರೋರು ಇಲ್ಲ, ಇಂತವರು ಮಾಡಿದಾರೆ ಅಂತಾ ಕಂಪ್ಲೆಂಟ್ ಕೊಟ್ರೆ ಕೇಸ್ ಮಾಡಬಹುದು. ಗೊತ್ತಿಲ್ಲ ಅಂದ್ಮೇಲೆ ತನಿಖೆ ಮಾಡಿಯೇ ಯಾರು ಅಂತಾ ಪತ್ತೆ ಮಾಡಿ ಕೇಸ್ ಹಾಕಬೇಕಾಗುತ್ತೆ, ಅದಕ್ಕೆ ಸ್ವಲ್ಪ ಕಾಲ ಬೇಕಾಗುತ್ತೆ. 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ