ವರುಣನ ಅಬ್ಬರ: ಬೆಳಗಾವಿಯಲ್ಲಿ ಐದು ಅಡಿ ರಸ್ತೆ ಕುಸಿತ

By Web DeskFirst Published Oct 23, 2019, 11:22 AM IST
Highlights

ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ| ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿ ಪಟ್ಟಣ ಸೇರಿದಂತೆ ಮೂರು ಗ್ರಾಮಗಳಿಗೆ ಎದರಾದ ಆತಂಕ| ಎಂ ಕೆ ಹುಬ್ಬಳ್ಳಿತಯಯಲ್ಲಿ ರಸ್ತೆ ಕುಸಿದಿದೆ| ನಿನ್ನೆ ಕೂಡ  ಅರ್ಧ ಕಿಮಿ ವರೆಗೂ ರಸ್ತೆ ಕುಸಿತವಾಗಿತ್ತು| ಗದ್ದಿಕೇರಿ ಕೆರೆ ಒಡೆಯುವ ಭೀತಿಯಲ್ಲಿದೆ| 

ಬೆಳಗಾವಿ[ಅ.23]: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕಿತ್ತೂರು ತಾಲೂಕಿನ ಎಂ ಕೆ ಹುಬ್ಬಳ್ಳಿ ಪಟ್ಟಣ ಸೇರಿದಂತೆ ಮೂರು ಗ್ರಾಮಗಳಿಗೆ ಆತಂಕ ಎದರಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸತತವಾಗಿ ಬೀಳುತ್ತಿರುವ ಮಳೆಯಿಂದ ಎಂ ಕೆ ಹುಬ್ಬಳ್ಳಿತಯಯಲ್ಲಿ ರಸ್ತೆ ಕುಸಿದಿದೆ. ನಿನ್ನೆ ಕೂಡ  ಅರ್ಧ ಕಿಮಿ ವರೆಗೂ ರಸ್ತೆ ಕುಸಿತವಾಗಿತ್ತು. ಇಂದು ಮತ್ತೆ 5 ಅಡಿ ಆಳಕ್ಕೆ ರಸ್ತೆ ಕುಸಿದಿದೆ. ಇನ್ನು ಭಾರೀ ಮಳೆಯಿಂದ ಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಗದ್ದಿಕೇರಿ ಕೆರೆ ಒಡೆಯುವ ಭೀತಿಯಲ್ಲಿದೆ. ಇದರಿಂದ ಗ್ರಾಮಸ್ಥರಲ್ಲಿ ಅತಂಕ ಎದುರಾಗಿದೆ. 

ಸ್ಥಳಕ್ಕೆ ಬಾರದ ಅಧಿಕಾರಿಗಳು 

ಕೆರೆ ಒಡೆಯುವ ಆತಂಕದಲ್ಲಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ, ಹೀಗಾಗಿ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆರೆ ಒಡೆದರೆ ಸಾವಿರಾರು ಎಕರೆ ಭೂಮಿ ಮತ್ತು ಎಂ ಕೆ ಹುಬ್ಬಳ್ಳಿ ಪಟ್ಟಣ ಮುಳುಗಡೆಯಾಗಲಿದೆ. 

click me!