ಅಥಣಿ: ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸಿ ಸಚಿವ ಸವದಿ

Published : Oct 20, 2019, 10:15 AM ISTUpdated : Oct 20, 2019, 10:16 AM IST
ಅಥಣಿ: ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸಿ ಸಚಿವ ಸವದಿ

ಸಾರಾಂಶ

ಸಾರಿಗೆ ಸಂಸ್ಥೆ ವಿವಿಧ ವಿಭಾಗಗಳ ಹೆಸರು ಬದಲಾವಣೆಗೆ ಚಿಂತನೆ: ಸವದಿ| ಅಥಣಿಯಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಉದ್ಘಾಟನೆ| ನಾಲ್ಕು ವಿಭಾಗದ ಹೆಸರು ಬದಲಾವಣೆ ವಿಚಾರ ಜನರ ಮಧ್ಯೆ ಚರ್ಚೆ| ಜನಾಭಿಪ್ರಾಯವನ್ನು ಆಧರಿಸಿ ಮುಂದಿನ ಕ್ರಮ| ಕಳೆದ 6-7 ವರ್ಷಗಳಿಂದ ಟಕೆಟ್‌ ದರ ಏರಿದ್ದರಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ| ಒಂದು ಬಸ್‌ ಒಂದು ಕಿ.ಮೀ. ಓಡಿದರೆ ಸುಮಾರು 8 ನಷ್ಟ| 

ಅಥಣಿ(ಅ.20): ರಾಜ್ಯದಲ್ಲಿನ ವಿವಿಧ ಸಾರಿಗೆ ವಿಭಾಗಗಳ ಹೆಸರು ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.  

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೈಟೆಕ್‌ ಬಸ್‌ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ವಿಭಾಗದ ಹೆಸರು ಬದಲಾವಣೆ ವಿಚಾರವನ್ನು ಜನರ ಮಧ್ಯೆ ಚರ್ಚೆಗೆ ಬಿಟ್ಟಿದ್ದೇನೆ. ಜನಾಭಿಪ್ರಾಯವನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ 6-7 ವರ್ಷಗಳಿಂದ ಟಕೆಟ್‌ ದರ ಏರಿದ್ದರಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಒಂದು ಬಸ್‌ ಒಂದು ಕಿ.ಮೀ. ಓಡಿದರೆ ಸುಮಾರು 8 ನಷ್ಟವಾಗುತ್ತಿದೆ. ಈಗಾಗಲೇ ಸಾರಿಗೆ ಇಲಾಖೆ ಸುಮಾರು 4 ಸಾವಿರ ಕೋಟಿ ನಷ್ಟದಲ್ಲಿದೆ. ನಷ್ಟಕ್ಕೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆ ಆರ್ಥಿಕ ಸಂಕಷ್ಟದಲ್ಲಿದ್ದರೂ ಸುಮಾರು 3 ಸಾವಿರ ಬಸ್‌ಗಳನ್ನು ಖರೀದಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದಿಂದ ಆರ್ಥಿಕ ಸಹಾಯ ನೀಡಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಬ್ಯಾಟರಿ ಚಾಲಿತ ಬಸ್‌ಗಳನ್ನು ಓಡಿಸಲು ಚಿಂತನೆ ನಡೆದಿದ್ದು, ವಿದೇಶದ ಕೆಲ ಕಂಪನಿಗಳು ಬ್ಯಾಟರಿ ಚಾಲಿತ ಬಸ್‌ಗಳನ್ನು ಪೂರೈಸಲು ಮುಂದೆ ಬಂದಿವೆ ಎಂದು ಹೇಳಿದರು.
 

PREV
click me!

Recommended Stories

ಪದೇಪದೆ 'ನಮ್ಮಪ್ಪನೇ ಸಿಎಂ..' ಯತೀಂದ್ರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ? ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!