ಮಕ್ಕಳಿಬ್ಬರಿಗೆ ನೇಣು ಹಾಕಿ ಬಳಿಕ ಒಂದೇ ಹಗ್ಗಕ್ಕೆ ಪತಿ-ಪತ್ನಿ ಆತ್ಮಹತ್ಯೆ|ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹೊಸೂರು ಗ್ರಾಮದಲ್ಲಿ ಹೃದಯವಿದ್ರಾವಕ ದುರ್ಘಟನೆ.
ಬೆಳಗಾವಿ, [ಅ.19]: ಇಬ್ಬರು ಪುಟ್ಟ ಮಕ್ಕಳಿಗೆ ನೇಣುಹಾಕಿ, ಪತ್ನಿ ಜತೆಗೆ ಪತಿ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ: ಒಂದೇ ಕುಣಿಕೆಗೆ ಕೊರಳೊಡ್ಡಿದ ಪತಿ- ಪತ್ನಿ
ಭೀಮಪ್ಪ ಸಿದ್ದಪ್ಪ ಚೂನಪ್ಪಗೋಳ, ಮಂಜುಳ ಚೂನಪ್ಪಗೋಳ, ಪ್ರದೀಪ (8) ಮೋಹನ(6) ಆತ್ಮಹತ್ಯೆಗೆ ಶರಣಾದವರು. ಮೊದಲು ಮಕ್ಕಳಿಬ್ಬರಿಗೆ ನೇಣು ಹಾಕಿ ಬಳಿಕ ಗಂಡ-ಹೆಂಡತಿ ಒಂದೇ ಹಗ್ಗಕ್ಕೆ ಕೊರಳೊಡ್ಡಿದ್ದಾರೆ.
ಶಿವಮೊಗ್ಗ : SBI ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು
ಈ ನಾಲ್ವರ ಏಕಾಏಕಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆಯ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.