ಕಾಂಗ್ರೆಸ್‌ಗೆ ಭಾರಿ ಆಘಾತ: ಬಿಜೆಪಿ ಸೇರಿದ 62 ‘ಕೈ’ ಮುಖಂಡರು

By Web DeskFirst Published Nov 3, 2019, 9:05 AM IST
Highlights

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಸಮ್ಮುಖದಲ್ಲಿ ಗೋಕಾಕ್‌ನ 62 ಮುಖಂಡರು ಬಿಜೆಪಿಗೆ| ಬಿಜೆಪಿಗೆ ಸೇರಿದ ಗೋಕಾಕ್‌ ನಗರಸಭೆ, ಕೊಣ್ಣೂರು ಪುರಸಭೆ ಹಾಗೂ ಮಲ್ಲಾಪುರ ಪಿ.ಜಿ ಪಟ್ಟಣ ಪಂಚಾಯಿಯ ಕಾಂಗ್ರೆಸ್‌ ಬೆಂಬಲಿತ ಸದಸ್ಯರು| ಗೋಕಾಕ್‌ ನಗರಸಭೆಯ 22 ಸದಸ್ಯರು, ಕೊಣ್ಣೂರ ಪುರಸಭೆಯ 23 ಹಾಗೂ ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯಿತಿಯ 17 ಸದಸ್ಯರು ಸೇರಿದಂತೆ ಒಟ್ಟು 62 ಜನ ಸದಸ್ಯರು ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ|

ಬೆಳಗಾವಿ[ನ.3]: ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಗೋಕಾಕ್‌ ಕ್ಷೇತ್ರದ ತಾಲೂಕು ಪಂಚಾಯಿತಿಯ 23 ಸದಸ್ಯರು ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಬೆನ್ನಲ್ಲಿಯೇ ಶನಿವಾರ ಮತ್ತೆ ಗೋಕಾಕ್‌ ನಗರಸಭೆ, ಕೊಣ್ಣೂರು ಪುರಸಭೆ ಹಾಗೂ ಮಲ್ಲಾಪುರ ಪಿ.ಜಿ ಪಟ್ಟಣ ಪಂಚಾಯಿಯ ಕಾಂಗ್ರೆಸ್‌ ಬೆಂಬಲಿತ ಸದಸ್ಯರು ನಗರದಲ್ಲಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕಚೇರಿಯಲ್ಲಿ ಬಿಜೆಪಿಗೆ  ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ಗೂ ತಟ್ಟಿದ ಸಾಮೂಹಿಕ ರಾಜೀನಾಮೆ

ಗೋಕಾಕ್‌ ನಗರಸಭೆಯ 22 ಸದಸ್ಯರು, ಕೊಣ್ಣೂರ ಪುರಸಭೆಯ 23 ಹಾಗೂ ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯಿತಿಯ 17 ಸದಸ್ಯರು ಸೇರಿದಂತೆ ಒಟ್ಟು 62 ಜನ ಸದಸ್ಯರು ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರ್ಪಡೆಯಾಗಿ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದಾರೆ. ಈ ಮೂಲಕ ಗೋಕಾಕ್‌ ಕ್ಷೇತ್ರದ ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಬೆಂಬಲಿಗರು ಬಿಜೆಪಿಯತ್ತ ಮುಖ ಮಾಡಿರುವುದರಿಂದ ಶಾಸಕ ಸತೀಶ್‌ ಜಾರಕಿಹೊಳಿ ಮತ್ತು ಕಾಂಗ್ರೆಸ್‌ಗೆ ಮತ್ತಷ್ಟು ಶಾಕ್‌ ನೀಡಿದ್ದಾರೆ.

23 ಕಾಂಗ್ರೆಸಿಗರ ರಾಜೀನಾಮೆ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹೊಸ ಬಾಂಬ್

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!