ವಿಜಯ್ ಬ್ಯಾಂಕಿನಲ್ಲಿ ನೇಮಕಾತಿ, SSLC ತೇರ್ಗೆಡೆಯಾದವರಿಗೂ ಚಾನ್ಸ್

By Web Desk  |  First Published Mar 10, 2019, 5:10 PM IST

ವಿಜಯ ಬ್ಯಾಂಕಿನಲ್ಲಿ 10ನೇ ತರಗತಿ ಪಾಸಾದವರಿಗೆ ಹುದ್ದೆಗಳಿವೆ |  ಒಟ್ಟು 432ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ| ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲುಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ.


ಬೆಂಗಳೂರು, [ಮಾ.10]: ವಿಜಯ ಬ್ಯಾಂಕ್ ನಲ್ಲಿ ಖಾಲಿ ಇರುವ 310 ಜವಾನ ಮತ್ತು 122 ಪಾರ್ಟ್ ಟೈಂ ಸ್ವೀಪರ್ ಹುದ್ದೆಗಳು ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 432ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಮಾರ್ಚ್ 14,2019ರೊಳಗೆ ಸಲ್ಲಿಸಬಹುದು. 

Tap to resize

Latest Videos

undefined

ವಿದ್ಯಾರ್ಹತೆ: ಜವಾನ ಮತ್ತು ಪಾರ್ಟ್ ಟೈಂ ಸ್ವೀಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ / ಬೋರ್ಡ್ ನಿಂದ ಉತ್ತೀರ್ಣರಾಗಿರಬೇಕು. 

ಎಫ್‌ಡಿಎ, ಎಸ್‌ಡಿಎ ಹುದ್ದೆಗೆ ಅರ್ಜಿ ವಿಸ್ತರಣೆ

ವಯೋಮಿತಿ: ಈ ಹುದ್ದೆಗಳಿಗೆ ಮಾರ್ಚ್ 1,2019ಕ್ಕೆ ಅನ್ವಯವಾಗುಂತೆ ಕನಿಷ್ಠ 18 ರಿಂದ ಗರಿಷ್ಠ 26 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. 

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಎಂಆರ್‌ಸಿಎಲ್

ಅರ್ಜಿ ಶುಲ್ಕ: ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು 50 ರೂ. ಮತ್ತು ಇತರೆ ಅಭ್ಯರ್ಥಿಗಳೂ 150 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

click me!