SBI Recruitment 2023: ಒಟ್ಟು 1438 ಕಲೆಕ್ಷನ್ ಫೆಸಿಲಿಟೇಟರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ಭಾರತೀಯ ಸ್ಟೇಟ್ ಬ್ಯಾಂಕ್

By Gowthami KFirst Published Dec 23, 2022, 2:41 PM IST
Highlights

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಂದದ ಆಧಾರದ ಮೇಲೆ ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.  ಒಟ್ಟು 1438 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಜನವರಿ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಬೆಂಗಳೂರು (ಡಿ.23): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಂದದ ಆಧಾರದ ಮೇಲೆ ಕಲೆಕ್ಷನ್ ಫೆಸಿಲಿಟೇಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ.  ಸಂಸ್ಥೆಯಲ್ಲಿ ಒಟ್ಟು 1438 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.  ಆಯ್ಕೆಯಾದ ನಿವೃತ್ತ ಅಧಿಕಾರಿಗಳು/ಸಿಬ್ಬಂದಿಯನ್ನು CPC/ಪ್ರಾದೇಶಿಕ ಕಚೇರಿ/ AO (ಆಡಳಿತಾತ್ಮಕ ಕಚೇರಿ)/ ATC (ಆಸ್ತಿಗಳ ಟ್ರ್ಯಾಕಿಂಗ್ ಕೇಂದ್ರ) ಅಥವಾ LHO ನಿರ್ಧರಿಸಿದಂತೆ ಯಾವುದೇ ಇತರ ಕಚೇರಿ ಸ್ಥಳಗಳು/ಸಂಸ್ಥೆಗಳಲ್ಲಿ ನಿಯೋಜಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ಜನವರಿ 10, 2023 ರವರೆಗೆ ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಒಟ್ಟು 1438 ಹುದ್ದೆಗಳ ವಿವರ:
ಕಲೆಕ್ಷನ್ ಫೆಸಿಲಿಟೇಟರ್ (JMGS-I):291 ಹುದ್ದೆಗಳು
ಕಲೆಕ್ಷನ್ ಫೆಸಿಲಿಟೇಟರ್ (MMGS-II):507 ಹುದ್ದೆಗಳು
ಕಲೆಕ್ಷನ್ ಫೆಸಿಲಿಟೇಟರ್ (MMGS-III):142 ಹುದ್ದೆಗಳು
ಕಲೆಕ್ಷನ್ ಫೆಸಿಲಿಟೇಟರ್ (ಕ್ಲೇರಿಕಲ್ ಸ್ಟಾಫ್): 498 ಹುದ್ದೆಗಳು

ಒಟ್ಟು 1438 ಹುದ್ದೆಗಳ ವರ್ಗಾನುಸಾರ ಹಂಚಿಕೆ ಹೀಗಿದೆ
ಸಾಮಾನ್ಯ: 680 ಹುದ್ದೆಗಳು
EWS: 125 ಹುದ್ದೆಗಳು
OBC: 314 ಹುದ್ದೆಗಳು
SC: 198 ಹುದ್ದೆಗಳು
ST: 121 ಹುದ್ದೆಗಳು

ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು: ಎಸ್‌ಬಿಐ ಅಥವಾ ಬ್ಯಾಂಕ್‌ನ ಇತರ ಸಹವರ್ತಿಗಳ ನಿವೃತ್ತ ಅಧಿಕಾರಿ ಅಥವಾ ಸಿಬ್ಬಂದಿ ಮತ್ತು ಡಿಸೆಂಬರ್ 2022 ರಂದು 63 ವರ್ಷಕ್ಕಿಂತ ಮೇಲ್ಪಟ್ಟಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸೇವೆಯ ಶುದ್ಧ ದಾಖಲೆಯನ್ನು ಹೊಂದಿರಬೇಕು ಮತ್ತು ಅವರಿಗೆ ನಿಯೋಜಿಸಲಾದ ಪಾತ್ರದಲ್ಲಿ ಅವರು ಜ್ಞಾನ ಮತ್ತು ಪರಿಣತಿಯನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಗುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  ಶಾರ್ಟ್ ಲಿಸ್ಟ್ ಮಾಡಿ ಬಳಿಕ  ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ: ವೇತನವನ್ನು ಮಾಸಿಕ ಮಧ್ಯಂತರದಲ್ಲಿ ಪಾವತಿಸಲಾಗುವುದು. ವಸೂಲಾತಿ ಫೆಸಿಲಿಟೇಟರ್‌ಗಳಿಗೆ ಮಾಸಿಕ ವೇತನವು ಕೆಳಕಂಡಂತಿದೆ:
ಕ್ಲೆರಿಕಲ್- 25000 ರೂ
JMGS-I- ರೂ. 35000
MMGS-II ಮತ್ತು MMGS-III- ರೂ. 40000

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 10 ಕ್ಕೂ ಮುನ್ನ sbi.co.in/web/careers ನಲ್ಲಿ ಅಧಿಕೃತ ವೆಬ್‌ಸೈಟ್‌ಗಳ ವೃತ್ತಿ ಪುಟವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 39 ಹುದ್ದೆಗಳಿಗೆ ನೇಮಕಾತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, ಎಸ್‌ಬಿಐ ಡೆಪ್ಯುಟಿ ಮ್ಯಾನೇಜರ್ (ಡೇಟಾಬೇಸ್ ಅಡ್ಮಿನಿಸ್ಟ್ರೇಟರ್), ಸೀನಿಯರ್ ಎಕ್ಸಿಕ್ಯೂಟಿವ್ (ತಾಂತ್ರಿಕ ಬೆಂಬಲ) ಇತ್ಯಾದಿಗಳನಗನೊಳಗೊಂಡ  36 ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಅಧಿಕೃತ ವೆಬ್‌ಸೈಟ್  sbi.co.in ನಲ್ಲಿ  ಹೆಚ್ಚಿನ ಮಾಹಿತಿ ದೊರೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನವಾಗಿದೆ.

ISRO Recruitment 2023: ವಿವಿಧ 526 ಹುದ್ದೆಗಳಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ

ಶೈಕ್ಷಣಿಕ ವಿದ್ಯಾಭ್ಯಾಸ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ  BE/ BTech (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ ಮಾಹಿತಿ ತಂತ್ರಜ್ಞಾನ/ ಸಾಫ್ಟ್‌ವೇರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ಅದಿರು ಸಂಬಂಧಿತ ವಿಭಾಗದಲ್ಲಿ ಸಮಾನ ಪದವಿ) ಅಥವಾ MCA ಅಥವಾ MTech/ MSc ನಲ್ಲಿ (ಕಂಪ್ಯೂಟರ್ ಸೈನ್ಸ್/ ಮಾಹಿತಿ ತಂತ್ರಜ್ಞಾನ/ ಎಲೆಕ್ಟ್ರಾನಿಕ್ & ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್) ಮಾಡಿರಬೇಕು.

SAI RECRUITMENT 2023: ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯೋಮಿತಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನಿಯಮಾನುಸಾರ ವಯೋಮಿತಿ ಹೊಂದಿರಬೇಕು. ಹಿರಿಯ ಕಾರ್ಯನಿರ್ವಾಹಕ (ತಾಂತ್ರಿಕ ಬೆಂಬಲ) ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 21 ರಿಂದ 35 ವರ್ಷದ ಒಳಗಿರಬೇಕು. ಮಿಕ್ಕುಳಿದ ಹುದ್ದೆಗಳಿಗೆ 21 ರಿಂದ 32 ವರ್ಷದ ಒಳಗಿರಬೇಕು.

click me!