Karnataka Apex Bank recruitment 2022: ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ನೇಮಕಾತಿ

By Suvarna News  |  First Published Mar 16, 2022, 5:59 PM IST

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ  ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.  ಒಟ್ಟು 79 ಬ್ಯಾಂಕ್ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು  ಏಪ್ರಿಲ್ 16 ಕೊನೆಯ ದಿನವಾಗಿದೆ. 


ಬೆಂಗಳೂರು(ಮಾ.16): ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ  (Karnataka State Cooperative Apex Bank ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 79 ಬ್ಯಾಂಕ್ ಸಹಾಯಕ ( Bank Assistant) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 16 ಕೊನೆಯ ದಿನವಾಗಿದೆ. 

ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ಅಪೆಕ್ಸ್  ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಪದವಿ, ಸ್ನಾತಕೋತ್ತರ ಪದವಿ ಮಾಡಿರಬೇಕು.

Tap to resize

Latest Videos

undefined

ವಯೋಮಿತಿ: ಕರ್ನಾಟಕ ಅಪೆಕ್ಸ್  ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 35 ವರ್ಷದ ಒಳಗಿರಬೇಕು. ಸರಕಾರದ ನಿಯಮಗಳ ಅನುಸಾರ 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, SC, ST  ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

NBCC RECRUITMENT 2022: ವಿವಿಧ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಎನ್‌ಬಿಸಿಸಿ ನೇಮಕಾತಿ

ಅರ್ಜಿ ಶುಲ್ಕ:  ಕರ್ನಾಟಕ ಅಪೆಕ್ಸ್  ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ 2A, 2B, 3A, 3B ಮತ್ತು ಸಾಮಾನ್ಯ  ಅಭ್ಯರ್ಥಿಗಳು  ₹1000 ಮತ್ತು SC/ST ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ : ಕರ್ನಾಟಕ ಅಪೆಕ್ಸ್  ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಕರ್ನಾಟಕ ಅಪೆಕ್ಸ್  ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹28,425 ನಿಂದ ₹87,125ರವರೆಗೆ ವೇತನ ದೊರೆಯಲಿದೆ.

NTPC Recruitment 2022: ವಿವಿಧ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಎನ್‌ಟಿಪಿಸಿ ನೇಮಕಾತಿ 

 ಕಚೇರಿ ಸಹಾಯಕ ಹುದ್ದೆಗೆ ಸಿಬಿಐ ನೇಮಕಾತಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.   ಕಚೇರಿ ಸಹಾಯಕ (Office Assistant) ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದ್ದು,   ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್‌ಲೈನ್ (Online)​ ಮೂಲಕ ಅರ್ಜಿ  ಸಲ್ಲಿಸಲು ಮಾರ್ಚ್​ 21  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅಧಿಕೃತ ವೆಬ್​ಸೈಟ್​ www.centralbankofindia.co.in ಗೆ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ  B.A,B.Com,BSW ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 35 ವರ್ಷದ ಒಳಗಿರಬೇಕು.

ಅರ್ಜಿ ಶುಲ್ಕ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪ್ರಿಲಿಮ್ಸ್ ಪರೀಕ್ಷೆ, ಪ್ರಮುಖ ಪರೀಕ್ಷೆ, ಸಂದರ್ಶನದ ಮೂಲಕ ಹಂತಹಂತವಾಗಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:
Regional Manager/Co-Chairman,
Dist. Level RSETI Advisory Committee (DLRAC),
Central Bank of India,
Regional Office: Muzaffarpur  Pawapuri Bihar, Bhagwanpur Chowk, Near NH-28
Muzaffarpur-842001


 

click me!