Recruitment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 115 ಸ್ಪೆಷಲಿಸ್ಟ್ ಅಧಿಕಾರಿಗಳ ನೇಮಕಾತಿ ಶುರು

By Suvarna News  |  First Published Nov 22, 2021, 4:00 PM IST

ಕೊರೊನಾ ಆರ್ಭಟ ತಗ್ಗುತ್ತಿದ್ದಂತೆ ಎಲ್ಲ ವಲಯಗಳು ಮತ್ತೆ ಆ್ಯಕ್ಟೀವ್ ಆಗ್ತಿವೆ. ಇತ್ತೀಚೆಗೆ ಒಂದಾದ ಮೇಲೊಂದರಂತೆ ಬ್ಯಾಂಕುಗಳು ನೇಮಕಾತಿ ಪ್ರಕ್ರಿಯೆ ಶುರು ಮಾಡಿವೆ. ಮೊನ್ನೆಯಷ್ಟೇ ಬ್ಯಾಂಕ್ ಆಫ್ ಬರೋಡಾ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರಿ ಸ್ವಾಮ್ಯದ ಮತ್ತೊಂದು ಪ್ರತಿಷ್ಟಿತ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India), ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಿದೆ. 


ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) ದಲ್ಲಿ ಒಟ್ಟು 115 ಸ್ಪೆಷಲಿಸ್ಟ್ ಆಫೀಸರ್ (Specialist Officer) ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ ಬಿ ಟೆಕ್, ಎಲ್ಎಲ್ಬಿ, ಸಿಎ, ICWA, ಎಂಎಸ್ಸಿ, ಎಂಬಿಎ, ಎಂ.ಟೆಕ್, ಎಂಇ, ಎಂಸಿಎ, ಪಿಎಚ್ಡಿ ಪೂರ್ಣಗೊಳಿಸಿರಬೇಕು.   ಈಗಾಗಲೇ ನೋಟಿಫಿಕೇಷನ್ ಹೊರಡಿಸಲಾಗಿದ್ದು ನವೆಂಬರ್ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಡಿಸೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸೆಂಟ್ರಕ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್(Official Website) www.centralbankofindia.co.in ಗೆ ಭೇಟಿ ನೀಡಿ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತು ಪರಿಶೀಲಿಸಬಹುದು. ಎಕನಾಮಿಸ್ಟ್(Economist) ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಪಿಎಚ್ಡಿ ಮಾಡಿರಬೇಕು. ಜೊತೆಗೆ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು. ಆದಾಯ ತೆರಿಗೆ ಅಧಿಕಾರಿ (Incom tax Officer) ಹುದ್ದೆಗೆ ಅಭ್ಯರ್ಥಿಯು ಸಿಎ ಮಾಡಿರಬೇಕು. ಜೊತೆಗೆ ಕನಿಷ್ಠ 10 ವರ್ಷಗಳ ಅನುಭವ ಇರಬೇಕು.

ಮಾಹಿತಿ ತಂತ್ರಜ್ಞಾನ ಹುದ್ದೆಗೆ ಸ್ನಾತಕೋತ್ತರ ಪದವಿ/ ಪದವಿ ಪೂರ್ಣಗೊಳಿಸಿರಬೇಕು. ಕನಿಷ್ಠ 10-12 ವರ್ಷ ಅನುಭವ ಇರಬೇಕು. ಡಾಟಾ ಸೈಂಟಿಸ್ಟ್(Data Scientist) ಹುದ್ದೆಗೆ ಬಿಇ/ ಬಿ ಟೆಕ್ ಪೂರ್ಣಗೊಳಿಸಿರಬೇಕು. ಜೊತೆಗೆ 8-10 ವರ್ಷ ಅನುಭವ ಇರಬೇಕು. ಕ್ರೆಡಿಟ್ ಆಫೀಸರ್(Credit Officer) ಹುದ್ದೆಗೆ CS/ CFA/ ACMA ಅಥವಾ ಎಂಬಿಎ ಮಾಡಿರಬೇಕು. ಕನಿಷ್ಠ 4 ವರ್ಷ ಅನುಭವ ಇರಬೇಕು.  ಡಾಟಾ ಎಂಜಿನಿಯರ್ (Data Enginieer) ಹುದ್ದಗೆ ಬಿಇ/ ಬಿ.ಟೆಕ್ ಮಾಡಿರಬೇಕು. ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು.

Tap to resize

Latest Videos

undefined

ಐಟಿ ಸೆಕ್ಯುರಿಟಿ ಅನಾಲಿಸ್ಟ್(IT Security Analyst)ಹುದ್ದೆಗೆ ಎಂಸಿಎ/ಎಂಸ್ಸಿ ಪೂರ್ಣಗೊಳಿಸಿರಬೇಕು. ಕನಿಷ್ಠ 6 ವರ್ಷ ಅನುಭವ ಇರಬೇಕು. ಐಟಿ SOC ಅನಾಲಿಸ್ಟ್ ಹುದ್ದೆಗೆ ಎಂಸಿಎ/ಎಂಸ್ಸಿ ಪೂರ್ಣಗೊಳಿಸಿರಬೇಕು. ಕನಿಷ್ಠ 6 ವರ್ಷ ಅನುಭವ ಇರಬೇಕು. ರಿಸ್ಕ್ ಮ್ಯಾನೇಜರ್(Risk Manager) ಹುದ್ದಗೆ ಎಂಬಿಎ/ ಎಂಜಿನಿಯರಿಂಗ್ ಮಾಡಿರಬೇಕು. ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ಟೆಕ್ನಿಕಲ್ ಆಫೀಸರ್ (Technical Officer) ಹುದ್ದೆಗೆ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ಫೈನಾನ್ಷಿಯಲ್ ಅನಾಲಿಸ್ಟ್(Financial Analyst)ಹುದ್ದೆಗೆ ಎಂಬಿಎ ಪೂರ್ಣಗೊಳಿಸಿರಬೇಕು. 3 ವರ್ಷಗಳ ಅನುಭವ ಇರಬೇಕು. ಮಾಹಿತಿ ತಂತ್ರಜ್ಞಾನ- ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು, 2 ವರ್ಷಗಳ ಅನುಭವ ಇರಬೇಕು. ಕಾನೂನು ಅಧಿಕಾರಿ ಹುದ್ದೆಗೆ ಕಾನೂನು ಪದವಿ ಪಡೆದಿರಬೇಕು, ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು. ರಿಸ್ಕ್ ಮ್ಯಾನೇಜರ್- ಎಂಬಿಎ/ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಕನಿಷ್ಠ 2 ವರ್ಷಗಳ ಅನುಭವ ಇರಬೇಕು. ಸೆಕ್ಯುರಿಟಿ ಹುದ್ದೆ ಯಾವುದೇ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. 
 
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 20-50 ವರ್ಷದೊಳಗಿರಬೇಕು. SC/ST ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಉಳಿದ ಅಭ್ಯರ್ಥಿಗಳು 850 ರೂ. ಅರ್ಜಿ ಶುಲ್ಕ ಕಟ್ಟಬೇಕು.

Bank Jobs: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಐಟಿ ಸ್ಪೇಷಲಿಸ್ಟ್ ಹುದ್ದೆಗೆ ನೇಮಕಾತಿ
 
ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಇರುತ್ತದೆ.  60 ನಿಮಿಷಗಳ ಕಾಲ ಲಿಖಿತ ಪರೀಕ್ಷೆಯನ್ನು ನಡೆಲಿದ್ದು, ಗರಿಷ್ಠ 100 ಅಂಕಗಳು ಇರುತ್ತದೆ. ಪ್ರಸ್ತುತ ಬ್ಯಾಂಕಿಂಗ್ ಸನ್ನಿವೇಶದ ಆಧಾರದ ಮೇಲೆ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆನ್ಲೈನ್ ಲಿಖಿತ ಪರೀಕ್ಷೆ ಬಳಿಕ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸಲಾಗುವುದು. ಬಳಿಕ ವೈಯಕ್ತಿಕ ಸಂದರ್ಶನಕ್ಕೆ ಕರೆದು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು.

UPSC Recruitment: ಪ್ರೊಫೆಸರ್, ಜಂಟಿ ಸಹಾಯಕ ನಿರ್ದೇಶಕ ಸೇರಿ ಹಲವು ಹುದ್ದೆಗೆ ಅರ್ಜಿ ಆಹ್ವಾನ

click me!