Bank of Maharashtra Recruitment 2022: ಖಾಲಿ ಇರುವ 500 ಹುದ್ದೆಗಳಿಗೆ ಅರ್ಜಿ ಆಹ್ವಾನ

By Contributor Asianet  |  First Published Feb 7, 2022, 4:29 PM IST

ಬ್ಯಾಂಕ್ ಆಫ್ ಮಹಾರಾಷ್ಟ್ರ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 22 ಅರ್ಜಿ ಸಲ್ಲಿಸಲು ಕೊನೆಯ ದಿನ.


ಬೆಂಗಳೂರು(ಜ.7): ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra - BOM) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು  500 ಜನರಲಿಸ್ಟ್ ಅಧಿಕಾರಿ (Generalist Officer) ಸ್ಕೇಲ್ II, III ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ  ಮತ್ತು ಅರ್ಹ ಅಭ್ಯರ್ಥಿ ಫೆಬ್ರವರಿ 22ರೊಳಗೆ ಅರ್ಜಿ ಸಲ್ಲಿಸಬಹುದು . ವರ್ಗಾನುಸಾರ ಹುದ್ದೆಯನ್ನು ವರ್ಗೀಕರಣ ಮಾಡಲಾಗಿದ್ದು, ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ bankofmaharashtra.in ಗೆ ಭೇಟಿ ನಿಡಲು ಕೊರಲಾಗಿದೆ. 

ಒಟ್ಟು 500 ಹುದ್ದೆಗಳ ವರ್ಗಾವಾರು ವಿಂಗಡಣೆ ಮಾಹಿತಿ:
 ಜನರಲಿಸ್ಟ್ ಅಧಿಕಾರಿ ಸ್ಕೇಲ್ II ವಿಭಾಗಕ್ಕೆ 400 ಹುದ್ದೆಗಳನ್ನು ಮೀಸಲಿಡಲಾಗಿದೆ.
SC: 60   
ST: 30   
OBC: 108             
EWS: 40               
UR: 162

Tap to resize

Latest Videos

undefined

 ಜನರಲಿಸ್ಟ್ ಅಧಿಕಾರಿ ಸ್ಕೇಲ್ III ವಿಭಾಗಕ್ಕೆ 100 ಹುದ್ದೆಗಳನ್ನು ಮೀಸಲಿಡಲಾಗಿದೆ.
SC: 15   
ST: 07   
OBC: 27
EWS: 10               
UR: 41 

JNU VC Santishree Dhulipudi Pandit: ಜೆಎನ್‌ಯು ಮೊಟ್ಟ ಮೊದಲ ಮಹಿಳಾ ಉಪ ಕುಲಪತಿಯಾಗಿ

ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ಪದವಿ ವಿದ್ಯಾರ್ಹತೆಯನ್ನು ಶೇ.60ರಷ್ಟು ಅಂಕಗಳೊಂದಿಗೆ ಹೊಂದಿರುವ ಅಥವಾ ಸಿಎ/ಸಿಎಂಎ/ಸಿಎಫ್‌ಎ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 31,2022ರ ಅನ್ವಯ ಕನಿಷ್ಟ 25 ರಿಂದ ಸ್ಕೇಲ್ II ಹುದ್ದೆಗಳಿಗೆ ಗರಿಷ್ಟ 35 ವರ್ಷ ಮತ್ತು ಸ್ಕೇಲ್ III ಹುದ್ದೆಗಳಿಗೆ ಗರಿಷ್ಟ 38 ವರ್ಷ ವಯೋಮಿತಿಯೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ  ಸ್ಕೇಲ್ II ಮತ್ತು ಸ್ಕೇಲ್   III ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯು ಮಾರ್ಚ್ 12,2022ರಂದು ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಯ್ಕೆಯಾದವರು ಭಾರತದೆಲ್ಲಡೆ ಕೆಲಸ ಮಾಡಲು ತಯಾರಿರಬೇಕು.

ವೇತನ: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಜನರಲಿಸ್ಟ್ ಅಧಿಕಾರಿ ಸ್ಕೇಲ್ II ಹುದ್ದೆಗಳಿಗೆ  48,170/- ರಿಂದ 69,810/-ರೂ ಮತ್ತು ಜನರಲಿಸ್ಟ್ ಅಧಿಕಾರಿ ಸ್ಕೇಲ್ III ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 63,840/- ರಿಂದ 78,230/-ರೂಗಳ ವರೆಗೆ ವೇತನ ನಿಗದಿಯಾಗಿದೆ.

UPSC Indian Forest Service Recruitment 2022: ಐಎಎಸ್‌, ಐಪಿಎಸ್‌, ಐಎಫ್‌ಎಸ್ ಹುದ್ದೆ

ಅರ್ಜಿ ಶುಲ್ಕ: ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ನೇಮಕಾತಿಯ ಜನರಲಿಸ್ಟ್ ಅಧಿಕಾರಿ ಸ್ಕೇಲ್ II ಮತ್ತು ಸ್ಕೇಲ್   III ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/ಆರ್ಥಿಕವಾಗಿ ಹಿಂದುಳಿದ/ಓಬಿಸಿ ಅಭ್ಯರ್ಥಿಗಳು 1,180/-ರೂ ಮತ್ತು ಪರಿಶಿಷ್ಟ ಪಂಗಡ/ಪರಿಶಿಷ್ಟ ಜಾತಿ ಅಭ್ಯರ್ಥಿಗಳು 118/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಕೆ: ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ನೇಮಕಾತಿಯ ಜನರಲಿಸ್ಟ್ ಅಧಿಕಾರಿ ಸ್ಕೇಲ್ II ಮತ್ತು ಸ್ಕೇಲ್   III ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ  ಅಭ್ಯರ್ಥಿಗಳು https://bankofmaharashtra.in ಭೇಟಿ ನೀಡಿ. ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಫೆಬ್ರವರಿ 22,2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

click me!