Bank of Baroda Recruitment 2022: ತಜ್ಞ ಅಧಿಕಾರಿ ಹುದ್ದೆಗೆ ಬ್ಯಾಂಕ್ ಆಫ್ ಬರೋಡಾ ನೇಮಕಾತಿ

By Suvarna News  |  First Published Mar 5, 2022, 3:13 PM IST

ಬ್ಯಾಂಕ್ ಆಫ್  ಬರೋಡಾ ಖಾಲಿ ಇರುವ  ತಜ್ಞ ಅಧಿಕಾರಿಗಳು ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ.   ಅಭ್ಯರ್ಥಿಗಳು ಆನ್​ಲೈನ್  ಮೂಲಕ ಅರ್ಜಿ  ಸಲ್ಲಿಸಲು ಮಾರ್ಚ್​ 24  ಕೊನೆಯ ದಿನಾಂಕವಾಗಿದೆ. 


ಬೆಂಗಳೂರು(ಫೆ.11): ಬ್ಯಾಂಕ್ ಆಫ್  ಬರೋಡಾ (Bank of Baroda) ಖಾಲಿ ಇರುವ  ತಜ್ಞ ಅಧಿಕಾರಿಗಳು (Specialist Officers) ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ.   ಒಟ್ಟು 105 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ  ಸಲ್ಲಿಸಲು ಮಾರ್ಚ್​ 24  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅಧಿಕೃತ ವೆಬ್​ಸೈಟ್​ https://www.bankofbaroda.in/ ಗೆ ಭೇಟಿ ನೀಡಬಹುದು.

ಒಟ್ಟು 105 ಹುದ್ದೆಗಳ ಮಾಹಿತಿ ಇಂತಿದೆ
ನಿರ್ವಾಹಕ – ಡಿಜಿಟಲ್ ವಂಚನೆ: 15 ಹುದ್ದೆಗಳು
ಕ್ರೆಡಿಟ್ ಅಧಿಕಾರಿ (MSME ಇಲಾಖೆ): 15+25 ಹುದ್ದೆಗಳು
ಕ್ರೆಡಿಟ್ - ರಫ್ತು / ಆಮದು ವ್ಯವಹಾರ (MSME ಇಲಾಖೆ): 8+12 ಹುದ್ದೆಗಳು
ವಿದೇಶೀ ವಿನಿಮಯ - ಸ್ವಾಧೀನ ಮತ್ತು ಸಂಬಂಧ ನಿರ್ವಾಹಕ: 15 ಹುದ್ದೆಗಳು
ಕಾರ್ಪೊರೇಟ್ ಕ್ರೆಡಿಟ್ ಇಲಾಖೆ: 15 ಹುದ್ದೆಗಳು

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ತಜ್ಞ ಅಧಿಕಾರಿಗಳು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ B.E/B.Tech, IT, BSC, BCA, MCA, CA, CMA, ಪದವಿ ಪಡೆದಿರಬೇಕು.

UAS Dharwad Recruitment 2022: ತಾಂತ್ರಿಕ ಅಧಿಕಾರಿ ಹುದ್ದೆಗೆ ನೇಮಕಾತಿ ಅಧಿಸೂಚನೆ

ಅರ್ಜಿ ಶುಲ್ಕ: ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ತಜ್ಞ ಅಧಿಕಾರಿಗಳು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ SC/ST/PWD ಅಭ್ಯರ್ಥಿಗಳು 100 ರೂ. ಮತ್ತು ಸಾಮಾನ್ಯ ವರ್ಗ/EWS/OBC  ಅಭ್ಯರ್ಥಿಗಳು 600 ರೂ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಬ್ಯಾಂಕ್ ಆಫ್  ಬರೋಡಾದಲ್ಲಿ ಖಾಲಿ ಇರುವ ತಜ್ಞ ಅಧಿಕಾರಿಗಳು ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ  ಮತ್ತು ಕೆಲ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ: ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ತಜ್ಞ ಅಧಿಕಾರಿಗಳು ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ  ಮಾಸಿಕ 48,170 ರೂ ನಿಂದ 89,890 ರೂ ವೇತನ ದೊರೆಯಲಿದೆ.

Yadagiri Anganwadi Recruitment 2022: ಯಾದಗಿರಿ ಜಿಲ್ಲೆಯ ಅಂಗನವಾಡಿ ಹುದ್ದೆಗಳ ನೇಮಕಾತಿ 

ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ನಿಂದ ಉದ್ಯೋಗ ನೇಮಕಾತಿ: ಭಾರತದ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ (Small Industries Development Bank of India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ. ಒಟ್ಟು 100 ಸಹಾಯಕ ವ್ಯವಸ್ಥಾಪಕ (Assistant Manager) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ  ಸಲ್ಲಿಕೆ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್​​ 24 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು ಬ್ಯಾಂಕ್ ನ ಅಧಿಕೃತ ವೆಬ್‌ತಾಣ www.sidbi.in ಗೆ ಭೇಟಿ ನೀಡಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಭಾರತದ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ನಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕ  ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ  ಕಾನೂನು , ಇಂಜಿನಿಯರಿಂಗ್, ವಾಣಿಜ್ಯ, ಅರ್ಥಶಾಸ್ತ್ರದಲ್ಲಿ ಪದವಿ/ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಪಡೆದಿರಬೇಕು. ಮಾತ್ರವಲ್ಲ ಶೇ.60ರಷ್ಟು ಅಂಕಗಳನ್ನು ಪಡೆದಿರಬೇಕು. SC/ST ಅಭ್ಯರ್ಥಿಗಳು ಶೇ.55 ಅಂಕಗಳನ್ನು ಪಡೆದಿರಬೇಕು.

click me!