ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನಾಂಕವಾಗಿದೆ.
ಬೆಂಗಳೂರು (ಜೂ.1): ಬ್ಯಾಂಕ್ ಆಫ್ ಬರೋಡಾ (Bank of Baroda) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 2 ಹುದ್ದೆಗಳು ಖಾಲಿ ಇದ್ದು, ಮುಖ್ಯ ಕಲಿಕಾ ಅಧಿಕಾರಿ (Chief Learning Officer) ಮತ್ತು ಉಪ ಮುಖ್ಯ ತಂತ್ರಜ್ಞಾನ ಅಧಿಕಾರಿ (Deputy Chief Technology Officer) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅಧಿಕೃತ ವೆಬ್ಸೈಟ್ https://www.bankofbaroda.in/ ಗೆ ಭೇಟಿ ನೀಡಬಹುದು.
ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್ ಬರೋಡಾದ ಖಾಲಿ ಇರುವ ಚೀಫ್ ಲರ್ನಿಂಗ್ ಆಫೀಸರ್ ಮತ್ತು ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
ಚೀಫ್ ಲರ್ನಿಂಗ್ ಆಫೀಸರ್ : ಈ ಹುದ್ದೆಗೆ ಮಾನವ ಸಂಪನ್ಮೂಲ (HR) ಅಥವಾ ವರ್ತನೆಯ ವಿಜ್ಞಾನದಲ್ಲಿ ಪದವಿ/ಸ್ನಾತಕೋತ್ತರ ಪದವಿ. , ಇತರ ತಾಂತ್ರಿಕವಾಗಿ ಅರ್ಹ ವೃತ್ತಿಪರರು, ನಿರ್ವಹಣೆ ಮತ್ತು ತರಬೇತಿ/ಕಲಿಕೆ ಪರಿಕರಗಳಲ್ಲಿ ಕೋರ್ಸ್‌ಗಳು/ಪ್ರಮಾಣ ಪತ್ರ ಇದ್ದರೂ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್‌ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಪೊರೇಟ್ ಜಗತ್ತಿನಲ್ಲಿ ಕನಿಷ್ಠ 20 ವರ್ಷಗಳ ಅನುಭವ ಹೊಂದಿರಬೇಕು.
ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ : ಈ ಹುದ್ದೆಗೆ ಕಂಪ್ಯೂಟರ್ ಸೈನ್ಸ್/ಮಾಹಿತಿ ವ್ಯವಸ್ಥೆಗಳು/ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಇಂಜಿನಿಯರಿಂಗ್ ಪದವೀಧರರು ಅಥವಾ MCA , ತತ್ಸಮಾನ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್‌ನಲ್ಲಿ ಕನಿಷ್ಠ 15 ವರ್ಷಗಳ ಅನುಭವ ಹೊಂದಿರಬೇಕು.
undefined
UPSC SHIVANGI GOYAL; ಅತ್ತೆಯ ಕಿರುಕುಳವೇ UPSC ಟಾಪರ್ ಆಗಲು ಸ್ಪೂರ್ತಿ
ಅರ್ಜಿ ಶುಲ್ಕ: ಬ್ಯಾಂಕ್ ಆಫ್ ಬರೋಡಾದ ಖಾಲಿ ಇರುವ ಚೀಫ್ ಲರ್ನಿಂಗ್ ಆಫೀಸರ್ ಮತ್ತು ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ EWS ಮತ್ತು OBC ಅಭ್ಯರ್ಥಿಗಳು 600 ರೂ ಹಾಗೂ SC, ST, PWD ಮತ್ತು ಮಹಿಳಾ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ವಯೋಮಿತಿ: ಬ್ಯಾಂಕ್ ಆಫ್ ಬರೋಡಾದ ಖಾಲಿ ಇರುವ ಚೀಫ್ ಲರ್ನಿಂಗ್ ಆಫೀಸರ್ ಮತ್ತು ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 44 ರಿಂದ 55 ವರ್ಷದ ಒಳಗಿರಬೇಕು.
ಆಯ್ಕೆ ಪ್ರಕ್ರಿಯೆ: ಬ್ಯಾಂಕ್ ಆಫ್ ಬರೋಡಾದ ಖಾಲಿ ಇರುವ ಚೀಫ್ ಲರ್ನಿಂಗ್ ಆಫೀಸರ್ ಮತ್ತು ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನ ಅಥವಾ ಗುಂಪು ಸಂದರ್ಶನದ ಅಥವಾ ಇತರ ಆಯ್ಕೆಯ ಮಾನದಂಡಗಳ ಮೂಲಕ ಆಯ್ಕೆ ಮಾಡಲಾಗುವುದು.
Textbooks Row; ಸಚಿವರ ವರದಿ ಆಧರಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಎಂದ ಸಿಎಂ
ವೇತನ : ಬ್ಯಾಂಕ್ ಆಫ್ ಬರೋಡಾದ ಖಾಲಿ ಇರುವ ಚೀಫ್ ಲರ್ನಿಂಗ್ ಆಫೀಸರ್ ಮತ್ತು ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭ್ಯರ್ಥಿಯ ಅರ್ಹತೆಗಳು, ಅನುಭವ, ಒಟ್ಟಾರೆ ಸೂಕ್ತತೆ, ಅಭ್ಯರ್ಥಿಯ ಕೊನೆಯ ವೇತನ ಮತ್ತು ಮಾರುಕಟ್ಟೆ ಮಾನದಂಡದ ಆಧಾರದ ಮೇಲೆ ಮಾಸಿಕ ವೇತನ ದೊರೆಯಲಿದೆ.