Bank of Baroda Recruitment 2022 ಕೃಷಿ ಮಾರುಕಟ್ಟೆ ಅಧಿಕಾರಿ ಹುದ್ದೆಗೆ ನೇಮಕಾತಿ

By Suvarna News  |  First Published Apr 11, 2022, 4:12 PM IST

ಬ್ಯಾಂಕ್ ಆಫ್  ಬರೋಡಾ ಖಾಲಿ ಇರುವ  ಕೃಷಿ ಮಾರುಕಟ್ಟೆ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ.   ಅಭ್ಯರ್ಥಿಗಳು ಆನ್​ಲೈನ್  ಮೂಲಕ ಅರ್ಜಿ  ಸಲ್ಲಿಸಲು ಏಪ್ರಿಲ್​ 26  ಕೊನೆಯ ದಿನಾಂಕವಾಗಿದೆ. 


ಬೆಂಗಳೂರು (ಏ.11): ಬ್ಯಾಂಕ್ ಆಫ್  ಬರೋಡಾ (Bank of Baroda) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 26 ಕೃಷಿ ಮಾರುಕಟ್ಟೆ ಅಧಿಕಾರಿ (Agriculture Marketing Officer  ) ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು  ಆನ್​ಲೈನ್ (Online)​ ಮೂಲಕ ಅರ್ಜಿ  ಸಲ್ಲಿಸಲು ಎಪ್ರಿಲ್ 26  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅಧಿಕೃತ ವೆಬ್​ಸೈಟ್​ https://www.bankofbaroda.in/ ಗೆ ಭೇಟಿ ನೀಡಬಹುದು.

ಒಟ್ಟು 26 ಹುದ್ದೆಗಳ ಮಾಹಿತಿ ಇಂತಿದೆ:
ಪಾಟ್ನಾ: 04
ಚೆನ್ನೈ: 03
ಮಂಗಳೂರು: 02
ನವದೆಹಲಿ: 01
ರಾಜ್‌ಕೋಟ್: 02
ಚಂಡೀಗಢ: 04
ಎರ್ನಾಕುಲಂ: 02
ಕೋಲ್ಕತ್ತಾ: 03
ಮೀರತ್: 03
ಅಹಮದಾಬಾದ್: 02

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ಕೃಷಿ ಮಾರುಕಟ್ಟೆ ಅಧಿಕಾರಿ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ  ಕೃಷಿ/ತೋಟಗಾರಿಕೆ/ಪಶುಸಂಗೋಪನೆ/ಪಶುವೈದ್ಯಕೀಯ ವಿಜ್ಞಾನ/ ಡೈರಿ ವಿಜ್ಞಾನ/ ಮೀನುಗಾರಿಕೆ ವಿಜ್ಞಾನ/ ಮೀನುಗಾರಿಕೆ/ ಕೃಷಿಯಲ್ಲಿ ಪದವಿ. ಮಾರ್ಕೆಟಿಂಗ್ ಮತ್ತು ಸಹಕಾರ/ ಸಹಕಾರ ಮತ್ತು ಬ್ಯಾಂಕಿಂಗ್/ ಕೃಷಿ-ಅರಣ್ಯ/ಅರಣ್ಯ/ಕೃಷಿ ಜೈವಿಕ ತಂತ್ರಜ್ಞಾನ/ ಆಹಾರ ವಿಜ್ಞಾನ/ ಕೃಷಿ ವ್ಯವಹಾರ ನಿರ್ವಹಣೆ/ಆಹಾರ ತಂತ್ರಜ್ಞಾನ/ ಡೈರಿ ತಂತ್ರಜ್ಞಾನ/ ಕೃಷಿ ಇಂಜಿನಿಯರಿಂಗ್/ ರೇಷ್ಮೆ ಮತ್ತು 02 ವರ್ಷಗಳ ಪೂರ್ಣ ಸಮಯದ ಸ್ನಾತಕೋತ್ತರ ಪದವಿ ಅಥವಾ PGDM/MBA ನಲ್ಲಿ ಡಿಪ್ಲೊಮಾ ಮಾಡಿರಬೇಕು.  ಜೊತೆಗೆ 3 ವರ್ಷಗಳ ಅನುಭವ ಹೊಂದಿರಬೇಕು.

ZERODHA BMI CHALLENGE ಈ ಕಂಪನಿಯಲ್ಲಿ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಬೇಕು!

ವಯೋಮಿತಿ: ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ಕೃಷಿ ಮಾರುಕಟ್ಟೆ ಅಧಿಕಾರಿ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 25 ರಿಂದ 40 ವರ್ಷದ ಒಳಗಿರಬೇಕು.

ಅರ್ಜಿ ಶುಲ್ಕ: ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ಕೃಷಿ ಮಾರುಕಟ್ಟೆ ಅಧಿಕಾರಿ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ/EWS/OBC  ಅಭ್ಯರ್ಥಿಗಳು ₹600 ಮತ್ತು SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳು ₹100   ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ:  ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ಕೃಷಿ ಮಾರುಕಟ್ಟೆ ಅಧಿಕಾರಿ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ:  ಬ್ಯಾಂಕ್ ಆಫ್  ಬರೋಡಾದ ಖಾಲಿ ಇರುವ ಕೃಷಿ ಮಾರುಕಟ್ಟೆ ಅಧಿಕಾರಿ  ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ₹15 ಲಕ್ಷದಿಂದ ₹18ದವರೆಗೆ ವೇತನ ದೊರೆಯಲಿದೆ.

Udupi Anganwadi Recruitment 2022: ಅಂಗನವಾಡಿ ಕೇಂದ್ರದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ 

Bank of Baroda 26 ಬ್ರ್ಯಾಂಚ್‌ಗಳಲ್ಲಿ 159 ಹುದ್ದೆಗಳ ಭರ್ತಿಗೆ ನೇಮಕಾತಿ: ಬ್ಯಾಂಕ್ ಆಫ್  ಬರೋಡಾ (Bank of Baroda) ಖಾಲಿ ಇರುವ ಹುದ್ದೆಗಳ ಭರ್ತಿಗೆ  ನೇಮಕಾತಿ ಅಧಿಸೂಚನೆ ಹೊರಡಿಸಿದೆ. ದೇಶದಾದ್ಯಂತ ಇರುವ 26 ಬ್ರ್ಯಾಂಚ್‌ಗಳಲ್ಲಿ ಅಗತ್ಯ ಶಾಖೆಯ ಸ್ವೀಕೃತಿ ವ್ಯವಸ್ಥಾಪಕ (Branch Receivables Manager) ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.  ಒಟ್ಟು 159 ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ  ಸಲ್ಲಿಸಲು ಎಪ್ರಿಲ್ 14  ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಅಧಿಕೃತ ವೆಬ್​ಸೈಟ್​ https://www.bankofbaroda.in/ ಗೆ ಭೇಟಿ ನೀಡಬಹುದು.

click me!