ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ನವಜಾತ ಶಿಶು ಕೊನೆಗೂ ಸಿಕ್ತು!

By Web Desk  |  First Published Oct 27, 2019, 2:42 PM IST

ಆಸ್ಪತ್ರೆಯ ಸಿಬ್ಬಂದಿಯ ಯಡವಟ್ಟು| ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ನವಜಾತ ಶಿಶು ಪತ್ತೆ| ನೆಮ್ಮದಿಯ ನಿಟ್ಟುಸಿರು ಬಿಟ್ಟ ತಂದೆ-ತಾಯಿ ಹಾಗೂ ಪೋಷಕರು| ನೀಲಾವತಿ ಎಂಬವರು ಮೂರು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು| ಮಗುವನ್ನು ಐಸಿಯುನಲ್ಲಿ ಇರಿಸಲಾಗಿತ್ತು| 


ಬಳ್ಳಾರಿ(ಅ.27): ಆಸ್ಪತ್ರೆಯ ಸಿಬ್ಬಂದಿಯ ಯಡವಟ್ಟಿನಿಂದಾಗಿ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ನವಜಾತ ಶಿಶು ಪತ್ತೆಯಾಗಿದೆ. ಇದರಿಂದ ತೀವ್ರ ಕಂಗಾಲಾಗಿದ್ದ ತಂದೆ-ತಾಯಿ ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಆಗಿದ್ದಿಷ್ಟು:

Tap to resize

Latest Videos

ಬಳ್ಳಾರಿ ತಾಲೂಕಿನ ಶಿವಪುರ ಗ್ರಾಮದ ನೀಲಾವತಿ ಎಂಬವರು ಮೂರು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಶಿಶುವಿಗೆ ಹಾಲುಣಿಸಲು ತಾಯಿ ಬಳಿ ತರಲು ಬಾಣಂತಿ ನೀಲಾವತಿ ಅವರ ತಾಯಿ ಶನಿವಾರ ಬೆಳಗ್ಗೆ ಐಸಿಯುಗೆ ಹೋದಾಗ ಅಲ್ಲಿ ಮಗು ಇರಲಿಲ್ಲ. ಇದರಿಂದ ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿಷಯ ಗೊತ್ತಾಗುತ್ತಿದ್ದಂತೆಯೇ ಆಸ್ಪತ್ರೆ ಅಧೀಕ್ಷಕ ಡಾ. ಬಸರೆಡ್ಡಿ ಅವರು ಸಿಸಿ ಕ್ಯಾಮೆರಾ ವೀಕ್ಷಣೆಗೆ ಮುಂದಾಗಿದ್ದಾರೆ. ಅದೇ ಸಂದರ್ಭದಲ್ಲಿ ಪಕ್ಕದ ವಾರ್ಡ್‌ನಲ್ಲಿದ್ದ ಶಿಶುವಿಗೆ (ನೀಲಾವತಿ ಅವರ ಹಸುಗೂಸು) ಜ್ವರ ಬಂದಿದೆ ಎಂದು ಐಸಿಯು ವಾರ್ಡ್‌ಗೆ ತಂದಾಗ ಅದನ್ನು ನರ್ಸ್ ಗುರುತಿಸಿ, ನೀಲಾವತಿ ಅವರ ತಾಯಿಗೆ ನೀಡಿದ್ದಾರೆ. 

ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶು ನಾಪತ್ತೆ!

ಆಸ್ಪತ್ರೆಯ ಅಟೆಂಡರ್ ಕಣ್ತಪ್ಪಿನಿಂದ ಹಾಲುಣಿಸಲು ಶಿಶು ಕೊಡುವಾಗ ಅದಲು ಬದಲಾಗಿದೆ. ಶಿವಪುರದ ನೀಲಾವತಿ ಅವರಿಗೆ ನೀಡುವ ಬದಲು ಸಿರುಗುಪ್ಪ ತಾಲೂಕಿನ ಮುದ್ದಟನೂರು ಗ್ರಾಮದ ರೇಷ್ಮಾ ಎಂಬ ಬಾಣಂತಿಗೆ ಮಗು ನೀಡಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿತ್ತು.

click me!