ಸಂಡೂರು ಬಳಿ ಭೀಕರ ಅಪಘಾತ: ಮೂವರ ದುರ್ಮರಣ

Published : Oct 28, 2019, 12:41 PM IST
ಸಂಡೂರು ಬಳಿ ಭೀಕರ ಅಪಘಾತ: ಮೂವರ ದುರ್ಮರಣ

ಸಾರಾಂಶ

ಬೊಲೆರೊ ಕ್ಯಾಂಟರ್ ಮತ್ತು ಲಾರಿ ಮಧ್ಯೆ ಅಪಘಾತ| ಮೂವರು ಸಾವನ್ನಪ್ಪಿ, ಮೂವರಿಗೆ ಗಾಯ| ಸಂಡೂರು ತಾಲೂಕಿನ ಬಾಬ ಕ್ರಾಸ್ ಬಳಿ ನಡೆದ ಘಟನೆ| ಯಶವಂತ‌ನಗರದಿಂದ ತೋರಣಗಲ್ಲಿನ‌ ಜಿಂದಾಲ್ ಹೋಗುತ್ತಿರುವ ವೇಳೆ ನಡೆದ ಅವಘಡ|

ಬಳ್ಳಾರಿ(ಅ.28): ದೀಪಾವಳಿ ಅಮವಾಸ್ಯೆ ದಿನದಂದೇ ಗಣಿನಾಡಿನಲ್ಲಿ ಸೂತಕ ಛಾಯೆ ಆವರಿಸಿದೆ. ಹೌದು, ಬೊಲೆರೊ ಕ್ಯಾಂಟರ್ ಮತ್ತು  ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸಂಡೂರು ತಾಲೂಕಿನ ಬಾಬ ಕ್ರಾಸ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೃತರನ್ನು ಬುಸ್ಸಿ (21), ದಾದಾ ಕಲಂದರ (31), ಅಸ್ಲಾಂ (25) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಂಡೂರು ತಾಲೂಕಿನ ಯಶವಂತನಗರದ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ದರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪರಶುರಾಮ (28) ಮತ್ತು ಮನ್ಸೂರ್ (30) ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇರ್ಫಾನ್ (32) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಂಡೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. 

ಯಶವಂತ‌ನಗರದಿಂದ ತೋರಣಗಲ್ಲಿನ‌ ಜಿಂದಾಲ್ ಹೋಗುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ. ಈ ಸಂಬಂಧ  ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಸಮಸ್ಯೆಗಳ ನಿವಾರಣೆ, ಸವಾಲುಗಳಿಗೆ ಧಾರ್ಮಿಕ ಗುರುಗಳಿಂದ ಪರಿಹಾರ: ಬಿ.ವೈ.ವಿಜಯೇಂದ್ರ
ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!